ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಸರ ಸಮ್ಮತಿ ಪಡೆಯಲು ಮಂತ್ರಿಟೆಕ್‌ಝೋನ್‌ಗೆ ಎನ್‌ಜಿಟಿ ಸೂಚನೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 14: ಬೆಳ್ಳಂದೂರು ಕೆರೆಯ ಬಫರ್‌ ಪ್ರದೇಶದಲ್ಲಿ ಮಂತ್ರಿ ಟೆಕ್‌ಝೋನ್‌ ನಿರ್ಮಾಣ ಮಾಡಲು ಮುಂದಾಗಿದ್ದ ಮಂತ್ರಿಟೆಕ್‌ಗೆ ನಾಲ್ಕು ವಾರಗಳ ಒಳಗಾಗಿ ಪರಿಸರ ಸಮ್ಮತಿ ಪಡೆದುಕೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮುಖ್ಯಸ್ಥ ಆದರ್ಶ್‌ ಕುಮಾರ್ ಗೋಯೆಲ್ ಆದೇಶ ನೀಡಿದ್ದಾರೆ.

72ನೇ ಸ್ವಾತಂತ್ರ್ಯ ದಿನಾಚರಣೆ 2018

ಬೆಳ್ಳಂದೂರು ಕೆರೆಯ ಬಫರ್ ವಲಯದಲ್ಲಿ ಮಂತ್ರಿ ಟೆಕ್ ಝೋನ್ ನಿರ್ಮಾಣ ಮಾಡಲು ಮುಂದಾಗಿರುವ ದೊಡ್ಡ ಪ್ರಮಾಣದ ಸಮುಚ್ಚಯಕ್ಕೆ ನಾಲ್ಕು ವಾರಗಳ ಒಳಗಾಗಿ ಹೊಸದಾಗಿ ಪರಿಸರ ಸಮ್ಮತಿ ಪಡೆದುಕೊಳ್ಳಬೇಕಾಗಿದೆ.

ಮಂತ್ರಿ ಟೆಕ್ ಜೋನ್ ಗೆ 5 ಲಕ್ಷ ದಂಡ : ರಾಜೀವ್ ಚಂದ್ರಶೇಖರ್ ಮೆಚ್ಚುಗೆ ಮಂತ್ರಿ ಟೆಕ್ ಜೋನ್ ಗೆ 5 ಲಕ್ಷ ದಂಡ : ರಾಜೀವ್ ಚಂದ್ರಶೇಖರ್ ಮೆಚ್ಚುಗೆ

ಬಳಿಕ ಮಂತ್ರಿ ಟೆಕ್ ಝೋನ್ ನ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ 2016ರಲ್ಲಿ ನೀಡಿದ್ದ ಆದೇಶವನ್ನು ಆಧಾರವನ್ನಾಗಿಟ್ಟುಕೊಂಡು ರಾಜ್ಯ ಪರಿಸರ ಪರಿಣಾಮ ಅಧ್ಯಯನ ಪ್ರಾಧಿಕಾರ ಈ ಸಂಬಂಧ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಾಧೀಕರಣ ಹೇಳಿದೆ.

NGT orders Mantri tech to get environmental clearance certificate

ಮಂತ್ರಿ ಟೆಕ್ ಝೋನ್ ಗೆ 2012ರಲ್ಲಿ ಪರಿಸರ ಅನುಮತಿ ಸಿಕ್ಕಿತ್ತಾದರೂ ಭೂಮಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿಕೊಳ್ಳುತ್ತಿದೆ ಎಂದು ಬೆಂಗಳೂರಿನ ಫಾರ್ವರ್ಡ್ ಫೌಂಡೇಷನ್ ತಕರಾರು ತೆಗೆದಿತ್ತು. ಇದಾದ ಬಳಿಕ ಹಸಿರು ನ್ಯಾಯಾಧಿಕರಣ ಮಂತ್ರಿ ಟೆಕ್ ಝೋನ್ ದಂಡವನ್ನೂ ವಿಧಿಸಿತ್ತು.

ಎನ್‌ಜಿಟಿ ರಚಿಸಿರುವ ತಜ್ಞರ ತಂಡದಿಂದ ಇಂದು ಕೆರೆಗಳ ಪರಿಶೀಲನೆ ಎನ್‌ಜಿಟಿ ರಚಿಸಿರುವ ತಜ್ಞರ ತಂಡದಿಂದ ಇಂದು ಕೆರೆಗಳ ಪರಿಶೀಲನೆ

ಈ ಹಿನ್ನೆಲೆಯಲ್ಲಿ ಪರಿಸರ ಅನುಮತಿಯನ್ನು ಹಿಂಪಡೆಯಲಾಗಿತ್ತು. ಸೋಮವಾರದ ವಿಚಾರಣೆ ವೇಳೆ ಫಾರ್ವರ್ಡ್ ಫೌಂಡೇಷನ್ ಪರ ವಕೀಲ್ ಸಜನ್ ಪೂವಯ್ಯ ವಾದ ಮಂಡಿಸಿ, ಯೋಜನೆ ಪ್ರದೇಶ 62 ಎಕರೆಯಾಗಿದ್ದರೂ, 72 ಎಕರೆ ಭೂಪ್ರದೇಶಕ್ಕೆ ಪರಿಸರ ಅನುಮತಿ ಪಡೆದುಕೊಳ್ಳಲಾಗಿತ್ತು ಎಂದು ಆರೋಪಿಸಿದ್ದಾರೆ.

English summary
National Green Tribunal has given direction to Mantri Tech Zone to get fresh environmental clearance certificate from appropriate authority which constructing housing complex in Bellandur lake buffer zone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X