ಬೆಳ್ಳಂದೂರು ಕೆರೆ: ಸರ್ಕಾರದ ಮಾಹಿತಿ ಪರಿಶೀಲನೆಗೆ ಎನ್‌ಜಿಟಿ ಸಮಿತಿ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 12: ಬೆಳ್ಳಂದೂರು ಕೆರೆ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಛೀಮಾರಿ ಹಾಕಿದೆ.

ಕೆರೆ ಸಂರಕ್ಷಣೆ ಕುರಿತಂತೆ ಸರ್ಕಾರ ಕೈಗೊಂಡಿರುವ ಕ್ರಮಗಳ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಿದೆ. ಏ.14 ಮತ್ತು 15ರಂದು ಸಮಿತಿ ಸದಸ್ಯರು ಕೆರೆಗಳ ಪರಿಶೀಲನೆ ನಡೆಸಲಿದ್ದಾರೆ. ಬೆಳ್ಳಂದೂರು ಕೆರೆ ಕುರಿತಾಗಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾವೇದ್ ರಹೀಮ್ ಅವರಿದ್ದ ನ್ಯಾಯಪೀಠ, ರಾಜ್ಯ ಸರ್ಕಾರ ಸಲ್ಲಿಸಿರುವ ಕ್ರಿಯಾ ಯೋಜನೆಯಲ್ಲಿನ ಅಂಶಗಳು ಸುಳ್ಳಿನಿಂದ ಕೂಡಿವೆ.

ಕೆರೆಗಳ ಕೊಳೆ ತೊಳೆಯಲು ಬರಲಿವೆ ಆಮ್ಲಜನಕ ಹೆಚ್ಚಿಸುವ ಯಂತ್ರ

ಸರ್ಕಾರ ಸಲ್ಲಿಸಿರುವ ವರದಿಗೂ ವಾಸ್ತವದಲ್ಲಿ ನಡೆದಿರುವ ಕಾರ್ಯಗಳಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

NGT forms special team to inspect Bengaluru lakes

ಕ್ರಿಯಾ ಯೋಜನೆಯಲ್ಲಿನ ಅಂಶಗಳು ಸತ್ಯಕ್ಕೆ ದೂರವಾಗಿದ್ದು, ಸ್ಥಳೀಯ ಪ್ರಾಧಿಕಾರಗಳಿಂದ ಇದನ್ನು ನಿರೀಕ್ಷಿಸರಲಿಲ್ಲ ಎಂದು ಹೇಳಿದೆ. ಹಸಿರು ನ್ಯಾಯಾಧೀಕರಣ ನೇಮಿಸಿರುವ ತಂಡವು ಏ.14 ಮತ್ತು 15ರಂದು ಬೆಳ್ಳಂದೂರು, ಅಗರ, ವರ್ತೂರು ಕೆರೆಗಳ ಪರಿಶೀಲನೆ ನಡೆಸಲಿದೆ.

ಎನ್‌ಜಿಟಿಗೆ ಮಾಹಿತಿ ನೀಡಿರುವಂತೆ ಸರ್ಕಾರ ಕೆರೆಗಳ ಸಂರಕ್ಷಣೆಗೆ ಕೈಗೊಂಡಿರುವ ಕ್ರಮ, ವಾಸ್ತವದಲ್ಲಿ ನಡೆದಿರುವ ಕಾಮಗಾರಿಗಳು, 75 ಮೀಟರ್‌ವರೆಗೆ ಬಫರ್ ಜೋನ್, ಎಸ್‌ಜಿಟಿಗಳ ನಿರ್ವಹಣೆ ವೀಕ್ಷಿಸಿ ವರದಿಯನ್ನು ನ್ಯಾಯಾಧೀಕರಣಕ್ಕೆ ನೀಡಲಿದೆ.

ಬೆಳ್ಳಂದೂರು ಕೆರೆ ಕಸದಿಂದ ಸ್ವಲ್ಪ ಮುಕ್ತವಾಗಿದೆ ಆದರೆ ದುರ್ವಾಸನೆ?

ಎನ್‌ಜಿಟಿ ನಿರ್ದೇಶನದ ಬಹುತೇಕ ಅಂಶಗಳನ್ನು ಸರ್ಕಾರ ವರದಿ ನೀಡಿದೆ. ಆದರೆ ಕೆರೆ ಪ್ರದೇಶಗಳಲ್ಲಿ ಎಳ್ಳಷ್ಟೂ ಬದಲಾವಣೆಗಳು ಕಂಡುಬರದಿರುವುದರಿಂದ ರಾಜ್ಯ ಸರ್ಕಾರವು ಎನ್‌ಜಿಟಿ ಕೆಂಗಣ್ಣಿಗೆ ಗುರಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
National Green Tribunal formed a team to review implementation of its direction about lakes of bengaluru. The NGT has slammed the state Government which was failed to take necessary action to save the lakes. The NGT formes team will visit lakes of Bengaluru on April 13 and 14.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ