ಏಪ್ರಿಲ್ ನಿಂದ 2 ಸ್ಟ್ರೋಕ್ ಆಟೋಗಳು ರಸ್ತೆಗಿಳಿಯುವಂತಿಲ್ಲ

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 27 : ಏ.1 ರಿಂದ ನಗರದಲ್ಲಿ 2 ಸ್ಟ್ರೋಕ್ ಎಂಜಿನ್ ನ ಆಟೋಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಗಡುವು ಮೀರಿದ ಬಳಿಕ ಈ ಆಟೋಗಳಿಗೆ ಕಾರ್ಯಕ್ಷಮತೆ ಪತ್ರ ನೀಡುವುದಿಲ್ಲ ಎಂದು ಸಾರಿಗೆ ಆಯುಕ್ತ ಬಿ. ದಯಾನಂದ್ ಹೇಳಿದ್ದಾರೆ.

ನಗರದಲ್ಲಿ ಸುಮಾರು 20-25 ಸಾವಿರ 2 ಸ್ಟ್ರೋಕ್ ಆಟೋಗಳಿವೆ. ಈ ಪೈಕಿ 10 ಸಾವಿರ ಆಟೋಗಳನ್ನು ಮಾರ್ಚ್ 2018ರೊಳಗೆ ಗುಜರಿಗೆ ಕಳುಹಿಸಲಾಗುವುದು. ಬೆಂಗಳೂರಿನಲ್ಲಿ ಮಾತ್ರ 2 ಸ್ಟ್ರೋಕ್ ಆಟೊಗಳಿಗೆ ನಿಷೇಧ ಹೇರಲಾಗಿದ್ದು, ನಿಗದಿತ ಗಡುವಿನೊಳಗೆ ಆಟೋಗಳನ್ನು ಗುಜರಿಗೆ ಹಾಕದಿದ್ದಲ್ಲಿ ತಪಾಸಣಾ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಎಫ್ ಸಿ ನೀಡುವುದಿಲ್ಲ.

ಕನ್ನಡನಾಡಿನ ಹಳೇ ಆಟೋರಿಕ್ಷಾಗಳನ್ನು ಗುಜರಿ ಮಾಡಲು ಸರಕಾರದ ಚಿಂತನೆ!

ಇ ಪರವಾನಗಿ ವ್ಯವಸ್ಥೆ: ನಗರದಲ್ಲಿ ಪರವಾನಗಿ ಹೊಂದಿರುವ 1.25 ಲಕ್ಷ ಆಟೋಗಳಿಗೆ ಪರವಾನಗಿ ನೀಡುತ್ತಿಲ್ಲ. ಅತಿ ಶೀಘ್ರದಲ್ಲಿ ವಾಹನಗಳಿಗೆ - ಪರವಾನಗಿ ವಿತರಣಾ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಒಂದೇ ಆಟೋಗೆ 2-3 ಪರವಾನಗಿ ಪಡೆಯುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.

No FC for 2 Stroke auto rickshaw from April

ಮಾಲೀಕರ ಆಧಾರ್ ಸಂಖ್ಯೆ, ಮೂಲ ದಾಖಲಾತಿಗಳನ್ನು ಪಡೆದು ಇ-ಪರವಾನಗಿ ನೀಡಲಾಗುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಇದು ಇ-ಆಟೋ ರಿಕ್ಷಾಗಳಿಗೂ ಅನ್ವಯಿಸುತ್ತದೆ. ಖಾಸಗಿ ಬಸ್ ಗಳ ಪ್ರಯಾಣ ದರ ನಿಗದಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಘಟಕ ಆರಂಭ: 2 ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕುವ ಸಲುವಾಗಿ ನೆಲಮಂಗಲ ಬಳಿ ಘಟಕ ತೆರೆಯಲಾಗಿದೆ. ಶೀಘ್ರದಲ್ಲೇ ರಾಜಾಜಿನಗರದಲ್ಲೂ ಘಟಕ ಆರಂಭವಾಗಲಿದೆ. ಈ ಘಟಕಗಳು ನಿತ್ಯ 300 ಆಟೋಗಳನ್ನು ಗುಜರಿಗೆ ಹಾಕಬಹುದಾಗಿದೆ. ಕಳೆದ ವರ್ಷ 10 ಸಾವಿರ 2ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕುವ ಗುರಿ ಹೊಂದಲಾಗಿದೆ.

ಆಟೋ ಮಾಲೀಕರ 2 ಸ್ಟ್ರೋಕ್ ಆಟೋಗಳನ್ನು ಗುಜರಿ ಘಟಕಕ್ಕೆ ನೀಡಬೇಕು. ಬಳಿಕ ಆ ಆಟೋವನ್ನು ಗುಜರಿಗೆ ಹಾಕಿರುವ ಬಗ್ಗೆ ಕಂಪನಿಯಿಂದ ಪ್ರಮಾಣ ಪತ್ರ ಪಡೆದುಕೊಂಡು ಸಬ್ಸಿಡಿ ಹಣಕ್ಕೆ ಅರ್ಜಿ ಸಲ್ಲಿಸಬೇಕು. ನಂತರ 2 ಸ್ಟ್ರೋಕ್ ಬದಲು 4 ಸ್ಟ್ರೋಕ್ ಆಟೋ ಖರೀದಿಸುವ ಮಾಲಿಕರಿಗೆ ತಲಾ ೩೦ಸಾವಿರ ಸಬ್ಸಿಡಿ ನೀಡಲಾಗುತ್ತದೆ. ಇದಕ್ಕಾಗಿ ಸರ್ಕಾರ ೩೦ ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Transport commissioner B.Dayanand said that there will not be issued efficiency Certificates for 2 gear auto rickshaw from April 1 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ