ಬಾಡಿಗೆ ಏರಿಸಿ ವ್ಯಾಪಾರಿಗಳಿಗೆ ಬರೆ ಎಳೆದ ಎಪಿಎಂಸಿ ಆಡಳಿತ ಮಂಡಳಿ

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 20 : ಎಪಿಎಂಸಿ ವ್ಯಾಪಾರಿಗಳಿಗೆ ಏಕಾಏಕಿ ಬಾಡಿಗೆ ದರ ಏಳರಿಂದ ಎಂಟು ಪಟ್ಟು ಏರಿಕೆ ಮಾಡಿ ಆಡಳಿತ ಮಂಡಳಿ ಶಾಕ್ ನೀಡಿದೆ. ಏಕಾಏಕಿ ಬಾಡಿಗೆ ದರ 7 ರಿಂದ 8 ಪಟ್ಟು ಹೆಚ್ಚಳ ಮಾಡಿದೆ. ಬಾಡಿಗೆ ದರ ಪ್ರತಿ ವರ್ಷಕ್ಕೆ ಶೇ.10ರಷ್ಟು ಹೆಚ್ಚಳ ಮಾಡುವುದು ರೂಢಿ. ಆದರೆ ಈ ಬಾರಿ ಬಾಡಿಗೆಯನ್ನು ಬೇಕಾಬಿಟ್ಟಿ ಏರಿಕೆ ಮಾಡಲಾಗಿದೆ.

800 ಪಾವತಿಸುತ್ತಿದ್ದವರಿಗೆ ಇದೀಗ 10.500 ರೂ. ಹಾಗೂ 3975 ರೂ. ಪಾವತಿಸುತ್ತಿದ್ದವರಿಗೆ 22 ಸಾವಿರ ರೂ. 8 ಸಾವಿರ ಇದ್ದವರಿಗೆ 15 ಸಾವಿರ ಹೀಗೆ ಮನಸೋ ಇಚ್ಛೆ ಬಾಡಿಗೆಯನ್ನು ಹೆಚ್ಚಿಸಿ, 2016ರ ಅಕ್ಟೋಬರ್ 1 ರಿಂದಲೇ ಜಾರಿಗೆ ಬರುವಂತೆ ಇದೀಗ ನೋಟಿಸ್ ನೀಡಲಾಗಿದೆ.

New year shock to vendors from APMC

ಎಪಿಎಂಸಿಯಲ್ಲಿ ಲೀವ್ ಆಂಡ್ ಲೈಸನ್ಸ್ ಆಧಾರದ ಮೇಲೆ ಮಳಿಗೆಗಳನ್ನು ಹಂಚಿಕೆ ಮಾಡುವ ಪದ್ಧತಿ ಇದೆ. 55 ತಿಂಗಳ ನಂತರ ಮಾರುಕಟ್ಟೆ ಬೆಲೆಯನ್ನು ಪಾವತಿಸಿ, ಮಳಿಗೆಗಳನ್ನು ಸ್ವಂತದ್ದಾಗಿಸಿಕೊಳ್ಳುವ ಅವಕಾಶ ಈ ಹಿಂದೆ ಇತ್ತು. ಈ ವ್ಯವಸ್ಥೆಯನ್ನು ಮೂರು ವರ್ಷಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು.

ಇದೀಗ ಮೂರು ತಿಂಗಳಿಂದ ಸ್ವಂತಮಾಡಿಕೊಳ್ಳುವ ನಿಯಮವನ್ನು ಮತ್ತೆ ಮುಂದುವರೆಸಲಾಗಿದೆ. ಅದರಂತೆ ಪ್ರಕ್ರಿಯೆಗಳೂ ಆರಂಭವಾಗಿದೆ. ಈ ಅವಧಿಯಲ್ಲಿಏ ಎಪಿಎಂಸಿ ಸಮಿತಿಯು ವ್ಯಾಪಾರಿಗಳಿಗೆ ಲೀವ್ ಆಂಡ್ ಲೈಸನ್ಸ್ ನವೀಕರಣದ ನೆಪದಲ್ಲಿ ವಿಪರೀತ ಬಾಡಿಗೆ ವಿಧಿಸಿ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ದೂಡಿದೆ.

ಅಷ್ಟೇ ಅಲ್ಲದೆ, ಫೆಬ್ರವರಿಯಲ್ಲಿ ವ್ಯಾಪಾರಿಗಳ ಪರವಾನಗಿ ನವೀಕರಣ ಕಾರ್ಯ ನಡೆಯುತ್ತದೆ. ಈ ನವೀಕರಣದ ಸಂದರ್ಭದಲ್ಲಿ ಸಮಿತಿಯ ಅಧಿಕಾರಿಗಳು ವ್ಯಾಪಾರಿಗಳಿಂದ ಐದು ವರ್ಷದ ಬ್ಯಾಂಕ್ ಸ್ಟೇಟ್ ಮೆಂಟ್ , ಪಾಸ್ ಬುಕ್ ನೀಡುವಂತೆ ದಿನಕ್ಕೊಂದುಸುತ್ತೋಲೆಗಳನ್ನು ನೀಡಿ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New year shock to vendors from APMC: Yeshwantapura APMC increased 7 to 8 times it's rent. Usually they increasing 10%. Earlier they are giving Rs 800 now its Rs1500.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ