ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲ್ ಬಾಗ್ ನಲ್ಲಿ ಫೋಟೊಶೂಟ್ ನಿಷೇಧ!

|
Google Oneindia Kannada News

Recommended Video

ಲಾಲ್ ಬಾಗ್ ನಲ್ಲಿ ಫೋಟೋಶೂಟ್ ಬ್ಯಾನ್ | Oneindia Kannada

ಬೆಂಗಳೂರು, ಮಾರ್ಚ್ 3 : ಈಗಾಗಲೇ ಕಬ್ಬನ್ ಪಾರ್ಕ್ ನಲ್ಲಿ ವಾಣಿಜ್ಯ ಉದ್ದೇಶದ ಛಾಯಾಗ್ರಹಣವನ್ನು ನಿಷೇಧಿಸಿದ್ದು, ಇದೀಗ ಲಾಲ್ ಬಾಗ್ ನಲ್ಲಿಯೂ ಚಿತ್ರೀಕರಣವನ್ನು ನಿಷೇಧಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

ಸಸ್ಯ ಕಾಶಿ ಲಾಲ್ ಬಾಗ್ ನಲ್ಲಿ ಪ್ರಕೃತಿ ಸೊಬಗನ್ನು ಆಸ್ವಾದಿಸುವುದನ್ನು ಬಿಟ್ಟು ಹಲವರು ವೈಭವೀಕರಣದ ಪೋಟೊ ಶೂಟಿಂಗ್ ಮೂಲಕ ಉದ್ಯಾನದ ಸುಂದರ ತಾಣಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು. ಕೆಲವರಂತೂ ಫ್ಲ್ಯಾಷ್ ಹಾಕಿಕೊಂಡು ದೊಡ್ಡ ದೊಡ್ಡ ಕ್ಯಾಮರಾಗಳನ್ನು ತಂದು ಫೋಟೊ ಶೂಟ್ ಮಾಡುತ್ತಿದ್ದರು. ಇದರಿಂದ ಉದ್ಯಾನದ ಪರಿಸರಕ್ಕೆ ತೊಂದರೆಯಾಗುತ್ತಿತ್ತು.

ಕಬ್ಬನ್ ಪಾರ್ಕ್ ನಲ್ಲಿ ಫೋಟೋ ಶೂಟ್ ನಿರ್ಬಂಧ?ಕಬ್ಬನ್ ಪಾರ್ಕ್ ನಲ್ಲಿ ಫೋಟೋ ಶೂಟ್ ನಿರ್ಬಂಧ?

ಪ್ರಖರವಾದ ಕ್ಯಾಮೆರಾ ಫ್ಲ್ಯಾಷ್ ಮತ್ತು ಲೈಟಿಂಗ್ಸ್ ಬಳಸುವುದರಿಂದ ಜೇನು, ಸೀಮೆ ಇರುವೆ ಮತ್ತಿತರೆ ಜೀವ ಸಂಕುಲಕ್ಕೆ ತೀವ್ರ ಹಾನಿಯಾಗುತ್ತಿತ್ತು ಎಂದು ತೋಗಾರಿಕೆ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.

Lalbagh

ಪ್ರೀ ವೆಡ್ಡಿಂಗ್ ಹಾಗೂ ಪ್ರೆಗ್ನೆನ್ಸಿ ಫೋಟೊಶೂಟ್ ಗಾಗಿ ಬರುವವರು ಉದ್ಯಾನದಲ್ಲಿಯೇ ಬಟ್ಟೆ ಬದಲಿಸಿ, ಛಾಯಾಗ್ರಹಣ ಮಾಡಿಸಿಕೊಳ್ಳುತ್ತಿದ್ದರು. ಇದರಿಂದ ಉದ್ಯಾನಕ್ಕೆ ಮಕ್ಕಳೊಂದಿಗೆ ಬರುವ ಪ್ರವಾಸಿಗರಿಗೆ ಮುಜುಗರ ಉಂಟಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು ಎಂದು ಹೇಳಿದರು.

Lalbagh

ವಾಕಥಾನ್ , ಮ್ಯಾರಥಾನ್ ಗಳಿಗೂ ಲಾಲ್‌ಬಾಗ್‌ನಲ್ಲಿ ಅವಕಾಶವಿಲ್ಲ. ಉದ್ಯಾನದ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿ ದ್ದೇವೆ. ಪ್ರವಾಸಿಗರು ಚಿತ್ರ ತೆಗೆದುಕೊಳ್ಳುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

English summary
Department of horticulture has decided to ban on commercial video or photo shoot in Lalbagh. It was told that the high resolution flash lights were distributing honey bees in the park during the shooting of any kind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X