ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡು ದಿನದಲ್ಲಿ ನಿತ್ಯಾ ಪರೀಕ್ಷೆ ವರದಿ ಸಿಐಡಿ ಕೈಗೆ

|
Google Oneindia Kannada News

ಬೆಂಗಳೂರು, ಸೆ.9 : ಬಿಡದಿಯ ಸ್ವಯಂ ಘೋಷಿತ ನಿತ್ಯಾನಂದ ಸ್ವಾಮಿಯ ಪುರುಷತ್ವ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆ ಆವರಣದ ನೆಫ್ರೊ ಯುರಾಲಜಿ ಸಂಸ್ಥೆಯಲ್ಲಿ ಸೋಮವಾರ ನಡೆಯಿತು. ಪರೀಕ್ಷೆಯ ಅಧಿಕೃತ ವರದಿಯನ್ನು ಎರಡು ದಿನಗಳ ನಂತರ ಸಿಐಡಿ ಅಧಿಕಾರಿಗಳಿಗೆ ನೀಡಲಾಗುವುದು ಎಂದು ವೈದ್ಯರು ಹೇಳಿದ್ದಾರೆ.

ನಿತ್ಯಾನಂದ ಸ್ವಾಮಿ ಪುರುಷತ್ವ ಪರೀಕ್ಷೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ. ಟಿ.ದುರ್ಗಪ್ಪ ಅವರು, ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಪರೀಕ್ಷೆ ಪೂರ್ಣಗೊಳಿಸಲಾಗಿದೆ. ಎಲ್ಲ ತರಹದ ಪರೀಕ್ಷೆಗಳಿಗೂ ಅವರು ಸ್ಪಂದಿಸಿದ್ದು, ಮುಂದಿನ ಎರಡು ದಿನಗಳಲ್ಲಿ ವರದಿ ಸಿದ್ಧಗೊಳ್ಳುತ್ತದೆ, ಅದನ್ನು ಸಿಐಡಿ ಅಧಿಕಾರಿಗಳಿಗೆ ಸಲ್ಲಿಸುತ್ತೇವೆ ಎಂದರು.

Swami Nithyananda

ಪುರುಷ ಪರೀಕ್ಷೆಗೆ ಸೂಚನೆಗಳು ಬಂದಾಗ ವೈದ್ಯ ಮಂಡಳಿ ರಚಿಸಲಾಗುತ್ತದೆ. ಆ ಪ್ರಕಾರ ನಾಲ್ಕು ಜನ ವೈದ್ಯರ ಮಂಡಳಿ ರಚಿಸಲಾಗಿದ್ದು, ಪ್ರತಿಯೊಂದು ಪರೀಕ್ಷೆಯನ್ನು ಮಂಡಳಿಯ ತೀರ್ಮಾನದಂತೆಯೇ ನಡೆಸಲಾಗಿದೆ. ಎಲ್ಲ ತರಹದ ಮಾದರಿಗಳನ್ನೂ ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ದುರ್ಗಪ್ಪ ಅವರು ಮಾಹಿತಿ ನೀಡಿದರು. [ನಿತ್ಯಾನಂದ ಪುರುಷತ್ವ ಪರೀಕ್ಷೆ ವಿವರಗಳು]

ಎರಡು ದಿನದವೊಳಗೆ ವಿವಿಧ ಪರೀಕ್ಷೆಗಳ ವರದಿಗಳು ಕೈ ಸೇರಲಿವೆ. ಎಲ್ಲಾ ವರದಿಗಳನ್ನು ಕ್ರೋಢಿಕರಿಸಿ ಅಂತಿಮ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಗಳಿಗೆ ಒಪ್ಪಿಸಲಾಗುವುದು. ವರದಿಯಲ್ಲಿ ಏನಿದೆ ಎಂದು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬೆಳಗ್ಗೆ 8ರಿಂದ ಮಧ್ಯಾಹ್ನ 1ಗಂಟೆಯ ತನಕ ಹಲವಾರು ಪರೀಕ್ಷೆಗಳು ಮತ್ತು ಕೌನ್ಸೆಲಿಂಗ್ ನಡೆಸಿದ್ದರಿಂದ ನಿತ್ಯಾನಂದ ಸ್ವಾಮಿಗಳಿಗೆ ದಣಿವಾಗಿರಬಹುದು. ಆದರೆ, ದೈಹಿಕವಾಗಿ ದಣಿಯುವಂತಹ ಯಾವುದೇ ಪರೀಕ್ಷೆಗಳನ್ನು ನಡೆಸಿಲ್ಲ. ಮಾನಸಿಕವಾಗಿ ದಣಿದಿರಬಹುದು ಎಂದು ನೆಫ್ರೊ ಯುರಾಲಜಿ ಸಂಸ್ಥೆ ಅಧೀಕ್ಷಕ ಡಾ.ಆರ್.ಕೇಶವಮೂರ್ತಿ ಹೇಳಿದರು. [ಪುರುಷತ್ವ ಪರೀಕ್ಷೆ ಎಂದರೇನು? ಏಕೆ ಮಾಡ್ಬೇಕು?]

ವೀರ್ಯಾಣು ಸಂಗ್ರಹ ಮಾಡಿಲ್ಲ : ಪುರುಷತ್ವ ಪರೀಕ್ಷೆ ಸಂದರ್ಭದಲ್ಲಿ ಹಸ್ತಮೈಥುನ ಮೂಲಕ ವೀರ್ಯಾಣುಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ವೀರ್ಯಾಣು ಸಂಗ್ರಹಿಸುವಂತಹ ಯಾವುದೇ ಪರೀಕ್ಷೆಗಳನ್ನೂ ನಡೆಸಿಲ್ಲ. ಕೇವಲ ರಕ್ತ ಮತ್ತು ಮೂತ್ರದ ಮಾದರಿಯಿಂದಲೇ ಅಗತ್ಯವಾದ ಎಲ್ಲ ಅಂಶಗಳನ್ನೂ ಪರಿಶೀಲಿಸಲಾಗುವುದು ಎಂದು ವೈದ್ಯರು ಸ್ಪಷ್ಟಪಡಿಸಿದರು.

8.30ಕ್ಕೆ ಧ್ಯಾನಪೀಠ ತುಲುಪಿದ ಸ್ವಾಮಿ : ಸಂಜೆ ಆರು ಗಂಟೆಗೆ ಪುರುಷತ್ವ ಪರೀಕ್ಷೆ ಪೂರ್ಣಗೊಂಡ ಬಳಿಕ ಅವರನ್ನು ಧ್ವನಿ ಪರೀಕ್ಷೆಗಾಗಿ ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಆಂಬ್ಯುಲೆನ್ಸ್‌ ಮೂಲಕ ಕರೆದೊಯ್ಯಲಾಯಿತು. ಪರೀಕ್ಷೆ ಪೂರ್ಣಗೊಂಡ ಬಳಿಕ ಆಯಾಸಗೊಂಡಿದ್ದ ನಿತ್ಯಾನಂದ ಅವರನ್ನು ಆಂಬ್ಯಲೆನ್ಸ್ ಮೂಲಕ ಆಶ್ರಮಕ್ಕೆ ಕಳುಹಿಸಿ ಕೊಡಲಾಯಿತು. ರಾತ್ರಿ 8.30ಕ್ಕೆ ನಿತ್ಯಾನಂದ ಸ್ವಾಮಿಗಳು ಆಶ್ರಮಕ್ಕೆ ವಾಪಸ್ ತೆರಳಿದರು.

English summary
Self-styled godman Nithyananda finally underwent a potency test at the Institute of Nephro-Urology at state-run Victoria Hospital campus in Bangalore on Monday. After test Dr T.Durganna, medical superintendent, Victoria Hospital said report will be submit to CID in two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X