ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಗದರ್ಶಿ ದರ ಏರಿಕೆ ಇಲ್ಲ, ಆಸ್ತಿ ಖರೀದಿಗೆ ಸುಸಮಯ

By Prasad
|
Google Oneindia Kannada News

ಬೆಂಗಳೂರು, ಡಿಸೆಂಬರ್ 15 : ಈ ಹಣಕಾಸು ವರ್ಷದಲ್ಲಿ ಆಸ್ತಿಗಳ ಮಾರ್ಗದರ್ಶಿ ದರ ಏರಿಕೆಯಾಗುವುದಿಲ್ಲ. ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ರಿಯಲ್ ಎಸ್ಟೇಟ್ ಕುಸಿದಿರುವುದರಿಂದ ಈ ನಿರ್ಧಾರವನ್ನು ಕೈಗೊಂಡಿದೆ.

ಇದನ್ನು ಮುಂದಿನ ವರ್ಷ ನವೆಂಬರ್ ತನಕ ವಿಸ್ತರಿಸಬಹುದು. ಆಗ ಸರ್ಕಾರ ಮಾರ್ಗದರ್ಶಿ ದರ ಪರಿಷ್ಕರಿಸುವ ನಿರೀಕ್ಷೆ ಇದೆ. ಯಾವುದೇ ಭೂಮಿಯ ತುಂಡಿನ ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕ ನಿಗದಿಗೊಳಿಸಲು ಮೌಲ್ಯಮಾಪನ ಮಾಡುವ ಕನಿಷ್ಠ ಮಾರುಕಟ್ಟೆ ಮೌಲ್ಯ. ಇದು ಬೆಂಗಳೂರಿನ 20 ಕಿ.ಮೀ.ನೊಳಗೆ ಮನೆ ಖರೀದಿಗೆ ಯೋಜಿಸುತ್ತಿರುವ ಜನರಿಗೆ ನೆಮ್ಮದಿ ತರಲಿದೆ. ಹೊಸ ಮಾರ್ಗದರ್ಶಿ ದರ ನವೆಂಬರ್ 1ರಿಂದ ಜಾರಿಗೆ ಬರುವುದರಲ್ಲಿತ್ತು.

2014ರಲ್ಲಿ ಮಾರ್ಗದರ್ಶಿ ದರವನ್ನು ಗಣನೀಯವಾಗಿ ಏರಿಸಿದ ಬಳಿಕ ರಾಜ್ಯದಲ್ಲಿ ನೋಂದಣಿಯಾದ ಆಸ್ತಿಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ನೋಂದಣಿ ಇಲಾಖೆಗೆ ಆದಾಯದಲ್ಲಿ ದೊಡ್ಡ ವ್ಯತ್ಯಾಸ ಆಗದಿದ್ದರೂ 2013-14ಕ್ಕೆ ಹೋಲಿಸಿದರೆ 2014-15ರಲ್ಲಿ ಆಸ್ತಿ ವಹಿವಾಟುಗಳು ಕನಿಷ್ಠ 1 ಲಕ್ಷದಷ್ಟು ಕುಸಿದಿದೆ.

No change in guidance value, property registration in Bengaluru

ಬಿಲ್ಡರ್‌ಗಳು ಮಾರ್ಗದರ್ಶಿ ದರದ ಏರಿಕೆಯನ್ನು ವಿರೋಧಿಸಿದ್ದಾರೆ ಎಂದು ಕ್ರೆಡಾಯ್ ಬೆಂಗಳೂರಿನ ಕಾರ್ಯದರ್ಶಿಗಳಾದ ಸುರೇಶ್ ಹರಿ ಹೇಳುತ್ತಾರೆ. "ಸರ್ಕಾರವು ಚಿನ್ನದ ಮೊಟ್ಟೆಯಿಡುವ ಕೋಳಿಯನ್ನು ಕೊಲ್ಲಲು ಹೊರಟಿದೆ. ಇದರ ಬದಲಾಗಿ, ತೆರಿಗೆಯ ಸರಳೀಕರಕ್ಕೆ ಯೋಜಿಸಬೇಕು. ಆಗ ಈ ಕೋಳಿ ಇನ್ನಷ್ಟು ಚಿನ್ನದ ಮೊಟ್ಟೆ ಇಡುವುದಷ್ಟೇ ಅಲ್ಲ, ಎಲ್ಲರಿಗೂ ಸೂರು ಎಂಬ ಕನಸು ನನಸಾಗಲಿದೆ" ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಓಮ್ ಅಹುಜಾ, ಸಿಇಒ, ವಸತಿ, ಬ್ರಿಗೇಡ್ ಗ್ರೂಪ್ ಮಾತನಾಡಿ, "ಮಾರ್ಗದರ್ಶಿ ದರ ಏರಿಕೆ ವಿಳಂಬಗೊಳಿಸುವ ಈ ನಿರ್ಧಾರವು ಸ್ವಚ್ಛ ಭಾರತ ಸೆಸ್‌ನ ಹೊರೆ ಹೊತ್ತಿರುವ ರಿಯಾಲ್ಟಿ ಕ್ಷೇತ್ರಕ್ಕೆ ನೆರವಾಗಲಿದೆ" ಎಂದರು.

English summary
Government of Karnataka has decided not to change present guidance value of property or increase registration of property in Bengaluru. This has come in view of decrease in real estate business. So, it is right time for buyers to buy property.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X