ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಳೇನ ಅಗ್ರಹಾರ ಕೆರೆ ಅಭಿವೃದ್ಧಿ ಪ್ರಗತಿಯಲ್ಲಿದೆ: ನಿರ್ಮಲಾ ಸೀತಾರಾಮನ್‌

By Nayana
|
Google Oneindia Kannada News

ಬೆಂಗಳೂರು, ಜು.17: ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರ ಕರೆಯನ್ನು ದತ್ತು ತೆಗೆದುಕೊಂಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಕೆರೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕಾಳೇನ ಅಗ್ರಹಾರ ಕೆರೆ ಉಳಿವಿಗೆ ಟೊಂಕಕಟ್ಟಿದ ನಿರ್ಮಲಾ ಕಾಳೇನ ಅಗ್ರಹಾರ ಕೆರೆ ಉಳಿವಿಗೆ ಟೊಂಕಕಟ್ಟಿದ ನಿರ್ಮಲಾ

ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಕಳೆದ ಮೇ ತಿಂಗಳಲ್ಲೂ ಎರಡು ಕೋಟಿ ರೂ. ವೆಚ್ಚದಲ್ಲಿ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಕಾಳೇನ ಅಗ್ರಹಾರ ಕೆರೆಯನ್ನು ದತ್ತು ತೆಗೆದುಕೊಂಡಿದ್ದರು.

Nirmala Sitharaman tweets progress of Kalena Agrahara lake development

ಸುಮಾರು ಮೂರೂವರೆ ಎಕರೆಯಷ್ಟು ವಿಸ್ತಾರವಾಗಿದ್ದ ಕಾಳೇನ ಅಗ್ರಹಾರ ಕೆರೆ ಇತ್ತೀಚಿನ ದಿನಗಳಲ್ಲಿ ಒತ್ತುವರಿಯಿಂದ ಗಾತ್ರ ಕುಗ್ಗಿದ್ದಲ್ಲದೆ ಸುತ್ತಮುತ್ತಲಿನ ವಿಷತ್ಯಾಜ್ಯ ಹಾಗು ಚರಂಡಿ ನೀರು ಕೆರೆಗೆ ಬಂದು ಸೇರುತ್ತಿತ್ತು. ಇದರಿಂದ ಸ್ಥಳೀಯರು ಬೇಸತ್ತಿದ್ದರು.

ಹೀಗಾಗಿ ಕಳೆದ ಏಪ್ರಿಲ್‌ ತಿಂಗಳ ಕೊನೆಯ ವಾರದಲ್ಲಿ ಕಾಳೇನ ಅಗ್ರಹಾರ ಕೆರೆಗೆ ಭೇಟಿ ನೀಡಿದ್ದ ಸಚಿವೆ ಸ್ಥಳೀಯರ ಸಭೆ ಕರೆದು ಅವರ ಆಶೋತ್ತರಗಳಿಗೆ ಸ್ಪಂದಿಸಿ ಸ್ಥಳೀಯರ ಅಭಿಪ್ರಾಯದಂತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದರು.

Nirmala Sitharaman tweets progress of Kalena Agrahara lake development

ಇದೀಗ ಕೆರೆಯ ಸುತ್ತ ರಕ್ಷಣಾ ಗೋಡೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇದೇ ವೇಳೆ ಕೆರೆಯ ಹೂಲೆತ್ತುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೆಲವು ಚಿತ್ರವನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಾಳೇನ ಅಗ್ರಹಾರ ಸ್ವಚ್ಛಗೊಂಡರೆ ಸುತ್ತಮುತ್ತಲಿನ ಪ್ರದೇಶ ಶುಚಿಯಾಗುತ್ತದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಬೆಂಗಳೂರಿನ ಕಾಲೇನ ಅಗ್ರಹಾರ ಕೆರೆ ಅಭಿವೃದ್ಧಿಗೆ ಮುದಾಗಿದ್ದಾರೆ.

English summary
Union defence minister Nirmala Sitharaman has shared progress status of development work of Kalena Agrahara lake through her tweeter account. Bund creation and de-silting are currently in progress, she added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X