ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸ್ ಕಮಿಷನರ್ ನಿಂದ ಸಾರ್ವಜನಿಕ ಸಂದೇಶ

|
Google Oneindia Kannada News

ಬೆಂಗಳೂರು, ಜನವರಿ1: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಎಂ ಜಿ ರಸ್ತೆಯಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಮಾಹಿತಿ ಸತ್ಯಕ್ಕೆ ದೂರವಾದದ್ದು, ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಎಫ್ ಐ ಆರ್ ಕೂಡ ದಾಖಲಾಗಿಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.

ಹೊಸ ವರ್ಷ ಸಂಭ್ರಮಾಚರಣೆ ಸುಸೂತ್ರವಾಗಿ ನಡೆದಿದೆ: ರಾಮಲಿಂಗಾ ರೆಡ್ಡಿಹೊಸ ವರ್ಷ ಸಂಭ್ರಮಾಚರಣೆ ಸುಸೂತ್ರವಾಗಿ ನಡೆದಿದೆ: ರಾಮಲಿಂಗಾ ರೆಡ್ಡಿ

ಹೊಸ ವರ್ಷ ಪಾರ್ಟಿ ಬಳಿಕ ಸೋಮವಾರ ನಸುಕಿನ ಜಾವ ಎಂಜಿ ರಸ್ತೆಯಲ್ಲಿ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ಆಕೆ ಚೀರಾಡುತ್ತಿದ್ದಳು ಎಂದು ಶಂಕಿಸಲಾಗಿದೆ. ಆದರೆ ಅಂತಹ ಘಟನೆ ಕುರಿತಂತೆ ಯಾವುದೇ ದೂರು ದಾಖಲಾಗಿಲ್ಲ. ನಗರ ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಿದ್ದಾರೆ. ಆದರೆ ಎಂಜಿ ರಸ್ತೆ ಅಥವಾ ಬ್ರಿಗೇಡ್ ರಸ್ತೆಯಲ್ಲಿ ಇಂತಹ ಯಾವುದೇ ಘಟನೆಗಳು ಕಂಡುಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

No molestation in Bengaluru: COP clarified

ಮಹಿಳೆಯರು ನಿರ್ಭೀತಿಯಿಂದ ರಾತ್ರಿಯಿಡಿ ನಗರದ ಎಲ್ಲೆಡೆ ಅದರಲ್ಲೂ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಓಡಾಡಲು ಯಾವುದೇ ತೊಂದರೆಯಾಗದಂತೆ ಸಿಸಿಟಿವಿ, ಬ್ಯಾರಿಕೇಡ್ ಮಾರ್ಗ ಬದಲಾವಣೆ ಮುಂತಾದ ಕ್ರಮ ಕೈಗೊಳ್ಳಲಾಗಿತ್ತು.

ಹೊಸ ವರ್ಷಾಚರಣೆ ಅಂಗೌಆಗಿ ಕಳೆದ ವರ್ಷದ ದುರ್ಘಟನೆ ಮರುಕಳಿಸದಂತೆ ಪೊಲೀಸರು ಭಾರಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಸುಮಾರು15 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಚಾರ ಪೊಲೀಸರು ಡ್ರಿಂಕ್ ಆಂಡ್ ಡ್ರೈವ್ ಪರಿಶೀಲನೆ ವೇಳೆ 1300 ಜನ ಮದ್ಯಪಾನ ಸೇವಿಸಿ ಚಾಲನೆ ಮಾಡುತ್ತಿರುವುದು ಪತ್ತೆಯಾಗಿದೆ.

ಹೊಸ ವರ್ಷದ ದಿನದಂದು ಬೆಂಗಳೂರಿನಲ್ಲಿ ತ್ರಿಬಲ್ ಮರ್ಡರ್ಹೊಸ ವರ್ಷದ ದಿನದಂದು ಬೆಂಗಳೂರಿನಲ್ಲಿ ತ್ರಿಬಲ್ ಮರ್ಡರ್

ಬೆಂಗಳೂರು ಸಂಚಾರ ಪೊಲೀಸರು ರಾತ್ರಿ 9 ಗಂಟೆಯಿಂದ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಕಾರ್ಯಾಚರಣೆ ವೇಳೆ ಪತ್ತೆಯಾದ ಎಲ್ಲರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರು ಪೊಲೀಸರು ನೀಡಿದ ಭದ್ರತೆ ಹಾಗೂ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ವಿಚಾರ ಕುರಿತು ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ, ವರ್ಷಾಚರಣೆ ಯಾವುದೇ ತೊಡಕುಗಳಿಲ್ಲದೆ ಪೊಲೀಸರ ಭದ್ರತೆಯಲ್ಲಿ ಸರಾಗವಾಗಿ ನಡೆದಿದೆ ಸ್ಪಷ್ಟನೆ ನೀಡಿದ್ದಾರೆ.

English summary
Bengaluru Police commissioner T Suneel kumar said that,There have been no cases of molestation incident happened during celebration of new year. This time, on the eve of new year Bengaluru has witnessed smooth and calm celebration and Bengaluru police were successfully managed the event in entire city without reported a single untoward incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X