ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಂಕ್ ಖಾತೆಗೂ ಆಧಾರ್ ಇರಲಿ ಎಂದು ಆಶಿಸಿದ ನಿಲೇಕಣಿ

By Srinath
|
Google Oneindia Kannada News

ಬೆಂಗಳೂರು, ಮಾರ್ಚ್ 24-ಪ್ರಸ್ತುತ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನಂದನ್ ನಿಲೇಕಣಿ ಅವರು ತಮ್ಮ ಮಹತ್ವಾಕಾಂಕ್ಷಿ ಆಧಾರ್ ಗುರುತಿನ ಚೀಟಿಯ ಮತ್ತಷ್ಟು ಪ್ರಯೋಜನಗಳ ಬಗ್ಗೆ ಗಮನ ಸೆಳೆದಿದ್ದಾರೆ.

ಚುನಾವಣೆಗೆ ಸ್ಪರ್ಧಿಸಲು ಆಧಾರ್ ಪ್ರಾಧಿಕಾರಕ್ಕೆ ರಾಜೀನಾಮೆ ನೀಡಿರುವ ನಿಲೇಕಣಿ ಅವರು ಆಧಾರ್ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅದರ ಬಳಕೆ/ಪ್ರಯೋಜನ ಮತ್ತಷ್ಟು ಹೆಚ್ಚಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ಮುಖ್ಯವಾಗಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಆಧಾರ್ ಕಡ್ಡಾಯವಾಗಬೇಕು ಎಂದು ಆಶಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಆದರೆ ಸುಪ್ರೀಕೋರ್ಟ್ ಆಧಾರ್ ಬೇಡವಾಗಿದೆ ಎಂದಿರುವಾಗ ನಿಲೇಕಣಿ ಅವರು ಆಧಾರ್ ಗುರುತಿನ ಚೀಟಿಗೆ ಹೆಚ್ಚಿನ ಪ್ರಾಮುಖ್ಯತೆ ಪ್ರಾಪ್ತಿಯಾಗಲಿ ಎಂದು ಆಶಿಸುತ್ತಿರುವುದು ಹಲವರ ಹುಬ್ಬೇರಿಸಿದೆ.

ಜೈನ್ ಅಂತಾರಾಷ್ಟ್ರೀಯ ವಾಣಿಜ್ಯ ಸಂಘಟನೆ ಸಮಾವೇಶ

ಜೈನ್ ಅಂತಾರಾಷ್ಟ್ರೀಯ ವಾಣಿಜ್ಯ ಸಂಘಟನೆ ಸಮಾವೇಶ

ಜೈನ್ ಅಂತಾರಾಷ್ಟ್ರೀಯ ವಾಣಿಜ್ಯ ಸಂಘಟನೆ ಆಯೋಜಿಸಿದ್ದ ಸಮಾವೇಶದಲ್ಲಿ 'ವಾಣಿಜ್ಯ ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಸುಧಾರಣೆ' ಕುರಿತು ಮಾತನಾಡಿದ ಅವರು ಹೀಗೆ ಅಭಿಪ್ರಾಯಟ್ಟರು. ಸ್ಪರ್ಧಾತ್ಮಕ ಯುಗದಲ್ಲಿ ಹೂಡಿಕೆದಾರರು, ವ್ಯಾಪಾರಿಗಳು, ಸಾಮಾನ್ಯರು ಬ್ಯಾಂಕ್ ವ್ಯವಹಾರಗಳಲ್ಲಿ ಆಧಾರ್ ಸಂಖ್ಯೆ ಅಳವಡಿಸಿಕೊಂಡರೆ ಅನುಕೂಲವಾಗಲಿದೆ. ಬ್ಯಾಂಕ್ ಗಳೂ ಸಹ ಗ್ರಾಹಕರ ಹಿತದೃಷ್ಟಿಯಿಂದ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಬೇಕು ಎಂದು ಪ್ರತಿಪಾದಿಸಿದರು.

 ಭಾರತದ ಕುರಿತಾದ ನಿಲೇಕಣಿ ದೂರದೃಷ್ಟಿ

ಭಾರತದ ಕುರಿತಾದ ನಿಲೇಕಣಿ ದೂರದೃಷ್ಟಿ

ಭಾನುವಾರವೂ ನಂದನ್ ನಿಲೇಕಣಿ ಅವರ ದಿನಚರಿ ಬಿಡುವಿಲ್ಲದ ಚಟುವಟಿಕೆಗಳಿಂದ ಕೂಡಿತ್ತು. ನಿಲೇಕಣಿ ಭಾನುವಾರ ಬೆಳಗ್ಗೆ ಅರಮನೆ ಮೈದಾನದಲ್ಲಿ ನಡೆದ ಜೈನ್ ಅಂತಾರಾಷ್ಟ್ರೀಯ ವಾಣಿಜ್ಯ ಸಂಘಟನೆಯ (ಜೆಐಟಿಒ) 2014ರ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ಸಾವಿರಾರು ಉದ್ಯಮಿಗಳು, ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಮತ್ತು ವೃತ್ತಿಪರರು ಸೇರಿದ್ದ ಸಮ್ಮೇಳನದಲ್ಲಿ ನಂದನ್ ನಿಲೇಕಣಿ ಅವರು ಭಾರತದ ಕುರಿತ ತಮ್ಮ ದೂರದೃಷ್ಟಿ, ಮುಂಬರುವ ವರ್ಷಗಳಲ್ಲಿ ದೇಶದ ಆರ್ಥಿಕ ಪ್ರಗತಿಯ ಕುರಿತು ಮಾತನಾಡಿದರು.

ಆಧಾರ್: ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಸಂದ ಜಯ

ಆಧಾರ್: ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಸಂದ ಜಯ

ಜೆಐಟಿಒ ಅಧ್ಯಕ್ಷರಾದ ನರೇಂದ್ರ ಕುಮಾರ್ ಬಲ್ದೋಟ ಅವರು ಈ ಸಂದರ್ಭದಲ್ಲಿ ಮಾತನಾಡುತ್ತ ನಂದನ್ ನಿಲೇಕಣಿ ಅವರ ಸಾಧನೆಗಳನ್ನು ಶ್ಲಾಘಿಸಿದರು. 'ನಂದನ್ ಅವರ ನಾಯಕತ್ವದಲ್ಲಿ ದೇಶದ ಮಹತ್ವಾಕಾಂಕ್ಷೆಯ ವಿಶಿಷ್ಟ ಗುರುತಿನ ಯೋಜನೆಯು ಇಂದು ಆಧಾರ್ ಸಂಖ್ಯೆಯನ್ನು ಸಾಕಾರಗೊಳಿಸಿ, ಈಗಿರುವ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯಗೊಳಿಸಿದೆ. ಇದು ಸಾಮಾಜಿಕ ಒಳಗೊಳ್ಳಿಸುವಿಕೆಗೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಸಂದ ಜಯವೆಂದೇ ಹೇಳಬಹುದು' ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕರ ಭೇಟಿಯಾದ ನಿಲೇಕಣಿ

ಕಾಂಗ್ರೆಸ್ ನಾಯಕರ ಭೇಟಿಯಾದ ನಿಲೇಕಣಿ

ಇಂದು ನಂದನ್ ನಿಲೇಕಣಿಯವರು ಕಾಂಗ್ರೆಸ್ಸಿನ ಹಲವಾರು ಪ್ರಮುಖ ನಾಯಕರನ್ನು ಭೇಟಿಯಾಗಿ ಪ್ರಸ್ತುತ ವಿದ್ಯಮಾನದ ಬಗ್ಗೆ ಚರ್ಚಿಸಿದರು. ನಗರ ಕಾಂಗ್ರೆಸ್ ಸಭೆಯು ಕೂಡ ಅರಮನೆ ಮೈದಾನದಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷದ ಸದಸ್ಯರುಗಳು ತಮ್ಮ ಸಂಪೂರ್ಣ ಬೆಂಬಲವನ್ನು ನಂದನ್ ಅವರಿಗಿದೆ ಎಂದು ಹೇಳಿದರಲ್ಲದೇ ಮುಂಬರುವ ದಿನಗಳಲ್ಲಿ ಅಳವಡಿಸಿಕೊಳ್ಳಬೇಕಾದ ಚುನಾವಣಾ ಕಾರ್ಯತಂತ್ರದ ಬಗ್ಗೆಯೂ ಗಂಭೀರವಾಗಿ ಚರ್ಚಿಸಿದರು.

ಧಾರ್ಮಿಕ ನಾಯಕರನ್ನು ಭೇಟಿಯಾದ ನಿಲೇಕಣಿ

ಧಾರ್ಮಿಕ ನಾಯಕರನ್ನು ಭೇಟಿಯಾದ ನಿಲೇಕಣಿ

'ನಂದನ್ ಅವರ ಸಾಧನೆಗಳನ್ನು ಗಮನಿಸಿದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಮತಗಳಿಸುವುದಕ್ಕೆ ಅವರಿಗೆ ಕಷ್ಟವೇನಿಲ್ಲ' ಎಂದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ಭರವಸೆ ವ್ಯಕ್ತಪಡಿಸಿದರು. ನಂತರ ನಂದನ್ ನಿಲೇಕಣಿ ಅವರು ದಕ್ಷಿಣ ಬೆಂಗಳೂರಿನ ಕೆಲವು ಧಾರ್ಮಿಕ ನಾಯಕರನ್ನು ಭೇಟಿಯಾಗಿ, ಗೌರವ ಸಲ್ಲಿಸಿದರು.

English summary
Lok Sabha Election 2014 - Bangalore South Congress candidate and UIDAI ex chairman Nandan Nilekani advocates Aadhaar number to be made compulsory for bank accounts. As it facilitates businessmen in a competitive business world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X