ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಸ್‌ ರಸ್ತೆಯ 2 ಮಾರ್ಗದಲ್ಲಿ ಟೋಲ್‌ ಪ್ಲಾಜಾ ವಿಸ್ತರಣೆ: ಎಲ್ಲೆಲ್ಲಿ?

By Nayana
|
Google Oneindia Kannada News

ಬೆಂಗಳೂರು, ಜೂನ್ 2: ಅತಿಯಾದ ಸಂಚಾರ ದಟ್ಟಣೆಯಿಂದಾಗಿ ಬಿಎಂಐಸಿ ಪ್ರಾಜೆಕ್ಟ್‌ನ ಅನುಷ್ಠಾನ ಸಂಸ್ಥೆ ಎನ್‌ಐಎಸ್ಸ್ಇ ಟೋಲ್‌ ಪ್ಲಾಜಾಗಳನ್ನು ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಮೈಸೂರು ರಸ್ತೆಗಳಿಗೆ ವಿಸ್ತರಿಸಿದೆ.

ಮಿತಿ ಮೀರಿನ ಸಂಚಾರ ದಟ್ಟಣೆಯಿಂದಾಗಿ ಟೋಲ್‌ಗಳ ಸಂಖ್ಯೆಯನ್ನು ವಿಸ್ತರಣೆ ಮಾಡಲಾಗಿದೆ. 41 ಕಿ.ಮೀ ದೂರದ ರಸ್ತೆ ಇದಾಗಿದೆ. ಹೊಸೂರು ರಸ್ತೆ, ಎಲೆಕ್ಟ್ರಾನಿಕ್‌ ಸಿಟಿಯಿಂದ ತುಮಕೂರು ರಸ್ತೆ, ಬನ್ನೇರುಘಟ್ಟ ರಸ್ತೆ ಮೂಲಕ ಕನಕಪುರ ರಸ್ತೆಯನ್ನು ಸೋಮಪುರ ಕ್ಲೋವರ್ ಲೀಫ್ ಇಂಟರ್‌ಚೇಂಜ್ ನಲ್ಲಿ ಸಂಪರ್ಕಿಸುತ್ತವೆ.

ಕೆಐಎಎಲ್ ಮಾರ್ಗದಲ್ಲಿ ಎರಡೂ ಬದಿ ಟೋಲ್ ಪಾವತಿಕೆಐಎಎಲ್ ಮಾರ್ಗದಲ್ಲಿ ಎರಡೂ ಬದಿ ಟೋಲ್ ಪಾವತಿ

ಲಿಂಕ್ ರಸ್ತೆ ಮತ್ತು ಎಕ್ಸ್‌ ಪ್ರೇಸ್‌ ವೇ ಆರಂಭದ ಹಂತ ಮೈಸೂರು ರಸ್ತೆ, ಮಾಗಡಿ ರಸ್ತೆ ಇದು ತುಮಕೂರು ರಸ್ತೆಯ ಎನ್‌ಎಚ್‌ 4 ರಲ್ಲಿ ಕೊನೆಗೊಳ್ಳಲಿದೆ.

NICE toll plaza extends to Electronic city interchange and Mysuru road

ಪೀಕ್ ಸಮಯಗಳಲ್ಲಿ ಮತ್ತು ವಾರಾಂತ್ಯಗಳಲ್ಲಿ ಎಲೆಕ್ಟ್ರಾನಿಕ್ ಸಿಟಿ ಇಂಟರ್ ಚೇಂಜ್ ಮತ್ತು ಮೈಸೂರು ರಸ್ತೆ ಇಂಟರ್ ಚೇಂಜ್ ಗಳಿಗೆ ಪ್ರವೇಶಿಸಲು‌ ವಿಳಂಬವಾಗುತ್ತಿದೆ. ಈ ಜಂಕ್ಷನ್ ನಲ್ಲಿ ಟ್ರಾಫಿಕ್ ದಟ್ಟಣೆಯನ್ನು ಸರಾಗಗೊಳಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಖಾಕಿ ಭದ್ರತೆಯಲ್ಲಿ ನವಯುಗ ಟೋಲ್ ನಲ್ಲಿ ಶುಲ್ಕ ಸಂಗ್ರಹ ಖಾಕಿ ಭದ್ರತೆಯಲ್ಲಿ ನವಯುಗ ಟೋಲ್ ನಲ್ಲಿ ಶುಲ್ಕ ಸಂಗ್ರಹ

ಎಸ್ಇಸಿಇ ಲಿ. ಎಲೆಕ್ಟ್ರಾನಿಕ್ ಸಿಟಿ ಜಂಕ್ಷನ್ ನಲ್ಲಿ 5-6 ಟೋಲ್ ಬೂತ್ ಗಳನ್ನು ಹೆಚ್ಚಿಸಿದೆ. 8 ರಷ್ಟಿದ್ದ ಲೇನ್‌ಗಳನ್ನು 12 ಕ್ಕೆ ಏರಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಇಂಟರ್ ಚೇಂಜ್ ಬಳಿ ಹೊಸೂರು ರಸ್ತೆಯಲ್ಲಿ ನಿರ್ಗಮಿಸುವ ವಾಹನಗಳಿಗೆ ಎಕ್ಸಿಟ್ ವೇಯಾಗಿ ಕಾರ್ಯನಿರ್ವಹಿಸುತ್ತದೆ.

NICE toll plaza extends to Electronic city interchange and Mysuru road

ನಿರ್ಗಮನದ ಒತ್ತಡವನ್ನು ನಿಭಾಯಿಸಲು ನಾಲ್ಕು ಬೈಡೈರೆಕ್ಷನಲ್ ಹಾದಿಗಳನ್ನು ರಚಿಸಲಾಗಿದೆ. ಇದೇ ರೀತಿ ಮೈಸೂರು ರಸ್ತೆ ಇಂಟರ್ ಚೇಂಜ್ ನಲ್ಲಿದ್ದ ಬೂತ್ ಗಳನ್ನು 3 ರಿಂದ 7 ಕ್ಕೆ ಏರಿಸಲಾಗಿದೆ. ಒಳಬರುವ ಹಾಗೂ ಹೊರಹೋಗುವ ವಾಹನಗಳ ದಟ್ಟಣೆ ಇದರಿಂದ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಇದು ಇಂಧನ ಫೋಲಾಗುವುದನ್ನು ತಪ್ಪಿಸಿ ಪ್ರಯಾಣಿಕರ ಪ್ರಯಾಣವನ್ನು ಮತ್ತಷ್ಟು ಸುಲಭವಾಗಿದೆ.

English summary
BMIC project implementation agency NICE has extended its toll plazas to Electronic city interchange and Mysuru road interchange to streamline heavy traffic in these sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X