ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯಕೀಯ ಬಿಲ್ ಪಾವತಿಗೆ ತಾತ್ಕಾಲಿಕ ತಡೆ: ಸಂಕಷ್ಟದಲ್ಲಿ ಬಡ ರೋಗಿಗಳು

|
Google Oneindia Kannada News

ಬೆಂಗಳೂರು, ಏಪ್ರಿಲ್06: ವಿಧಾನಸಭಾ ಚುನಾವಣೆ ನೀತಿ ಸಂಹಿತೆಯಿಂದಾಗಿ ಬಿಬಿಎಂಪಿಯಿಂದ ಆರ್ಥಿಕ ನೆರವು ಬಯಸಿದ್ದ ಬಡ ರೋಗಿಗಳು ಆತಂಕ್ಕೀಡಾಗಿದ್ದಾರೆ.

ವರ್ಷಕ್ಕೆ 5 ಲಕ್ಷದವರೆಗೆ ಆಸ್ಪತ್ರೆ ಖರ್ಚು ಭರಿಸುವ ಯೋಜನೆ ಘೋಷಣೆವರ್ಷಕ್ಕೆ 5 ಲಕ್ಷದವರೆಗೆ ಆಸ್ಪತ್ರೆ ಖರ್ಚು ಭರಿಸುವ ಯೋಜನೆ ಘೋಷಣೆ

ಚುನಾವಣೆ ದಿನಾಂಕ ಘೋಷಣೆಯಾದ ನಂತರ ನಗರದಲ್ಲಿ ಯಾವುದೇ ಹೊಸ ಕಾಮಗಾರಿ ಘೋಷಿಸುವಂತಿಲ್ಲ ಮತ್ತು ಆರಂಭಿಸುತ್ತಿಲ್ಲ. ಜತೆಗೆ ಬಿಬಿಎಂಪಿಯಿಂದ ಬಡ ರೋಗಿಗಳಿಗೆ ನೀಡಲಾಗುವ ಆರ್ಥಿಕ ನೆರವಿಗೂ ಬ್ರೇಕ್ ಬಿದ್ದಿದೆ .

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ನೀತಿ ಸಂಹಿತೆ ಜಾರಿಯಲ್ಲಿ ಇರುವ ಹಿನ್ನೆಲೆಯಲ್ಲಿ ವೈದ್ಯಕೀಯ ವೆಚ್ಚದ ಬಿಲ್ ಮೊತ್ತ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೆ, ಹೊಸದಾಗಿ ಬಿಲ್ ನೀಡುವವರಿಂದ ಪಡೆಯದಿರುವಂತೆ ಅಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಮೇಯರ್ ಸೂಚನೆ ನೀಡಿದ್ದಾರೆ.

No medical reclaim for poors from BBMP

ಹೀಗಾಗಿ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿರುವವರು ಚುನಾವಣೆ ಮುಗಿಯುವವರೆಗೂ ಕಾಯಬೇಕಿದೆ.

ಹಳೆ ಬಿಲ್‌ಗಳಿಗಷ್ಟೇ ಆದ್ಯತೆ: ಎರಡು ತಿಂಗಳ ಹಿಂದೆ ಬಿಬಿಎಂಪಿಯಿಂದ ಆರ್ಥಿಕ ನೆರವು ಬಯಸಿ ಅಂದಾಜು 9ಕೋಟಿ ರೂ. ಮೊತ್ತದ ಬಿಲ್‌ ಗಳು ಸಲ್ಲಿಕೆಯಾಗಿದ್ದವು. ಈ ಬಿಲ್ ಗಳು ಎರಡು ವರ್ಷದಿಂದ ಸಲ್ಲಿಕೆಯಾಗಿದ್ದು, ಪ್ರಸ್ತುತ ಆ ಬಿಲ್ ಗಳನ್ನು ಪಾವತಿಸಲಾಗುತ್ತಿದೆ. ಅದನ್ನು ಹೊರತುಪಡಿಸಿ ಹೊಸ ಬಿಲ್ ಪಡೆಯುವದನ್ನು ನಿಷೇಧಿಸಲಾಗಿದೆ.

English summary
Election code of conduct hits the poor patients and their family too. Commission instructed to BBMP that don't reimbursement the medical bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X