ರಕ್ಷಣಾ ಸಚಿವೆ ದತ್ತು ಪಡೆದ ಮಲ್ಲನಾಯಕನಹಳ್ಳಿಯಲ್ಲಿ ಮೊದಲ ಎಟಿಎಂ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 24: ರಕ್ಷಣಾ ಸಚಿವೆ- ಕರ್ನಾಟಕದಿಂದ ಆಯ್ಕೆ ಆಗಿರುವ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ದತ್ತು ಪಡೆದಿರುವ ಮಲ್ಲನಾಯಕನಹಳ್ಳಿಯಲ್ಲಿ ಅಲ್ಲಿನ ಮೊದಲ ಎಟಿಎಂ ಆರಂಭವಾಗಿದೆ. ಐಸಿಐಸಿಐ ಬ್ಯಾಂಕ್ ನಿಂದ ಎಟಿಎಂ ಆರಂಭವಾಗಿರುವ ಬಗ್ಗೆ ನಿರ್ಮಲಾ ಸೀತಾರಾಮನ್ ಅವರ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.

ಕಾಳೇನ ಅಗ್ರಹಾರ ಕೆರೆ ಉಳಿವಿಗೆ ಟೊಂಕಕಟ್ಟಿದ ನಿರ್ಮಲಾ

Nirmala seetharaman

ಈ ಟ್ವೀಟ್ ಗೆ ಕೆಲವರು ಪ್ರತಿಕ್ರಿಯೆ ನೀಡಿದ್ದು, ಆ ಪೈಕಿ ಕೆಲವನ್ನು ಇಲ್ಲಿ ಕೊಡಲಾಗಿದೆ.

ಏನ್ ನಿನ್ ಪ್ರಾಬ್ಲಮ್?
ಧನ್ಯವಾದಗಳು

ಗೌತಮ್ ತನ್ವರ್
ಜೈ ಹೋ

ಜ್ಞಾನೇಶ್ ಶೆಣೈ
ದುರದೃಷ್ಟ ಏನೆಂದರೆ, ನಿಮಗೆ ಎಟಿಎಂ ಆರಂಭಿಸಲು ಸಾರ್ವಜನಿಕ ವಲಯದ ಬ್ಯಾಂಕ್ ಸಿಗಲಿಲ್ಲವೆ, ಬಹುರಾಷ್ಟ್ರೀಯ ಕಂಪನಿಯ ಸಹಾಯ ಪಡೆಯಬೇಕಾಯಿತು. ಮೇಕ್ ಇನ್ ಇಂಡಿಯಾ ಆಲೋಚನೆಗೆ ಇದರಿಂದ ಅವಮಾನ ಅಲ್ಲವೆ.

ಓಂ ಸತ್ಯ ವಚನ ಓಂ
ತುಂಬ ಒಳ್ಳೆ ಆರಂಭ.

ಅಮಿತ್ ಸಿಂಗ್ ರಜ್ ಪೂತ್
ಐಸಿಐಸಿಐ ಬ್ಯಾಂಕ್ ನವರ ಸೇವೆ ಚೆನ್ನಾಗಿದೆ. ನನ್ನ ಸ್ನೇಹಿತರಿಗೆಲ್ಲ ಹೇಳ್ತೀನಿ: ಐಸಿಐಸಿಐ ಬ್ಯಾಂಕ್ ನಲ್ಲಿ ಒಂದು ಖಾತೆ ತೆರೆಯಿರಿ ಅಂತ.

ಲೋಗನಾಥನ್ ಬಾಬು
ಮೇಡಂ, ನೀವು ತಮಿಳುನಾಡಿನಲ್ಲಿಯೂ ಕೆಲವು ಹಳ್ಳಿಗಳನ್ನು ದತ್ತು ತೆಗೆದುಕೊಳ್ಳಬೇಕು ಅಂತ ಬಯಸ್ತೀನಿ. ಅದೂ ಮದುರೈ ಮತ್ತು ತಿರುನಲ್ವೇಲಿ ಹತ್ತಿರ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Defence minister Nirmala Seetharaman adopted village Mallanayakanahalli in Karnataka gets its first ATM. Information tweeted by Nirmala Seetharaman's office.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ