ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಸ್ಐಗೆ ವಿದೇಶಿ ಹೆಲ್ಮೇಟ್ ಅಡ್ಡಿ: ಪೊಲೀಸರಿಗೆ ಗೊಂದಲ

|
Google Oneindia Kannada News

ಬೆಂಗಳೂರು, ಜನವರಿ 24 : ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನ ಐಎಸ್ಐ ಮಾರ್ಕ್ ಇರುವ ಹೆಲ್ಮೆಟ್ ಅನ್ನು ಫೆಬ್ರವರಿ 1 ರಿಂದ ಕಡ್ಡಾಯಗೊಳಿಸಲು ಸಿದ್ಧವಾಗಿರುವ ಬೆಂಗಳೂರು ಪೊಲೀಸರಿಗೆ ತಾಂತ್ರಿಕ ತೊಡಕುಗಳು ಎದುರಾಗಿದೆ.

ಬೆಂಗಳೂರಿನ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿದೇಶಿ ಹೆಲ್ಮೆಟ್ ಗಳ ಮೇಲೆ ಐಎಸ್ಐ ಮಾರ್ಕ್ ಇಲ್ಲ. ಹೀಗಾಗಿ ಇದರ ಗುಣಮಟ್ಟ ಅಳೆಯುವ ಮಾನದಂಡ ಸಂಚಾರ ಪಲೀಸರಿಗೆ ಗೊತ್ತಿಲ್ಲ. ಈ ಬಗ್ಗೆ ಸಾರಿಗೆ ಇಲಾಖೆಗೆ ಸ್ಪಷ್ಟನೆ ಕೋರಿದೆ. ಇದೇ ವೇಳೆ ಟ್ರಾಫಿಕ್ ಪೊಲೀಸರ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್ ಐ ಬರಿಗಣ್ಣಲ್ಲಿ ನೋಡಿ ಗುಣಮಟ್ಟ ಪರೀಕ್ಷೆ ಮಾಡಲು ಸಾಧ್ಯವಿಲ್ಲ. ಲ್ಯಾಬ್ ನಲ್ಲಿ ಮಾತ್ರ ಪತ್ತೆ ಹಚ್ಚಲು ಸಾಧ್ಯ ಎಂದಿದೆ.

ಅರ್ಧ ಹೆಲ್ಮೆಟ್‌ ಗೊಂದಲಕ್ಕೆ ತೆರೆ ಎಳೆದ ಸಾರಿಗೆ ಇಲಾಖೆಅರ್ಧ ಹೆಲ್ಮೆಟ್‌ ಗೊಂದಲಕ್ಕೆ ತೆರೆ ಎಳೆದ ಸಾರಿಗೆ ಇಲಾಖೆ

ಹೀಗಾಗಿ ಹೇಗೆ ನಿರ್ಧಾರ ಮಾಡಬೇಕು ಎನ್ನುವ ಗೊಂದಲ ಸಂಚಾರ ಪೊಲೀಸರಿಗೆ ಮೂಡಿದೆ. ವಿದೇಶಗಳಿಂದ ಆಮದಾಗುವ ಹೆಲ್ಮೆಟ್ ಗಳ ಗುಣಮಟ್ಟದ ಕುರಿತು ಕರ್ನಾಟಕ ಮೋಟಾರು ವಾಹನ ಕಾಯಿದೆಯಲ್ಲಿ ಸ್ಪಷ್ಟತೆ ಇಲ್ಲ. ಇದರಿಂದಲೂ ನಿಯಮ ಜಾರಿಗೆ ಹಿನ್ನಡೆಯಾಗಲಿದೆ. ಹೀಗಾಗಿ ಫೆ.1 ರಿಂದ ಐಎಸ್ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸುವವರ ವಿರುದ್ಧ ಸಂಚಾರ ಪೊಲೀಸರು ದಂಡ ವಿಧಿಸುವ ಸಾಧ್ಯತೆ ಕಡಿಮೆ.

No imported helmets, wear ISI ones, says cops

ವಿದೇಶಿ ಹೆಲ್ಮೆಟ್ ಗಳ ಕಥೆ ಏನು: ಅಮೆರಿಕಾ, ಯುರೋಪಿಯನ್ ಗುಣಮಟ್ಟದ ಹೆಲ್ಮೆಟ್ ಗಳು ನಗರದಲ್ಲಿ ಬಳಕೆಯಲ್ಲಿವೆ. ಅವುಗಳ ಬೆಲೆ ಐದಾರು ಸಾವಿರದಿಂದ ಆರಂಭವಾಗಿ ಲಕ್ಷಾಂತರ ರೂ.ವರೆಗೆ ಇದೆ. ವಿದೇಶಿ ಕಂಪನಿಗಳ ಪ್ರಕಾರ ಐಎಸ್ಐ ಗಿಂತ ಹೆಚ್ಚಿನ ಸುರಕ್ಷತಾ ಗುಣಮಟ್ಟವನ್ನು ಆ ಹೆಲ್ಮೆಟ್ ಹೊಂದಿದೆ. ಅವುಗಳ ಮೇಲೆ ಐಎಸ್ ಐ ಮಾರ್ಕ್ ಇಲ್ಲ ಎಂದ ಮಾತ್ರಕ್ಕೆ ದಂಡ ವಿಧಿಸುತ್ತೀರಾ? ಎಂದು ಸಂಚಾರ ಪೊಲೀಸರಿಗೆ ಟ್ವಿಟ್ಟರನ್ ನಲ್ಲಿ ಸಾರ್ವಜನಿಕರು ಪ್ರಶ್ನೆ ಕೇಳಿದ್ದಾರೆ.

ಎಲ್ಲಾ ಇಲಾಖೆಗಳಿಂದ ನಿಯಮ ಜಾರಿ ಕುರಿತು ಸ್ಪಷ್ಟನೆ ಸಿಕ್ಕ ಬಳಿಕ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸಂಚಾರ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ನಿರ್ದೇಶನದಂತೆ ಐಎಸ್ ಐ ಹೆಲ್ಮೆಟ್ ಧರಿಸುವುದನ್ನು ಫೆ.1 ರಿಂದ ಕಡ್ಡಾಯಗೊಳಿಸಲು ಪೊಲೀಸರು ನಿರ್ಧರಿಸಿದ್ದರು.ಅದಕ್ಕೂ ಮುನ್ನ ಬಿಎಸ್ ಐ ನಿಂದ ಐಎಸ್ ಐ ಹೆಲ್ಮೆಟ್ ಗುರುತಿಸುವುದು ಹೇಗೆ ಎಂಬ ಸ್ಪಷ್ಟನೆ ಕೋರಿ ಪತ್ರ ಬರೆದಿದ್ದರು.

English summary
Bengaluru Traffic police have turned over-Zealous with their crackdown on substandard helmets by suggesting that ones that meet global standards such as United states, DoT and Europe's ECE are not acceptable. Only riders who wear ISI-marked helmets will not be penalized when the rule come into force from February 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X