ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌ಡಿ ರೇವಣ್ಣ ವಿರುದ್ಧ ಯಾರೂ ದೂರು ನೀಡಿಲ್ಲ ದಿನೇಶ್ ಗುಂಡೂರಾವ್ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ನವೆಂಬರ್ 29: ಎಚ್‌ಡಿ ರೇವಣ್ಣ ವಿರುದ್ಧ ಕಾಂಗ್ರೆಸ್ ಮುಖಂಡರು ಯಾವುದೇ ದೂರು ನೀಡಿಲ್ಲ, ಕಾಂಗ್ರೆಸ್‌ ಗೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದ್ದಾರೆ ಅಷ್ಟೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌ಡಿ ರೇವಣ್ಣ ವಿರುದ್ಧ ಕಾಂಗ್ರೆಸ್ ಮುಖಂಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರಿಗೆ ದೂರು ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ, ಆದರೆ ಯಾವುದೇ ದೂರು ನೀಡಿಲ್ಲ ಆದರೆ ಕಾಂಗ್ರೆಸ್‌ ಗೆ ಪ್ರಾತಿನಿಧ್ಯ ಬೇಕು ಎಂದು ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ವಿಧಾನಸೌಧವನ್ನು ಹಾಸನಕ್ಕೆ ಶಿಫ್ಟ್ ಮಾಡಿದರೆ ಆಶ್ಚರ್ಯವಿಲ್ಲ: ಬಿಜೆಪಿ ಟೀಕೆ ವಿಧಾನಸೌಧವನ್ನು ಹಾಸನಕ್ಕೆ ಶಿಫ್ಟ್ ಮಾಡಿದರೆ ಆಶ್ಚರ್ಯವಿಲ್ಲ: ಬಿಜೆಪಿ ಟೀಕೆ

ಹಾಸನದಲ್ಲಿ ಹೆಚ್ಚಿನ ಕೆಲಸಗಳು ಆಗುತ್ತಿಲ್ಲ ಎಂಬುದು ಕಾಂಗ್ರೆಸ್ ಮುಖಂಡರ ಆರೋಪವಾಗಿದೆ, ಪಕ್ಷ ಸಂಘಟನೆ, ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚೆ ನಡೆದಿದೆಯಷ್ಟೇ ಎಂದರು. ಮಾಜಿ ಸಚಿವ ಎ ಮಂಜು ಅವರ ಪುತ್ರ ಇಂದು ಭೇಟಿ ಮಾಡಿದ್ದರು, ಮಂಜು ಕಾಂಗ್ರೆಸ್ ಬಿಡುತ್ತಾರೆ ಎಂಬುದು ಕೇವಲ ಊಹಾಪೋಹದ ಮಾತು ಯಾರೂ ಇದಕ್ಕೆ ಕಿವಿಗೊಡಬಾರದು, ವಾಸ್ತವ ಅಂದರೆ ಬಿಜೆಪಿ ,ಮುಳುಗುವ ದೋಣಿಯಾಗಿದೆ ಎಂದರು.

No one give complaint against revanna in the party

ಇಂಧನ ಖಾತೆಗಾಗಿ ರೇವಣ್ಣ-ಡಿಕೆಶಿ ನಡುವೆ ಪೈಪೋಟಿ ಇತ್ತು: ಕುಮಾರಸ್ವಾಮಿ ಇಂಧನ ಖಾತೆಗಾಗಿ ರೇವಣ್ಣ-ಡಿಕೆಶಿ ನಡುವೆ ಪೈಪೋಟಿ ಇತ್ತು: ಕುಮಾರಸ್ವಾಮಿ

ಕೆಲವು ಆಂತರಿಕ ವಿಚಾರಗಳಿವೆ ಅವುಗಳ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ, ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಮಾಡುತ್ತೇವೆ, ಎರಡೂ ಪಕ್ಷದ ನಾಯಕ ಸಲಹೆ ಪಡೆದು ಒಂದು ದಿನಾಂಕ ನಿಗದಿ ಮಾಡುತ್ತೇವೆ ಎಂದು ತಿಳಿಸಿದರು.

English summary
KPCC president Dinesh Gundurao clarified that congress leaders didn't given any complaint against JDS minister HD Revanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X