ಉಡುಪಿಯ ಭಾಸ್ಕರ್ ಶೆಟ್ಟಿಯನ್ನು ಗುಂಡಿಟ್ಟು ಕೊಲ್ಲುವ ಪ್ಲಾನ್ ಇತ್ತಾ!

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 28: ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಸಿಐಡಿಗೆ ಪ್ರಮುಖ ಸಾಕ್ಷಿ ಸಿಕ್ಕಿದೆ. ಶೆಟ್ಟಿ ಅವರ ಕೊಲೆಗಾಗಿ ಪಿಸ್ತೂಲು ಬಳಸುವ ಆಲೋಚನೆಯಿತ್ತು ಎಂಬ ಅಂಶ ಬಯಲಿಗೆ ಬಂದಿದ್ದು, ಇಡೀ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆ ಇದೆ.

ಪಿಸ್ತೂಲಿಗಾಗಿ ಮುಂಬೈನಲ್ಲಿದ್ದ ಸ್ನೇಹಿರೊಬ್ಬರನ್ನು ನಂದಳಿಕೆಯ ಜ್ಯೋತಿಷಿ ನಿರಂಜನ್ ಭಟ್ ಕೇಳಿದ್ದ ಸಂಗತಿ ಗೊತ್ತಾಗಿದೆ. ನಿರಂಜನ್ ಭಟ್ ಗೆಳೆಯ ಸತೀಶ್ ಎಂಬುವರು ಮುಂಬೈನಲ್ಲಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಾರೆ. ಭಾಸ್ಕರ್ ಶೆಟ್ಟಿ ಅವರನ್ನು ಕೊಲ್ಲುವ ನಾಲ್ಕು ದಿನದ ಮುಂಚೆ, "ನನಗೆ ಪಿಸ್ತೂಲು ಬೇಕಾಗಿದೆ. ಅದಕ್ಕೆ ಎಷ್ಟು ಹಣವಾದರೂ ಪರವಾಗಿಲ್ಲ" ಎಂದು ಭಟ್ ಹೇಳಿದ್ದಾನೆ.[ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆಗೆ ಬಳಸಿದ್ದ ರಾಡ್ ಪತ್ತೆ]

Niranjan bhat-bhaskar

ಕ್ಲೋರೋಫಾರ್ಮ್: ಪಿಸ್ತೂಲು ಸಿಗುವುದು ಸುಲಭವಲ್ಲ ಎಂದು ಸತೀಶ್ ತಿಳಿಸಿದಾಗ, ಕ್ಲೋರೋಫಾರ್ಮ್ ತೆಗೆದುಕೊಂಡು ಉಡುಪಿಗೆ ಬರುವಂತೆ ಹೇಳಿದ್ದಾನೆ. ಆದರೆ ಮೆಡಿಕಲ್ ಶಾಪ್ ನಲ್ಲಿ ಖರೀದಿಸುವ ಉದ್ದೇಶ, ವಿಳಾಸ ಮತ್ತಿತರ ವಿವರ ಪುಸ್ತಕದಲ್ಲಿ ಬರೆಯುವಂತೆ ತಿಳಿಸಿದಾಗ ಸತೀಶ್ ವಾಪಸ್ ಬಂದಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಾವಾಗ ನಿರಂಜನ್ ಭಟ್ ನಿಂದ ಒತ್ತಡ ಹೆಚ್ಚಾಯಿತೋ ಅಗ ಕೆಲ ದಿನ ಸತೀಶ್ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ. ಭಟ್ ನ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಭಾಸ್ಕರ್ ಶೆಟ್ಟಿ ಹತ್ಯೆಗೂ ಮುಂಚೆ ಹಾಗೂ ನಂತರ ಸತೀಶ್ ಜತೆಗೆ ಮಾತನಾಡಿರುವುದು ಗೊತ್ತಾಗಿದೆ.[ಉಡುಪಿಯ ನವನೀತ್ ಶೆಟ್ಟಿ ಜಿಮ್ ನಲ್ಲಿ ಸಿಐಡಿ ಪರಿಶೀಲನೆ]

ಹೋಮಕುಂಡದ ಯೋಜನೆ: ಪಿಸ್ತೂಲು ಸಿಗುವುದಿಲ್ಲ ಎಂದಾದಾಗ ಶೆಟ್ಟಿ ಅವರನ್ನು ಹೊಡೆದು ಕೊಂದು, ಹೋಮಕುಂಡದಲ್ಲಿ ಸುಡುವ ಯೋಜನೆ ಹಾಕಿಕೊಂಡಿದ್ದಾರೆ. ರಾಜೇಶ್ವರಿ, ನವನೀತ್, ನಿರಂಜನ್ ಸೇರಿ ಇಂದ್ರಾಳಿಯ ಮನೆಯಲ್ಲಿ ಸಲಾಕೆಯಿಂದ ಹೊಡೆದು ಕೊಂದು, ಹೋಮಕುಂಡದಲ್ಲಿ ಕರ್ಪೂರ ಹಾಕಿ ಸುಟ್ಟಿದ್ದರು. ಆ ನಂತರ ಸಲಾಕೆ, ಸಿಮೆಂಟ್ ಇಟ್ಟಿಗೆ, ಎಲುಬು-ಬೂದಿಯನ್ನು ನಿರಂಜನ್ ಭಟ್ ಕಾರಿನಲ್ಲಿ ನದಿ ಹತ್ತಿರಕ್ಕೆ ಸಾಗಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ನದಿಯಲ್ಲಿ ಸಿಮೆಂಟ್ ಇಟ್ಟಿಗೆ, ಎಲುಬುಗಳು, ಕಬ್ಬಿಣದ ಸಲಾಕೆ ಸಿಕ್ಕಿದೆ. ಇದಕ್ಕಾಗಿ ಸಿಐಡಿ ಅಧಿಕಾರಿಗಳು ನುರಿತ ಈಜುಗಾರರ ನೆರವು ಪಡೆದಿದ್ದಾರೆ. ಅದಕ್ಕಾಗಿ ನಲವತ್ತೈದು ಸಾವಿರ ರುಪಾಯಿ ಖರ್ಚು ಮಾಡಲಾಗಿದೆ. ಇದೀಗ ಆ ಎಲ್ಲ ವಸ್ತುಗಳು ಹಾಗೂ ಕಾರಿನಲ್ಲಿ ಸಿಕ್ಕ ರಕ್ತದ ಕಲೆಯನ್ನು ಪರೀಕ್ಷೆಗೆ ಕಳಿಸಲಾಗಿದೆ.[ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಕ್ಯಾಂಟೀನ್ ಊಟ, ಬಸ್ ಪ್ರಯಾಣ]

ನೂರು ಕೋಟಿ ಅಸ್ತಿ: ಭಾಸ್ಕರ್ ಶೆಟ್ಟಿ ಅವರ ಅಸ್ತಿ ಮೌಲ್ಯ ನೂರು ಕೋಟಿ ರುಪಾಯಿ ಎಂಬುದು ಖಚಿತಪಟ್ಟಿದೆ. ಇದೇ ವೇಳೆ ವಿವಿಧ ಬ್ಯಾಂಕ್ ನಲ್ಲಿದ್ದ ಶೆಟ್ಟಿ ಅವರ 13, ರಾಜೇಶ್ವರಿ ಅವರ 8, ನವನೀತ್ ನ 10 ಹಾಗೂ ಜ್ಯೋತಿಷಿ ನಿರಂಜನ್ ಭಟ್ ನ 7 ಖಾತೆಗಳ ಪರಿಶೀಲನೆ ನಡೆಯುತ್ತಿದೆ.

ಭಾಸ್ಕರ್ ಶೆಟ್ಟಿ ಹತ್ಯೆ ನಂತರವೂ ನಿರಂಜನ್ ಭಟ್ ತನ್ನ ಸ್ನೇಹಿತ ಸತೀಶ್ ಗೆ ಫೋನ್ ಮಾಡಿದ್ದಾನೆ. ಸುಪಾರಿ ಹಂತಕರನ್ನು ಹುಡುಕು, ಈ ಕೊಲೆ ತಾವೇ ಮಾಡಿದ್ದಾಗೆ ಅವರು ಒಪ್ಪಿಕೊಂಡರೆ ಕೇಳಿದಷ್ಟು ಹಣ ಕೊಡ್ತೀವಿ. ಜತೆಗೆ ಜಾಮೀನು ಕೊಡಿಸುತ್ತೇವೆ ಎಂದಿದ್ದಾನೆ. ಅದಕ್ಕೆ ಸತೀಶ್ ಒಪ್ಪಿಲ್ಲ ಎಂದು ಸಿಐಡಿ ಮೂಲಗಳು ತಿಳಿಸಿವೆ.[ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ : ಸಿಕ್ಕಿದ್ದು ಮಾನವನ ಮೂಳೆ]

ನ್ಯಾಯಾಧೀಶರ ಮುಂದೆ ಸತೀಶ್‌ ಹೇಳಿಕೆ ನೀಡಿದ್ದಾನೆ. ಈವರೆಗೆ ಪ್ರಬಲ ಸಾಕ್ಷಿ ಹಾಗೂ ದಾಖಲೆಗಾಗಿ ಪ್ರಯತ್ನಿಸುತ್ತಿದ್ದೆವು. ಈಗ ಸತೀಶ್ ಮೂಲಕ ಅದು ಸಿಕ್ಕಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Udupi businessman Bhaskar Shetty murder case accused, Astrologer Niranjan Bhat tried to buy pistool through his friend, who is working in Mumbai hotel. Major evidence available to CID police.
Please Wait while comments are loading...