ಮಂತ್ರಿ ಟೆಕ್ ಜೋನ್ ಗೆ 5 ಲಕ್ಷ ದಂಡ : ರಾಜೀವ್ ಚಂದ್ರಶೇಖರ್ ಮೆಚ್ಚುಗೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 14 : ಅಗರ ಬೆಳ್ಳಂದೂರು ಕೆರೆ ಒತ್ತುವರಿ ವಿಚಾರವಾಗಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು ಮಂತ್ರಿ ಟೆಕ್ ಜೋನ್ ಗೆ ಐದು ಲಕ್ಷ ರುಪಾಯಿ ದಂಡ ವಿಧಿಸಿದ್ದು, ಮುಂದಿನ ವಿಚಾರಣೆ ಮಾರ್ಚ್ ಇಪ್ಪತ್ತನೇ ತಾರೀಕಿಗೆ ಮುಂದೂಡಲಾಗಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಫಾರ್ವರ್ಡ್ ಫೌಂಡೇಷನ್ ನ ಪರವಾಗಿ ಸಜ್ಜನ್ ಪೂವಯ್ಯ ಹಾಜರಾಗಿದ್ದರು. ಪರಿಶೀಲನಾ ವರದಿಯನ್ನು ಹಾಜರುಪಡಿಸಿ, ವಿಸ್ತೃತವಾಗಿ ಪೂವಯ್ಯ ವಾದ ಮಂಡಿಸಿದ್ದರು. ರಾಷ್ತ್ರೀಯ ಹಸಿರು ನ್ಯಾಯಮಂಡಳಿ ತೀರ್ಪಿನ ಅನ್ವಯ ಆದೇಶ ಪಾಲಿಸದ ಬಗ್ಗೆ ಪ್ರಶ್ನೆ ಮಾಡಿ, ಮುಂದಿನ ವಿಚಾರಣೆಗೆ ಹಾಜರಾಗುವ ಮುನ್ನ ಐದು ಲಕ್ಷ ರುಪಾಯಿ ದಂಡ ಕಟ್ಟುವಂತೆ ಮಂತ್ರಿ ಟೆಕ್ ಜೋನ್ ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚನೆ ನೀಡಿದೆ.

ಬೆಂಗಳೂರು ಕೆರೆಗಳ ಬಗ್ಗೆ ತಾತ್ಸಾರ ಬೇಡ: ರಾಜೀವ್ ಚಂದ್ರಶೇಖರ್

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಮಂತ್ರಿ ಟೆಕ್ ಜೋನ್ ನವರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿಯಮಗಳನ್ನು ಅನುಸರಿಸದ ವಿಚಾರದ ಬಗ್ಗೆ ಧ್ವನಿ ಎತ್ತಿದ ಫಾರ್ವರ್ಡ್ ಫೌಂಡೇಷನ್ ಹಾಗೂ ನಮ್ಮ ಬೆಂಗಳೂರು ಫೌಂಡೇಷನ್ ನನ್ನು ಅಭಿನಂದಿಸುತ್ತೇನೆ.

NGT slaps a fine of 5 lakh rupees on Mantri Tech-zone for not filing compliance report

ನಗರ ಹಾಗೂ ರಾಜ್ಯದಲ್ಲಿ ಕಾನೂನು ಜಾರಿ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳದ ಸರಕಾರ ಇರುವಾಗ ಈ ರೀತಿಯ ನಡೆ ಬಹಳ ಮುಖ್ಯ. "ನೀವು ನಿಯಮಗಳನ್ನು ಉಲ್ಲಂಘಿಸಿ, ಬೆಂಗಳೂರು ನಗರವನ್ನೇ ಶೋಷಿಸಲು ಹೊರಟರೆ ಎಚ್ಚರ" ಎಂಬ ಸ್ಪಷ್ಟ ಸಂದೇಶವನ್ನು ಕಳಿಸಲಾಗಿದೆ. ಜತೆಗೆ ಬಿಲ್ಡರ್ ಗಳಿಗೆ ಹಾಗೂ ಕಾಂಟ್ರ್ಯಾಕ್ಟರ್ ಗಳನ್ನು ಉತ್ತರದಾಯಿಗಳಾಗಿ ಮಾಡ್ತೀವಿ. ಅದಕ್ಕೆ ನನ್ನ ಬೆಂಬಲವೂ ಇರುತ್ತದೆ ಎಂಬ ಸಂದೇಶ ಇದು ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
NGT has directed the MD of Mantri Tech-zone to be present before the Tribunal on the next date of hearing and a cost of Rs. 5 lakhs has been imposed on Mantri for not filing the compliance report till date. “I congratulate Forward Foundation and Namma Bengaluru Foundation", MP Rajiv Chandrasekhar reacted.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ