ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡೆಸ್ನಾನ ವಿರೋಧಿಸಿ ನಿಡುಮಾಮಿಡಿ ಶ್ರೀ ಉಪವಾಸ

|
Google Oneindia Kannada News

ಬೆಂಗಳೂರು, ಡಿ. 5 : ಮಡೆಸ್ನಾನ ವಿವಾದ ಮತ್ತೊಮ್ಮೆ ಆರಂಭವಾಗಿದೆ. ಶುಕ್ರವಾರದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಆರಂಭವಾಗಲಿದ್ದು, ಈ ಬಾರಿ ಮಡೆಸ್ನಾನಕ್ಕೆ ಅವಕಾಶ ನೀಡಬಾರದು ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮೀಜಿ ಬೆಂಗಳೂರಿನಲ್ಲಿ ಪತಿಭಟನೆ ಆರಂಭಿಸಿದ್ದಾರೆ.

ಬೆಂಗಳೂರಿನ ಬಸನವಗುಡಿಯಲ್ಲಿರುವ ನಿಡುಮಾಮಿಡಿ ಮಠದಲ್ಲಿ ಸುಮಾರು 20 ಕ್ಕೂ ಅಧಿಕ ಮಠಾಧೀಶರೊಂದಿಗೆ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಗುರುವಾರ ಮಠದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಗುರುವಾರ ಸೂರ್ಯೋದಯವಾದಾಗ ಆರಂಭವಾದ ಉಪವಾಸ ಸತ್ಯಾಗ್ರಹ ಸೂರ್ಯಾಸ್ತವಾಗುವ ತನಕ ನಡೆಯಲಿದೆ.

Nidumamidi Sri

ಶುಕ್ರವಾರದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಆರಂಭವಾಗಲಿದ್ದು ವಾರ್ಷಿಕ ಮಡೆಸ್ನಾನ ನಡೆಸಲು ದೇವಾಲಯ ಸಜ್ಜಾಗಿದೆ. ಆದ್ದರಿಂದ ಸ್ವಾಮೀಜಿಗಳು ಪ್ರತಿಭಟನೆ ಆರಂಭಿಸಿದ್ದು, ಈ ಬಾರಿ ಮಡೆಸ್ನಾನಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸುತ್ತಿದ್ದಾರೆ. (ಮಡೆಸ್ನಾನದಲ್ಲಿ ಬ್ರಾಹ್ಮಣರು ಕೂಡಾ ಇದ್ರು ಕಣ್ರೀ)

ಉಪವಾಸ ಆರಂಭಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಮಡೆಸ್ನಾನ ಅಹಸ್ಯಕರ, ಅಮಾನವೀಯ ಮತ್ತು ಹೇಯ ಕೃತ್ಯವಾಗಿದೆ. ದೇವರ ಹೆಸರಿನಲ್ಲಿ ಇಂತಹ ಕೃತ್ಯ ನಡೆಯಬಾರದು. ಆದ್ದರಿಂದ ಇಂತಹ ಹೀನ ಸಂಪ್ರದಾಯ ನಡೆಯುವುದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದಾಗಿ ಹೇಳಿದರು. (ಕುಕ್ಕೆ ಮಡೆಸ್ನಾನ ನಿಷೇಧಕ್ಕೆ ದಸಂಸ ಆಗ್ರಹ)

English summary
With only two days left for Champa Shashti, the day on which controversial ‘Made Made Snana’ ritual is practiced at Kukke Subramanya temple. Nidumamidi Sri begins protest in Bangalore on Thursday, December 5 against Made Snana practice. Swamiji taking to fasting from the sun rise in the morning till the sunset.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X