ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನಮ್ಮ ಮೆಟ್ರೋ' ಸಿಬ್ಬಂದಿ ಮುಷ್ಕರ: ಮೆಟ್ರೋ ರೈಲು ಸೇವೆ ಸ್ಥಗಿತ

ನಮ್ಮ ಮೆಟ್ರೋ ಸಿಬ್ಬಂದಿ ಹಾಗೂ ಕೆಎಸ್ ಐಎಸ್ಎಫ್ ಸಿಬ್ಬಂದಿ ನಡುವೆ ಜಗಳ. ಮೆಟ್ರೋ ಸಿಬ್ಬಂದಿ ಬಂಧನ ಮಾಡಿರುವ ಕೆಎಸ್ ಐಎಸ್ಎಫ್. ಈ ಹಿನ್ನೆಲೆಯಲ್ಲಿ ಮೆಟ್ರೋ ಸಿಬ್ಬಂದಿ ಪ್ರತಿಭಟನೆ. ಮೆಟ್ರೋ ಸೇವೆಗಳಿಗೆ ತಾತ್ಕಾಲಿಕ ನಿಲುಗಡೆ.

|
Google Oneindia Kannada News

ಬೆಂಗಳೂರು, ಜುಲೈ 7: 'ನಮ್ಮ ಮೆಟ್ರೋ'ದ ಸಿಬ್ಬಂದಿ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಸಿಬ್ಬಂದಿ (ಕೆಎಸ್ ಐಎಸ್ ಎಫ್) ಸಿಬ್ಬಂದಿ ನಡುವೆ ಜುಲೈ 6ರ (ಗುರುವಾರ) ಬೆಳಗ್ಗೆ ನಡೆದಿದ್ದ ಜಗಳದ ಹಿನ್ನೆಲೆಯಲ್ಲಿ ಮೆಟ್ರೋ ಸಿಬ್ಬಂದಿಯು ಪ್ರತಿಭಟನೆ ನಡೆಸುತ್ತಿದ್ದು, ಶುಕ್ರವಾರ (ಜುಲೈ 7) ಆರಂಭವಾಗಬೇಕಿದ್ದ ಮೆಟ್ರೋ ಸೇವೆ ತಡೆಯುಂಟಾಗಿದೆ.

ಕನ್ನಡಿಗರಿಗೆ ಗೆಲುವು: ನಮ್ಮ ಮೆಟ್ರೋ ಹಿಂದಿ ಬೋರ್ಡ್ ಗೆ ಬಿತ್ತು ಮಸಿಕನ್ನಡಿಗರಿಗೆ ಗೆಲುವು: ನಮ್ಮ ಮೆಟ್ರೋ ಹಿಂದಿ ಬೋರ್ಡ್ ಗೆ ಬಿತ್ತು ಮಸಿ

ಮೆಜೆಸ್ಟಿಕ್ ಸಮೀಪದ ಸೆಂಟ್ರಲ್ ಕಾಲೇಜು ನಿಲ್ದಾಣದ ಬಳಿ ಮೆಟ್ರೋ ಸಿಬ್ಬಂದಿ ಹಾಗೂ ಕೆಎಸ್ ಐಎಸ್ಎಫ್ ಸಿಬ್ಬಂದಿ (ಪೊಲೀಸ್ ಸಿಬ್ಬಂದಿ) ನಡುವೆ ವಾಗ್ವಾದವಾಗಿ ಅದು ದೊಡ್ಡ ಜಗಳ, ಮಾರಾಮಾರಿಗೆ ಕಾರಣವಾಯಿತು.

No Metro Service in Bengaluru as Namma Metro Staff go for strike

ಆನಂತರ, ಹಲಸೂರು ಪೊಲೀಸ್ ಠಾಣೆಯಲ್ಲಿ ಕೆಎಸ್ ಐಎಸ್ಎಫ್ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇರೆಗೆ ಹಲಸೂರು ಗೇಟ್ ಠಾಣೆ ಪೊಲೀಸರು ಕೆಲ ಮೆಟ್ರೋ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಬಂಧಿತರ ಬಿಡುಗಡೆಗೆ ಆಗ್ರಹಿಸಿ, ಮೆಟ್ರೋ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಗುಡುಗಿದ ಸಿದ್ದರಾಮಯ್ಯಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಮ್ಮ ಮೆಟ್ರೋ ಸಿಬ್ಬಂದಿಯನ್ನು ಸಂಪರ್ಕಿಸಲು 'ಒನ್ ಇಂಡಿಯಾ' ನಡೆಸಿದ ಪ್ರಯತ್ನಗಳು ಫಲ ನೀಡಿಲ್ಲ. ಇನ್ನು, ನಮ್ಮ ಮೆಟ್ರೋ ಅಧಿಕೃತ ವೆಬ್ ಸೈಟ್ ಅನ್ನೂ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.

ಜಗಳವಾಗಿದ್ದೇಕೆ?
ರೈಲು ಪ್ರಯಾಣಕ್ಕಾಗಿ ಸೆಂಟ್ರಲ್ ಕಾಲೇಜು ನಿಲ್ದಾಣವಾದ ಸರ್.ಎಂ. ವಿಶ್ವೇಶ್ವರಯ್ಯ ನಿಲ್ದಾಣಕ್ಕೆ ಕೆಎಸ್ ಐಎಸ್ಎಫ್ ಆಗಮಿಸಿದ್ದಾಗ, ಮೆಟ್ರೋ ಸಿಬ್ಬಂದಿ ಎಂದಿನಂತೆ ತಪಾಸಣೆಗೆ ಮುಂದಾಗಿದ್ದರು.

ಆದರೆ, ತಪಾಸಣೆಗೆ ಕೆಎಸ್ ಐಎಸ್ಎಫ್ ಸಿಬ್ಬಂದಿ ನಿರಾಕರಿಸಿದ ಹಿನ್ನೆಲೆಯಲ್ಲಿ ಜಗಳ ಶುರುವಾಗಿದೆ. ಇದು ವಿಕೋಪಕ್ಕೆ ತಿರುಗಿ, ಕೆಎಸ್ ಐಎಸ್ಎಫ್ ಹಾಗೂ ಮೆಟ್ರೋ ಸಿಬ್ಬಂದಿಯ ನಡುವೆ ತಳ್ಳಾಟವೂ ನಡೆದ್ದು, ದೊಡ್ಡ ಗಲಾಟೆಯೇ ಆಯಿತು. ತಮ್ಮ ಮೇಲೆ ಹಲ್ಲೆ ಮಾಡಿದರೆಂದು ಆರೋಪಿಸಿರುವ ಕೆಎಸ್ ಐಎಸ್ಎಫ್ ಸಿಬ್ಬಂದಿ, ನಮ್ಮೆ ಮೆಟ್ರೋದ ಕೆಲ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಇದು ಮೆಟ್ರೋ ಸಿಬ್ಬಂದಿಯ ವಿವಾದಕ್ಕೆ ಕಾರಣವಾಗಿದೆ.

ಈ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎಂದಿನಂತೆ ಜುಲೈ 7ರಂದು ಬೆಳಗ್ಗೆ 5 ಗಂಟೆಗೆ ಆರಂಭವಾಗಬೇಕಿದ್ದ ಮೆಟ್ರೋ ಸೇವೆ ನಿಂತು ಹೋಗಿದೆ. ಈ ಬಗ್ಗೆ ಮೆಟ್ರೋ ಸಂಸ್ಥೆಯ ಅಧಿಕಾರಿಗಳು ಪ್ರತಿಭಟನೆಯ ಸ್ಥಳಕ್ಕಾಗಮಿಸಿ ಸಂಧಾನ ಮಾಡಲೆತ್ನಿಸಿದರೂ, ಅದು ಫಲ ನೀಡಿಲ್ಲ.

ಬಂಧಿಸಲ್ಪಟ್ಟಿರುವ ಮೆಟ್ರೋ ಸಿಬ್ಬಂದಿಯ ಬಿಡುಗಡೆ ಆಗುವವರಿಗೂ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಮೆಟ್ರೋ ಸಿಬ್ಬಂದಿ ಹೇಳಿದ್ದಾರೆ. ಹಾಗಾಗಿ, ಶುಕ್ರವಾರದ ಬೆಳಗಿನ ಮೆಟ್ರೋ ರೈಲು ಸೇವೆ ತಾತ್ಕಾಲಿಕವಾಗಿ ತಡೆಹಿಡಿಯಲ್ಪಟ್ಟಿದೆ.

English summary
As Namma Metro staff began strike to protest agaisnt arrest of some metro staff by KSISF, hit the service of Metro rail in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X