ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಲೂರು ತ್ಯಾಜ್ಯ ಘಟಕ ದುರವಸ್ತೆ: ಬಿಬಿಎಂಪಿಗೆ ಎನ್‌ಜಿಟಿ ತಪರಾಕಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 14: ಬಿಬಿಎಂಪಿಯು ಬಾಗಲೂರಿನಲ್ಲಿ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ತ್ಯಾಜ್ಯವನ್ನು ವಿಲೇವಾರಿ ಮಾಡಿದೆ.

ಬಾಗಲೂರು ಸೇರಿದಂತೆ ಬೆಂಗಳೂರು ವ್ಯಾಪ್ತಿಯಲ್ಲಿನ ಕ್ವಾರಿಗಳಲ್ಲಿ ಕಸ ವಿಲೇವಾರಿ ಕೈಗೊಂಡಿರವ ಕ್ರಮಗಳ ಬಗ್ಗೆ ಸೆ.30ರೊಳಗೆ ಕ್ರಿಯಾಯೋಜನೆ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಬಿಬಿಎಂಪಿಗೆ ಸೂಚನೆ ನೀಡಿದೆ.

ಕಸ ವಿಲೇವಾರಿ ಅಸಡ್ಡೆ: ಬಿಬಿಎಂಪಿಗೆ ಹೈಕೋರ್ಟ್ ತಪರಾಕಿ ಕಸ ವಿಲೇವಾರಿ ಅಸಡ್ಡೆ: ಬಿಬಿಎಂಪಿಗೆ ಹೈಕೋರ್ಟ್ ತಪರಾಕಿ

ಬಾಗಲೂರು ಬಳಿ‌ ಕಸ ಡಂಪಿಂಗ್ ಮಾಡಿದ್ದಕ್ಕೆ ಸ್ಥಳೀಯರಿಂದ ತೀವ್ರ ವಿರೋಧವಾಗಿತ್ತು‌. ಸ್ಥಳೀಯರು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೂ ದೂರು ನೀಡಿದ್ದರು. ವಿಷಯದ ಗಂಭೀರತೆ ಅರಿತ ನ್ಯಾಯಾಧೀಕರಣ ವಿಚಾರಣೆ ನಡೆಸಿ ತಕ್ಷಣವೇ ಬಾಗಲೂರು ಬಳಿ‌ ಹಾಕಿರುವ ಕಸವನ್ನು ಬೇರೆಡೆ ಸಾಗಿಸಿ ಎಂದು ಆದೇಶ ನೀಡಿತ್ತು.

NGT slams BBMP failing to install bio mining in Bagalur

ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಧೀಕರಣ ಕಸ ಸಾಗಿಸಿರುವ ಮಾಹಿತಿ ಕೇಳಿತು.‌ ಕಸ ಸ್ಥಳಾಂತರವಾಗಿಲ್ಲ ಎನ್ನುವುದು ಗೊತ್ತಾಗಿದ್ದೆ ತಡ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು‌. ಅಲ್ಲದೆ ಕೂಡಲೇ ಕಸ ಸಾಗಿಸುವ ಕೆಲಸ ಆರಂಭಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದೆ.

ನ್ಯಾ. ಆದರ್ಶಕುಮಾರ್‌ ಗೋಯಲ್‌ ನೇತೃತ್ವದ ಹಸಿರು ಪೀಠ ವಿಚಾರಣೆ ನಡೆಸಿತು, ಬಾಗಲೂರು ಸರ್ವೇ ನಂ.176 ನಿಯಮ ಬಾಹಿರವಾಗಿ ಬಿಬಿಎಂಪಿ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡಿದ್ದರಿಂದ ಅಂತರ್ಜಲವೂ ಕಲುಷಿತವಾಗಿದ್ದು, ಅದರ ದುರ್ವಾಸನೆಗೆ ಸುತ್ತಲೂ ವಾಸಿಸುವ ಜನರ ಬದುಕು ನರಕವಾಗಿದೆ.

ಸ್ವಚ್ಛ ಭಾರತದ ಹಣವನ್ನು ಕಟ್ಟಡಕ್ಕೆ ಬಳಸಿದ ಪಾಲಿಕೆ: ಮೋದಿಗೆ ದೂರು ಸ್ವಚ್ಛ ಭಾರತದ ಹಣವನ್ನು ಕಟ್ಟಡಕ್ಕೆ ಬಳಸಿದ ಪಾಲಿಕೆ: ಮೋದಿಗೆ ದೂರು

ಬಿಬಿಎಂಪಿ ಅಧಿಕಾರಿಗಳ ಮೇಲೆ ಆಕ್ರೋಶಗೊಂಡಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನ್ಯಾಯಮೂರ್ತಿಗಳು ಕಸದ ರಾಶಿಯಿಂದ ಮಿಥೇನ್ ಉತ್ಪತಿಯಾಗಿ ಬೆಂಕಿ ತಗಲುವ ಸಾಧ್ಯತೆ ಇವೆ. ಸೆಪ್ಟೆಂಬರ್ ಅಂತ್ಯದೊಳಗೆ ಸಂಪೂರ್ಣವಾಗಿ ಬಯೋ ಮೈನಿಂಗ್ ಆಗಬೇಕು. ಆ ಮುಖಾಂತರ ಬಾಗಲೂರು ಬಳಿಯ ಕಸ ಡಂಪಿಂಗ್ ಯಾರ್ಡ್ ಗೆ ಮುಕ್ತಿ ನೀಡಿ ಅಂತಾ ಮತ್ತೊಮ್ಮೆ ಒತ್ತಿ ಹೇಳಿದರು. ನಂತರ ಅಕ್ಟೋಬರ್ ೮ಕ್ಕೆ ವಿಚಾರಣೆ ಮುಂದೂಡಿತು.

ಈ ಹಿಂದೆ ರಾಷ್ಟ್ರೀಯ ಹಸಿರು ನ್ಯಾಯಧೀಕರಣವು ಹಲವು ಆದೇಶಗಳನ್ನು ನೀಡಿದೆ. ಅದರಲ್ಲಿ ಮುಖ್ಯವಾದುದು ಬಾಗಲೂರಿನಲ್ಲಿ ಬಿಬಿಎಂಪಿ ಡಂಪ್ ಮಾಡಿದ್ದ ಎಲ್ಲ ಕಸವನ್ನು ಹೊರ ತೆಗೆದು ಬೇರೆಡೆ ಸ್ಥಳಾಂತರ ಮಾಡುವುದು. ಬಿಬಿಎಂಪಿ ಮಾತ್ರ ಇದುವರೆಗೂ ಏನು ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರ ಶ್ರೀನಿವಾಸ್ ಪರ ವಕೀಲರು ಆರೋಪಿಸಿದರು.

ಮರ-ಗೋಡೆ ಮೇಲೆ ಭಿತ್ತಿಪತ್ರ ಅಂಟಿಸಿದ್ರೆ ಬೀಳುತ್ತೆ ಲಕ್ಷ ದಂಡ ಮರ-ಗೋಡೆ ಮೇಲೆ ಭಿತ್ತಿಪತ್ರ ಅಂಟಿಸಿದ್ರೆ ಬೀಳುತ್ತೆ ಲಕ್ಷ ದಂಡ

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಪರ ವಕೀಲರು ಈಗಾಗಲೇ ಬಾಗಲೂರಿನಲ್ಲಿ ಕಸ ಡಂಪ್ಪಿಂಗ್ ನಿಲ್ಲಿಸಿದ್ದೇವೆ, ಐದು ತಿಂಗಳಿನಿಂದ ಕಸ ತೆಗೆಯುವ ಕೆಲಸ ಮಾಡಲಾಗುತ್ತಿದೆ. ಶೀಘ್ರವಾಗಿ ಬಯೋ ಮೈನಿಂಗ್ ಮುಗಿಸುತ್ತೇವೆ ಎಂದು ಹೇಳಿದರು.

English summary
National Green Tribunal has slammed BBMP as failed in ensure scientific solid waste management at Bagalur quarry and bio mining to segregate different waste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X