ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೂಂಡಾ ಕಾಯ್ದೆಯೇ ರೌಡಿಸಂ ಕೊನೆಗಾಣಿಸಲು ಮದ್ದು

|
Google Oneindia Kannada News

ಬೆಂಗಳೂರು, ಸೆ. 11 : ರೌಡಿಗಳ ಅಟ್ಟಹಾಸ ಕೊನೆಗಾಣಿಸಲು ಬೆಂಗಳೂರು ಪೊಲೀಸರು ಬದ್ಧರಾಗಿದ್ದಾರೆ ಎಂದು ಪೊಲೀಸ್‌ ಆಯುಕ್ತ ಎಂ.ಎನ್.ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ವರದಿಗಾರ ಒಕ್ಕೂಟ ಪ್ರೆಸ್‌ ಕ್ಲಬ್‌ನಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿ, ರೌಡಿಸಂ ಎನ್ನುವುದು ಕೇವಲ ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಸಮಸ್ಯೆಯಲ್ಲ. ಇದನ್ನು ಪರಿಹರಿಸಲು ಪ್ರತಿಯೊಬ್ಬ ನಾಗರಿಕನೂ ಪೊಲೀಸ್‌ ಇಲಾಖೆಯೊಂದಿಗೆ ಶ್ರಮಿಸಬೇಕು ಎಂದು ತಿಳಿಸಿದರು.(ಗೂಂಡಾ ಕಾಯ್ದೆ ಏನಿದು? ಈಗ ಸುದ್ದಿಯಲ್ಲೇಕಿದೆ?)

ಹೊಸದಾಗಿ 10 ಸಾವಿರ ರೌಡಿ ಶೀಟರ್‌ ಪಟ್ಟಿ ತೆರೆಯಬೇಕಾಗಿ ಬಂದಿರುವುದು ದುರ್ದೈವ. ಬೆಂಗಳೂರಿಗೆ ಹೊರಗಿನ ರಾಜ್ಯಗಳಿಂದ ಗ್ಯಾಂಗ್‌ಗಳು ಆಗಮಿಸುತ್ತಿರುವ ಮಾಹಿತಿಯಿದೆ. ಎಲ್ಲ ಕಡೆ ಚೆಕ್‌ ಬಂದಿ ನಿರ್ಮಿಸಿ ಅನುಮಾನ ಬಂದವರನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದರು.(ಪೊಲೀಸರ ಬಲೆಗೆ ಬಿದ್ದ ಶಸ್ತ್ರಾಸ್ತ್ರ ಮಾರಾಟಗಾರ)

ಸರಗಳ್ಳತನ, ಮನೆ ದರೋಡೆ, ವಾಹನ ಕಳ್ಳತನ ಮತ್ತಿತರ ಅಪರಾಧ ಪ್ರಕರಣಗಳು ಕಂಡುಬಂದರೆ ಸಾರ್ವಜನಿಕರು ಯಾವುದೆ ಗೊಂದಲಕ್ಕೆ ಒಳಗಾಗದೆ ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ತಕ್ಷಣ ಇಲಾಖೆ ಕಾರ್ಯನಿರತವಾಗುತ್ತದೆ ಎಂದು ಭರವಸೆ ನೀಡಿದರು.

ಸಹಾಯವಾಣಿಗಳಿವು
ಹಿರಿಯ ನಾಗರಿಕರಿಗೆ- 1090
ಮಕ್ಕಳ ಸಹಾಯವಾಣಿ-1098
ವನಿತಾ ಸಹಾಯವಾಣಿ-1091
ಆಂಬುಲೆನ್ಸ್-105711, 1062 / 108
ಟ್ರಾಫಿಕ್‌- 103. 080-2294 3030, 131
ಆಟೊ ಚಾಲಕರ ಹುಚ್ಚಾಟ- 080-25588444 / 555
ಆತ್ಮಹತ್ಯೆ-080-25497777
ಅಗ್ನಿ ಶಾಮಕ ದಳ-080-22971500

ಗೂಂಡಾ ಕಾಯ್ದೆಯೇ ಮದ್ದು

ಗೂಂಡಾ ಕಾಯ್ದೆಯೇ ಮದ್ದು

ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಳ್ಳುವವರ ಮೇಲೆ ಗೂಂಡಾ ಕಾಯ್ದೆ ದಾಖಲಿಸುವುದೇ ಸದ್ಯದ ಪರಿಹಾರ. ಈಗಾಗಲೇ 10-15ಜನರನ್ನು ಮೇಲೆ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಲಕ್ಷಕ್ಕೊಬ್ಬರು ಅಪರಾಧ ಚಟುವಟಿಕೆಯತ್ತ ಒಲವು ತೋರುವ ಲಕ್ಷಣವಿದ್ದು ಅದಕ್ಕೂ ಇದು ಬ್ರೇಕ್‌ ಹಾಕುತ್ತದೆ ಎಂದು ಪೊಲೀಸ್‌ ಆಯುಕ್ತರು ಹೇಳಿದರು.

ಸ್ವತಂತ್ರ ದೂರು ದಾಖಲು ಕೇಂದ್ರ

ಸ್ವತಂತ್ರ ದೂರು ದಾಖಲು ಕೇಂದ್ರ

ಪೊಲೀಸ್‌ ಠಾಣೆಗೆ ತೆರಳಿದಾಗ ಕೆಲ ಅಡಚಣೆಗಳು ಸಾರ್ವಜನಿಕರಿಗಾಗುತ್ತಿರುವ ದೂರು ಕೇಳಿಬಂದಿದೆ. ಇದು ನಮ್ಮ ವ್ಯಾಪ್ತಿಗೆ ಬರಲ್ಲ ಎಂಬ ಪೊಲೀಸರ ಉತ್ತರ ಹಲವರಿಗೆ ನೋವು ತರುತ್ತಿದೆ. ಇದಕ್ಕೆಲ್ಲ ಪರಿಹಾರ ಎಂಬಂತೆ ಜನಸ್ನೇಹಿ ಸ್ವತಂತ್ರ ದೂರು ದಾಖಲು ಕೇಂದ್ರ ತೆರೆಯುವ ಯೋಜನೆ ಪರಿಶೀಲನೆಯಲ್ಲಿದೆ ಎಂದರು.

ಟ್ರಾಫಿಕ್‌ ಕಂಟ್ರೋಲ್‌ಗೆ ಸೂತ್ರ

ಟ್ರಾಫಿಕ್‌ ಕಂಟ್ರೋಲ್‌ಗೆ ಸೂತ್ರ

ಟ್ರಾಫಿಕ್‌ ನಿಯಂತ್ರಣ ಸವಾಲಿನ ಕೆಲಸವಾಗಿದ್ದು ನಿಧಾನವಾಗಿ ಸಂಚರಿಸುವ ವಾಹನಗಳಿಗೊಂದು ಮಾರ್ಗ, ವೇಗವಾಗಿ ಸಂಚರಿಸುವ ವಾಹನಗಳಿಗೆ ಒಂದು ಮಾರ್ಗ ಮತ್ತು ಸುಸಜ್ಜಿತ ಫುಟ್‌ಪಾತ್‌ ನಿರ್ಮಾಣ ಸರ್ಕಾರದಿಂದಾಬೇಕು ಎಂದು ಸಲಹೆ ನೀಡಿದರು.

ಲಾರಿ ಲಾಬಿಗೆ ಮಣೆ ಹಾಕಿಲ್ಲ

ಲಾರಿ ಲಾಬಿಗೆ ಮಣೆ ಹಾಕಿಲ್ಲ

ನಗರದ ಯಾವ ರೆಸ್ತೆಯಲ್ಲಿ ಬೇಕಾದರೂ ಬೆಳಗ್ಗೆಯಿಂದ ಸಂಜೆಯವರೆಗೆ ಲಾರಿಗಳು ರಾಜಾರೋಷವಾಗಿ ತಿರುಗಾಡುತ್ತಿವೆ. ಇದರ ಹಿಂದೆ ಲಾಬಿಯೊಂದಿದ್ದಂತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ ಈ ಬಗ್ಗೆ ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಕಲೆಹಾಕುತ್ತೇನೆ ಎಂದರು.

ಪತ್ರಕರ್ತರ ಮನವಿ

ಪತ್ರಕರ್ತರ ಮನವಿ

ಮಾಧ್ಯಮದವರೆಂದು ಹೇಳಿಕೊಂಡು ಅನೇಕರು ವಂಚನೆ ಮಾಡುತ್ತಿದ್ದು ತಮ್ಮ ವಾಹನಗಳಿಗೆ 'ಪ್ರೆಸ್‌' ಬೋರ್ಡ್‌ ಹಾಕಿಕೊಂಡು ಓಡಾಡುತ್ತಿದ್ದಾರೆ. ಇದಕ್ಕೆ ಪರಿಹಾರ ನೀಡಲು ಪೊಲೀಸ್‌ ಇಲಾಖೆ, ಪ್ರತಕರ್ತರ ಸಂಘದ ಸಂಯೋಜನೆಯಲ್ಲಿ ಎರಡು ಸಂಸ್ಥೆಗಳ ಅಧಿಕೃತ ಮಾನ್ಯತೆ ಪಡೆದಿರುವ ಸ್ಟಿಕ್ಕರ್‌ ನೀಡಬೇಕು ಎಂದು ಬೆಂಗಳೂರು ಪ್ರೆಸ್‌ ಕ್ಲಬ್‌ನಿಂದ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

English summary
No chance for rowdyism activity in Bangalore, We are thinking about People friendly Police system , said by Bangalore police commissioner M.N.Reddy, on Thursday at Bangalore Press Club.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X