ಬೆಳ್ಳಂದೂರು ಕೆರೆ ಮಾಲಿನ್ಯ: 4 ಪ್ರಶ್ನೆಗೆ ಉತ್ತರ ಕೇಳಿದ ಎನ್ ಜಿಟಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 18: ಕಳೆದ ಮೂರ್ನಾಲ್ಕು ದಿನದಿಂದ ರಾಜಧಾನಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳ್ಳಂದೂರು ಕೆರೆಯ ಮಾಲಿನ್ಯದ ವಿರಾಟ ರೂಪದ ದರ್ಶನವಾಗಿದೆ. ಕೆರೆಯಲ್ಲಿ ಮತ್ತೆ ನೊರೆ ಏಳತೊಡಗಿದ್ದು, ದಾರಿಹೋಕರಿಗಷ್ಟೆ ಅಲ್ಲದೆ, ಹತ್ತಿರದ ಫ್ಲ್ಯಾಟ್ ಗಳಿಗೂ ನೊರೆ ಹಾರಿ ಜನರ ಪಾಡು ದೇವರಿಗೇ ಪ್ರೀತಿ ಎಂಬಂತಾಗಿದೆ.

ಆಗಸ್ಟ್ 17 ರಂದು ಬೆಳ್ಳಂದೂರು ಕೆರೆ ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ ಜಿಟಿ), ಕರ್ನಾಟಕ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳು ತಾನು ಕೇಳುವ 4 ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ಆದೇಶಿಸಿದೆ. ಆಗಸ್ಟ್ 22 ರಂದು ಮತ್ತೆ ವಿಚಾರಣೆ ನಡೆಯಲಿದ್ದು, ಅದಕ್ಕೂ ಮುನ್ನ ಅಧಿಕಾರಿಗಳು ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬೇಲೆಂದು ಎನ್ ಜಿಟಿ ಖಡಾಖಂಡಿತವಾಗಿ ಹೇಳಿದೆ.

NGT blames Karnataka government again regarding Bellandur lake issue

ಎನ್ ಜಿಟಿ ಕೇಳಲಿದ ಆ 4 ಪ್ರಶ್ನೆಗಳು ಇಂತಿವೆ.
* ಬೆಂಗಳೂರಿನ ಎಷ್ಟು ರಾಜಾಕಾಲುವೆಗಳನ್ನು ಸ್ವಚ್ಛಗೊಳಿಸಲಾಗಿದೆ?
* ರಾಜಾಕಾಲುವೆಗಳಿಂದ ಎಷ್ಟು ತ್ಯಾಜ್ಯಗಳು ಸಂಗ್ರಹವಾಗಿದೆ, ನಿರ್ದಿಷ್ಟವಾಗಿ ಯಾವ ಕೆರೆಯಿಂದ ಹೆಚ್ಚು ತ್ಯಾಜ್ಯ ಸಂಗ್ರಹವಾಗಿದೆ?
* ಆ ತ್ಯಾಜ್ಯಗಳನ್ನೆಲ್ಲ ಎಲ್ಲ ವಿಲೇವಾರಿ ಮಾಡಲಾಗಿದೆ?
* ಯಾವ್ಯಾವ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ?

ಎನ್ ಜಿಟಿಯ ಈ ನಾಲ್ಕು ಪ್ರಶ್ನೆಗಳಿಗೆ ಕರ್ನಾಟಕ ಸರ್ಕಾರ ಆಗಸ್ಟ್ 22 ರದು ಉತ್ತರಿಸಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
How many rajakaluves have been cleared? How much waste has been collected from RKs and particularly the lake? Where was the waste dumped? What are the preventive steps that were taken? These are the questions by NGT regarding Bellandur lake issue. Karnataka government has to answer these question on 22nd Aug

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ