ಹೊಸ ವರ್ಷ: ವೀಲ್ಹಿಂಗ್ ಮೇಲೆ ಪೊಲೀಸ್ ಹದ್ದಿನಕಣ್ಣು

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 26 : ನಗರದಲ್ಲಿ ಹೊಸ ವರ್ಷಾಚರಣೆ ವೇಳೆ ಬೈಕ್ ಸವಾರರು ಹದ್ದು ಮೀರದಂತೆ ಪೊಲೀಸರು ಕಟ್ಟೆಚ್ಚರ ವಹಿಸಲಿದ್ದಾರೆ. ಡ್ರ್ಯಾಗ್ ರೇಸಿಂಗ್, ವ್ಹೀಲಿಂಗ್ ವೀರರ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ.

ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕೆ ಮೆಟ್ರೋ ಸಂಚಾರ ಅವಧಿ ವಿಸ್ತರಣೆ

ಡಿಸೆಂಬರ್ 31ರ ರಾತ್ರಿ 10 ರಿಂದ ಜನವರಿ1 ಬೆಳಗ್ಗೆವರೆಗೆ ಫ್ಲೈ ಓವರ್ ಮೇಲೆ ಬೈಕ್ ಸವಾರಿ ನಿಷೇಧಿಸಲಾಗಿದೆ. ಅತಿ ಹೆಚ್ಚು ವಾಹನಗಳು ಹಾಗೂ ವೇಗವಾಗಿ ಸಂಚರಿಸುವ ಮಾರ್ಗಗಳಾದ ಔಟರ್ ರಿಂಗ್ ರೋಡ್, ಓಲ್ಡ್ ಮದ್ರಾಸ್ ರೋಡ್ ಇನ್ನಿತರೆ ಫ್ಲೈ ಓವರ್ ಗಳ ಮೇಲೆ ಕಣ್ಣಿಡಲಾಗುತ್ತದೆ. ಯಾವುದೇ ರೀತಿಯ ಅಹಿತಕರ ಘಟನೆಗಳು, ಅಪಘಾತಗಳು ಸಂಭವಿಸಬಾರದು ಎನ್ನುವುದು ಮುಖ್ಯ ಉದ್ದೇಶವಾಗಿದೆ.

New year's eve: Eagle eye on bike wheeling

ಬೈಕ್ ಡ್ರ್ಯಾಗಿಂಗ್, ಸ್ಟಂಟ್ ಗಳು ನಡೆಯುವ ಸಂಭಾವ್ಯವಿರುವ ಸಾಕಷ್ಟು ಫ್ಲೈಓವರ್ ಗಳನ್ನು ಪರಿಶೀಲಿಸಲಾಗುತ್ತಿದೆ. ಡಿಸೆಂಬರ್ 23 ರಿಂದ ನಗರಾದ್ಯಂತ ಡ್ರಂಕ್ ಡ್ರೈವಿಂಗ್ ಪರಿಶೀಲನೆ ನಡೆಸಲಾಗುತ್ತಿದೆ ಇದು ಜನವರಿ 1 ರವರೆಗೂ ನಡೆಯಲಿದೆ. ಜತೆಗೆ ಗುಂಪು ಗುಂಪಾಗಿ ಬೈಕ್ ಸವಾರರು ಗಾಡಿಗಳನ್ನು ಚಲಾಯಿಸಿದರೆ ಅವರ ವಿರುದ್ಧವೂ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಜತೆಗೆ ಜಿಗ್ ಜ್ಯಾಗ್ ಬ್ಯಾರಿಕೇಡ್ ಗಳನ್ನು ರಸ್ತೆಗಳಲ್ಲಿ ಅಲ್ಲಲ್ಲಿ ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಮುಂದಿನ ಸಭೆಯಲ್ಲಿ ಇನ್ನು ಹೆಚ್ಚಿನ ಕ್ರಮಗಳ ಕುರಿತು ಚರ್ಚಿಸಲಾಗುತ್ತದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಆರ್. ಹಿತೇಂದ್ರ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
If two-wheeler riders are planning to indulge in drag racing, wheelies and other stunts on December 31st night, they should think twice before taking their bikes out on the roads. Sa the city traffic police have formed special teams to keep a tight vigil on high-speed stretches.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ