ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವದಂತಿಗೆ ಕಿವಿಗೊಡಬೇಡಿ, ಸೆ.20ರಂದು ಬೆಂಗಳೂರು ಬಂದ್ ಇಲ್ಲ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 19: ಬೆಂಗಳೂರಿನಲ್ಲಿ ಸೆಪ್ಟೆಂಬರ್ 20, ಮಂಗಳವಾರ ಯಾವ ಬಂದ್ ಇಲ್ಲ ಎಂದು ಸ್ಪಷ್ಟನೆ ನೀಡಿರುವ ಬೆಂಗಳೂರು ಪೊಲೀಸರು ವದಂತಿಗಳಿಗೆ ನಾಗರಿಕರು ಕಿವಿ ಕೊಡಬಾರದು ಎಂದು ಮನವಿ ಮಾಡಿದ್ದಾರೆ.

ಕೆಲವು ಕಿಡಿಗೇಡಿಗಳು ಸೆಪ್ಟೆಂಬರ್ 20 ರಂದು ಬೆಂಗಳೂರು ಬಂದ್ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಗರ ಶಾಂತಿಯುತವಾಗಿದ್ದು ಸಾರ್ವಜನಿಕರ ದಿನನಿತ್ಯದ ಕೆಲಸ ಕಾರ್ಯಗಳಿಗೆ ಯಾವುದೆ ತೊಂದರೆ ಯಾಗದಂತೆ ಸೂಕ್ತ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.[ಸೆ. 21ರಿಂದ 30ರ ವರೆಗೆ ಕಾವೇರಿ ನೀರು ಬಿಡಿ: ಶಶಿಶೇಖರ್]

No Bandh on 20 Sept: Bengaluru City Police clarification

ಈ ಬಗೆಯ ಯಾವುದೇ ದೂರುಗಳು ಕೇಳಿಬಂದರೂ ಡಯಲ್-100, ಫೇಸ್ ಬುಕ್ BANGALURU CITY POLICE ಮತ್ತು ಬೆಂಗಳೂರು ಪೊಲೀಸರ ವಾಟ್ಸಪ್ ಸಂಖ್ಯೆ 9480801000 ಮಾಹಿತಿ ನೀಡಬಹುದು. ಜತೆಗೆ ಪರಿಹಾರವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.[ಗಲಭೆ ಉಂಟಾದರೆ ಈ ಟ್ವಿಟರ್ ತಾಣದ ಮೇಲೆ ಕಣ್ಣಿಡಿ]

ಬೆಂಗಳೂರು ನಗರದ್ಯಾಂತ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 15,000 ಸಾವಿರ ಸಿವಿಲ್ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಜೊತೆಗೆ ಸಿ.ಎ.ಆರ್, ಕೆ.ಎಸ್.ಆರ್.ಪಿ ಹಾಗೂ ಸಿ.ಪಿ.ಎಂ.ಎಫ್ ತುಕಡಿಗಳನ್ನು ನಿಯೋಜಿಸಿದ್ದು ನಗರ ಶಾಂತಿಯುತವಾಗಿದೆ. ನಾಗರಿಕರು ಯಾವುದೆ ವದಂತಿಗೆ ಕಿವಿ ಕೊಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಮೇಲುಸ್ತುವಾರಿ ಸಮಿತಿ ತೀರ್ಮಾನ: ತಮಿಳುನಾಡಿಗೆ 10 ದಿನಗಳ ಕಾಲ 3 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಕರ್ನಾಟಕಕ್ಕೆ ಕಾವೇರಿ ಮೇಲುಸ್ತುವಾರಿ ಸಮಿತಿ ಸೋಮವಾರ (ಸೆ.19) ಆದೇಶ ನೀಡಿದೆ.

ನವದೆಹಲಿಯ ಶ್ರಮಶಕ್ತಿದಲ್ಲಿ ಸೋಮವಾರ ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ನಂತರ ಸುದ್ದಿಗೋಷ್ಠಿ ನಡೆಸಿದ ಸಮಿತಿಯ ಅಧ್ಯಕ್ಷ ಶಶಿಶೇಖರ್ ಅವರು ಮುಂದಿನ ಹತ್ತು ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿದರು. ಸೆಪ್ಟೆಂಬರ್ 21ರಿಂದ 30ರ ತನಕ 3,000 ಕ್ಯೂಸೆಕ್ಸ್ ನೀರನ್ನು ಹರಿಸುವುದು ಅನಿವಾರ್ಯವಾಗಿದೆ. ಇದೀಗ ಎಲ್ಲರ ಕಣ್ಣು ಸುಪ್ರೀಂ ಕೋರ್ಟ್ ಆದೇಶದ ಮೇಲೆ ನೆಟ್ಟಿದೆ.

English summary
Bengaluru City Police clarify's that there is no Bandh on 20 September in Bengaluru regarding any issue. Don't spread any rumors. Security arrangements in place all over the city. Any emergency DIAL100/tweet to @BlrCityPolice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X