ಪೀಣ್ಯ ಬಸವೇಶ್ವರ ನಿಲ್ದಾಣ ಪ್ರಯಾಣಿಕರಿಲ್ಲದೆ ಭಣಭಣ!

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 16: ಸುಮಾರು ನಾಲ್ಕು ವರ್ಷಗಳ ಬಳಿಕ ಬಸವೇಶ್ವರ ಬಸ್ ನಿಲ್ದಾಣ ನಿಲದಾಣಕ್ಕೆ ಮರುಜೀವ ದೊರಕಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಪ್ರಯಾಣಿಕರಿಗೆ ಸೌಕರ್ಯ ಹೊಂದಿರುವ ಈ ನಿಲ್ದಾಣಕ್ಕೆ ಒಂದೇ ಒಂದು ಬಿಎಂಟಿಸಿ ಬಸ್ ಸಂಪರ್ಕವಿಲ್ಲದಿರುವ ಕಾರಣದಿಂದ ಮತ್ತೆ ವಿಫಲವಾಗುವ ಸಾಧ್ಯತೆ ಇದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಜ್ಯದ ನಾನಾ ಭಾಗಗಳಿಗೆ ತೆರಳುವ 980 ಬಸ್ ಗಳ ಪೈಕಿ 60 ಬಸ್ ಗಳನ್ನು ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಕೆಎಸ್ ಆರ್ ಟಿಸಿ ಏ.12ರಂದು ವರ್ಗಾಯಿಸಿತ್ತು.

ಪೀಣ್ಯ ನಿಲ್ದಾಣದಿಂದ ಪುನಃ ಬಸ್‌ಗಳ ಸೇವೆ ಆರಂಭ!

ಈ 60 ಬಸ್ ಗಳಲ್ಲಿ ಏ.12ರಂದು 53 ಪ್ರಯಾಣಿಕರು ಮತ್ತು ಏ.13ರಂದು ಕೇವಲ 41 ಪ್ರಯಾಣಿಕರು ಪ್ರಯಾಣಿಸಿರುವುದು ನಿಲ್ದಾಣಕ್ಕೆ ಸೂಕ್ತ ಸಂಪರ್ಕ ಕೊರತೆ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಬಿಎಂಟಿಸಿ ಸಂಪರ್ಕ ದೊರಕಿದರೆ ನಿಲ್ದಾಣಕ್ಕೆ ಹೆಚ್ಚಿನ ಪ್ರಯಾಣಿಕರು ಬರುವುದರಲ್ಲಿ ಸಂಶಯವೇ ಇಲ್ಲ ಎಂದು ಕೇಂದ್ರ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

No passengers in Peenya Basaveshwara bus terminal

ಪ್ರಸ್ತುತ ಚಿಕ್ಕಮಗಳೂರು, ಹುಬ್ಬಳ್ಳಿ, ಶಿವಮೊಗ್ಗ, ತುಮಕೂರು, ರಾಯಚೂರು, ಹಾಸನ, ದಾವಣಗೆರೆ, ಬೆಳಗಾವಿ, ಚಿಕ್ಕಮಗಳೂರು, ಮಂಗಳೂರು, ಹುಬ್ಬಳ್ಳಿ, ಪಾವಗಡ, ಹೊಸದುರ್ಗ, ಸಕಲೇಶಪುರ, ತಿಪಟೂರು, ಅರಕಲಗೋಡು, ತುರವೇಕೆರೆ, ಮಡಿಕೇರಿ, ಶಿವಮೊಗ್ಗ, ಕುಂದಾಪುರ ಇನ್ನಿತರೆ ಊರುಗಳಿಗೆ ಈ ನಿಲ್ದಾಣದಿಂದಲೇ ಬಸ್ ಆರಂಭವಾಗಲಿದೆ.

ಪಾದಚಾರಿ ಮಾರ್ಗವೇ ಇಲ್ಲ: ತುಮಕೂರು ಹೆದ್ದಾರಿಯಿಂದ 800 ಮೀ. ಒಳಗೆ ಬಂದರೆ ಬಸ್ವೇಶ್ವರ ಬಸ್ ನಿಲ್ದಾಣವಿದೆ. ಮುಖ್ಯ ರಸ್ತೆಯಿಂದ ಬಸ್ ನಿಲ್ದಾಣದವರೆಗೆ ನಡೆದು ಹೋಗಲು ಸೂಕ್ತ ಪಾದಚಾರಿ ಮಾರ್ಗವೇ ಇಲ್ಲ.ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣದಲ್ಲಿ ಇಳಿದ ಪ್ರಯಾಣಿಕರು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Recently KSRTC diverted some bus routes to Basaveahwara bus terminal. But they're are no passengers in the bus terminal.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ