ನಿಮಗೆ ಸೆಲ್ಫೀ ಹುಚ್ಚಿದ್ದರೆ ನಿಮ್ಹಾನ್ಸ್ ಸೇರುವುದು ಗ್ಯಾರಂಟಿ!

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 06: ಯುವ ಜನಾಂಗದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಗೀಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೆಲ್ಫಿ ಹುಚ್ಚಿನಿಂದಾಗಿ ಜೀವ ಕಳೆದುಕೊಂಡ ಅನೇಕ ನಿದರ್ಶನಗಳಿವೆ. ಆದರೆ ಇದೀಗ ಆತಂಕಕಾರಿ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಯುವಕ-ಯುವತಿಯರ ಅತಿಯಾದ ಸೆಲ್ಫಿ ಹವ್ಯಾಸ ಮನೋರೋಗವಾಗಿ ಪರಿವರ್ತನೆಯಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಸರ್ವಿಸ್ ಫಾರ್ ಹೆಲ್ದಿ ಯೂಸ್ ಆಫ್ ಟೆಕ್ನಾಲಜಿ (ಶಟ್) ಕ್ಲಿನಿಕ್ ಈ ಬಗ್ಗೆ ಅಧ್ಯಯನ ನಡೆಸಿದ್ದಲ್ಲದೆ, ಸೆಲ್ಫಿ ಗೀಳಿನಿಂದ ಬಳಲಿ, ಮನೋವ್ಯಾಕುಲಕ್ಕೆ ಒಳಗಾಗಿರುವವರಿಗೆ ಚಿಕಿತ್ಸೆ ನೀಡಲು ಆರಂಭಿಸಿದೆ.

ಸೆಲ್ಫಿ ಮೋಹ ಒಂದು ಮಾನಸಿಕ ಕಾಯಿಲೆ - ಮನಶ್ಶಾಸ್ತ್ರಜ್ಞರು

ಶಟ್ ಕೇಂದ್ರವು ಆಧುನಿಕ ತಂತ್ರಜ್ಞಾನಕ್ಕೆ ಅಂಟಿಕೊಂಡು ತನ್ನ ಕಾರ್ಯಕ್ಷಮತೆಯನ್ನೇ ಹಾಳುಗೆಡವಿಕೊಳ್ಳುತ್ತಿರುವ ವ್ಯಕ್ತಿಗಳ ಸುಧಾರಣೆಗಾಗಿ ಚಿಕಿತ್ಸೆ ನೀಡುತ್ತಿದ್ದು, ಈ ಕೇಂದ್ರದಲ್ಲಿ ಈಗಾಗಲೇ ಹಲವಾರು ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

ಯುವಕ-ಯುವತಿಯರು ಮೊಬೈಲ್-ವಿಡಿಯೋ ಗೇಮ್, ಸೆಲ್ಫಿ ಮತ್ತಿತರ ತಾಂತ್ರಿಕ ವಸ್ತುಗಳ ಗೀಳಿಗೆ ಬಲಿಯಾಗಿ ಅನುಭವಿಸುತ್ತಿರುವ ಸಮಸ್ಯೆಗಳ ಬಗೆಗೆ ಕಳೆದ ಆರು ತಿಂಗಳಿನಿಂದ ಅಧ್ಯಯನ ನಡೆಸುತ್ತಿರುವ ಶಟ್, ಡಿ-ಆಡಿಕ್ಷನ್ ಕ್ಯಾಂಪ್‌ಗಳನ್ನು ಆಯೋಜಿಸಿ ಇದರಿಂದ ಮುಕ್ತಿ ಹೊಂದುವ ಸಲಹೆಗಳನ್ನು ನೀಡಲು ಆರಂಭಿಸಿದೆ.

ದಿನಕ್ಕೆ ಮೂರ್ನಾಲ್ಕು ಬಾರಿ ಡಿಪಿ ಚೇಂಜ್ ಮಾಡ್ತಾಳಂತೆ!

ದಿನಕ್ಕೆ ಮೂರ್ನಾಲ್ಕು ಬಾರಿ ಡಿಪಿ ಚೇಂಜ್ ಮಾಡ್ತಾಳಂತೆ!

ಯುವತಿಯೊಬ್ಬಳು 15 ನಿಮಿಷಗಳ ಅವಧಿಯಲ್ಲಿ 150 ಸೆಲ್ಫಿಗಳನ್ನು ತೆಗೆದುಕೊಳ್ಳುವ ಜೊತೆಗೆ ಏಕಾಂಗಿತನ ಅನುಭವಿಸುತ್ತಿದ್ದಳು. ಈ ರೀತಿ ತೆಗೆದುಕೊಂಡ ಸೆಲ್ಫಿಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡುತ್ತಿದ್ದಳು. ಈ ರೀತಿ ದಿನಕ್ಕೆ ಮೂರ್ನಾಲ್ಕು ಬಾರಿ ಸ್ಟೇಟಸ್‌ಗಳನ್ನು ಬದಲಿ ಮಾಡುತ್ತಿದ್ದಳು.

ಮತ್ತೊಂದು ಪ್ರಕರಣದಲ್ಲಿ, 21 ವರ್ಷದ ಮಹಿಳೆ ದಿನಕ್ಕೆ 60 ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿದ್ದಳು. ಆಕೆಗೆ ಕೌನ್ಸಲಿಂಗ್ ಮಾಡಿದ ಬಳಿಕ ಈಗ ದಿನಕ್ಕೆ 10 ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಳೆ ಎಂದು ಶಟ್ ನ ಹೆಚ್ಚುವರಿ ಪ್ರಾಧ್ಯಾಪಕ ಮನೋಜ್‌ಕುಮಾರ್ ಶರ್ಮಾ ಹೇಳಿದ್ದಾರೆ.

ಪರರ ಪ್ರಶಂಸೆಗೂ ಹಾತೊರೆಯುತ್ತಾರಂತೆ!

ಪರರ ಪ್ರಶಂಸೆಗೂ ಹಾತೊರೆಯುತ್ತಾರಂತೆ!

‘‘ತಂತ್ರಜ್ಞಾನವನ್ನು ಬಹುವಾಗಿ ಉಪಯೋಗಿಸುವುದರ ಅಡ್ಡ ಪರಿಣಾಮವಾಗಿ ಮೊಬೈಲ್‌ನಲ್ಲಿ ಸೆಲ್ಫಿ, ಡಿಪಿ ಬದಲಾವಣೆ, ಚಾಟಿಂಗ್ ಗೆ ಅತಿಯಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಅತಿಯಾಗಿ ಸೆಲ್ಫಿ ತೆಗೆದುಕೊಳ್ಳಲು ಕೆಲವು ಕಾರಣಗಳಿವೆ. ವ್ಯಕ್ತಿ ಏಕಾಂಗಿತನದಿಂದ ಬಳಲುತ್ತಿದ್ದರೆ, ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿದ್ದರೂ ಅದನ್ನು ತೋರಿಸಿಕೊಳ್ಳದೇ ನಟಿಸುವುದು ಹಾಗೂ ತನ್ನ ಬಾಹ್ಯ ಸೌಂದರ್ಯದ ಬಗೆಗೆ ಅನ್ಯರಿಂದ ಪ್ರಶಂಸೆ ಗಿಟ್ಟಿಸಿಕೊಳ್ಳುವ ಹಪಾಹಪಿಯಿಂದ ಹೀಗೆ ವರ್ತಿಸುತ್ತಾನೆ. ಮನೋವಿಜ್ಞಾನ ಪ್ರಕಾರ, ಇದೊಂದು ಮಾನಸಿಕ ಏರುಪೇರಿನ ಪ್ರಕರಣ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ಸಾಬೀತಾಗಿದೆ ಎಂದು ಶರ್ಮಾ ತಿಳಿಸುತ್ತಾರೆ.

ನೀವು ನಂಬಲೇಬೇಕು, ಸೆಲ್ಫಿ ಸಾವಿನಲ್ಲಿ ಭಾರತಕ್ಕೆ ಅಗ್ರ ಸ್ಥಾನ!

ಆತ್ಮಹತ್ಯೆ ಮಾಡ್ಕೊಳ್ಳೋರೂ ಸೆಲ್ಫಿಗೆ ಮೊರೆ ಹೋಗೊದೇಕೆ?

ಆತ್ಮಹತ್ಯೆ ಮಾಡ್ಕೊಳ್ಳೋರೂ ಸೆಲ್ಫಿಗೆ ಮೊರೆ ಹೋಗೊದೇಕೆ?

ಇದೇ ವೇಳೆ ಹಂಟ್, ಸೆಲ್ಫಿಯಿಂದ ಸಾವಿಗೀಡಾದ ಹಾಗೂ ಆತ್ಮಹತ್ಯೆಗೂ ಮುನ್ನ ಸೆಲ್ಫಿ ತೆಗೆದುಕೊಳ್ಳುವ ಪ್ರವೃತ್ತಿ ಬಗೆಗೆ ವಿಶೇಷ ಅಧ್ಯಯನ ನಡೆಸಿದೆ.

ಸೆಲ್ಫೀ ಹುಚ್ಚಿನಿಂದ ಸಾಯುವವರ ಸಂಖ್ಯೆ ಭಾರತದಲ್ಲಿ ಹೆಚ್ಚು

ಸೆಲ್ಫೀ ಹುಚ್ಚಿನಿಂದ ಸಾಯುವವರ ಸಂಖ್ಯೆ ಭಾರತದಲ್ಲಿ ಹೆಚ್ಚು

ಸೆಲ್ಫೀ ಹುಚ್ಚಿನಿಂದ ಸಾಯುವವರ ಸಂಖ್ಯೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಎಂಬ ಆತಂಕಕಾರಿ ಅಂಶವನ್ನು ಸಮೀಕ್ಷೆಯೊಂದು ಬಯಲಿಗೆಳೆದಿದೆ. ಹೀಗೆ ಸೆಲ್ಫೀ ಸಾವಿಗೆ ಬಲಿಯಾಗುವುದರಲ್ಲಿ ೨೪ ವರ್ಷ ವಯಸ್ಸಿಗಿಂತ ಕಡಿಮೆ ಇರುವವರೇ ಹೆಚ್ಚು ಎಂದು ಸಮೀಕ್ಷೆಯೊಂದು ಹೇಳುತ್ತದೆ. ಎತ್ತರ ಕಟ್ಟಡದ ಮೇಲೆ ನಿಂದು ಸೆಲ್ಫೀ ಪೋಸು ಕೊಡುವುದರಲ್ಲಿ ಈ ವಯಸ್ಸಿನ ಹುಡುಗರಿಗೆ ಎಲ್ಲಿಲ್ಲದ ಆಸೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Doctors at Nimhans are treating patients who are compelled to take as many as a Hundred photos of themselves at a time. This is a new Phenomenon for the Nimhans centre, which deals with case of mobile and video game addiction among others. Over the past six months, doctors have been counselling and treating two patients for the selfie addiction.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ