ಬೆಂಗಳೂರಿನಲ್ಲಿ ನವ ವಿವಾಹಿತೆ ಆತ್ಮಹತ್ಯೆಗೆ ಶರಣು!

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 9 : ನವ ವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪತಿಯ ಮನೆಯವರು ಹತ್ಯೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಇಟ್ಟಮಡು ನಿವಾಸಿ ಚೇತನ್ ಅವರ ಪತ್ನಿ ಹರ್ಷಿತಾ (25) ಗುರುವಾರ ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನವೆಂಬರ್ 1ರಂದು ಹರ್ಷಿತಾ ಮತ್ತು ಚೇತನ್ ವಿವಾಹ ಮದ್ದೂರಿನಲ್ಲಿ ನಡೆದಿತ್ತು.

ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ, ಮೂವರು ಸಾವು

Newly married woman commits suicide in Ittamadu, Bengaluru

ಚೇತನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹರ್ಷಿತಾ ಅವರು ಸಹ 5 ವರ್ಷಗಳಿಂದ ಬೆಂಗಳೂರಿನಲ್ಲಿದ್ದು ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಪೋಷಕರ ಜೊತೆ ದೇವಾಲಯಕ್ಕೆ ಹೋಗಿದ್ದರು. ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆ ಕ್ಷಣ ಯಾರಾದರೊಬ್ಬರು ನಿಲ್ಲಿಸಿ ಮಾತನಾಡಿಸಿದ್ದರೆ!

ಚೇತನ್ ಮನೆಯವರು ನೇಣು ಕುಣಿಕೆ ಬಿಚ್ಚಿ ವಿಕ್ಟೋರಿಯಾ ಆಸ್ಪತ್ರೆಗೆ ಹರ್ಷಿತಾ ಅವರನ್ನು ದಾಖಲು ಮಾಡಿದ್ದರು. ಪತಿಯ ಮನೆಯವರು ಹತ್ಯೆ ಮಾಡಿದ್ದಾರೆ, ಈಗ ಆತ್ಮಹತ್ಯೆ ಎಂದು ಹೇಳುತ್ತಿದ್ದಾರೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

ಖಿನ್ನತೆ, ಆತ್ಮಹತ್ಯೆ ವಿರುದ್ಧ ಸಮರ ಸಾರಿದ್ದ ಮಹಿಳಾ ಬೈಕರ್ ಸನಾ ದುರಂತ ಅಂತ್ಯ

ಆರು ತಿಂಗಳ ಹಿಂದೆ ಚೇತನ್-ಹರ್ಷಿತಾ ನಿಶ್ಚಿತಾರ್ಥ ನಡೆದಿತ್ತು. ಕೃಷಿಕರಾದ ಹರ್ಷಿತಾ ಮನೆಯವರು ನವೆಂಬರ್ 1ರಂದು ಮದ್ದೂರಿನಲ್ಲಿ ಅದ್ದೂರಿಯಾಗಿಯೇ ವಿವಾಹ ಮಾಡಿಕೊಟ್ಟಿದ್ದರು.

ಗುರುವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಕಾಫಿ ಕುಡಿಯಲೆಂದು ಚೇತನ್ ಕೋಣೆಯಿಂದ ಹೊರಬಂದಾಗ ಹರ್ಷಿತಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚನ್ನಮ್ಮನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 25-year-old newly married woman committed suicide by hanging herself in husband house in Ittamadu, Bengaluru on November 9, 2017. The deceased identified as Harshitha. Chetan and Harshitha marriage held on November 1 at Madduru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ