ಸಂಭ್ರಮಕ್ಕೆ ತಡೆಯಿಲ್ಲ, ನಿಯಮ ಉಲ್ಲಂಘಿಸಿದರೆ ಬಿಡಲ್ಲ!

Posted By:
Subscribe to Oneindia Kannada

ಬೆಂಗಳೂರು,ಡಿಸೆಂಬರ್ 24: ಹೊಸವರ್ಷಕ್ಕೆ ದಿನಗಣನೆ ಪ್ರಾರಂಭವಾಗಿರುವ ಬೆನ್ನಲ್ಲೆ ಸಂಭ್ರಮಾಚರಣೆ ವೇಳೆ ಸಾರ್ವಜನಿಕ ಪ್ರದೇಶಗಳಲ್ಲಿ ಅಸಭ್ಯವರ್ತನೆ ನಡೆಸಿದವರಿಗೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಎಚ್ಚರಿಸಿದ್ದಾರೆ.

ಹೊಸವರ್ಷದ ಸಂಭ್ರಮಕ್ಕೆ ನಾವು ತಡೆ ಮಾಡುವುದಿಲ್ಲ. ಸಂಭ್ರಮಾಚರಣೆ ವೇಳೆ ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ವಿವಿಧ ಸ್ಥಳಗಳಲ್ಲಿ ಯಾರಿಗಾದರೂ ತೊಂದರೆ ಕೊಟ್ಟರೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾದರೆ ತಕ್ಷಣವೇ ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.[ಜನಪ್ರಿಯ 25 ಹೊಸ ವರ್ಷದ ರೆಸಲೂಷನ್ಸ್]

New Year's Celebration 2017: Police tightened security

ಇನ್ನು ಸಂಭ್ರಮಾಚರಣೆ ನಡೆಯುವ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗುವುದು. ಭದ್ರತೆಯ ಕುರಿತು ನಗರದ ಎಲ್ಲಾ ಹೆಚ್ಚುವರಿ ಪೊಲೀಸ್ ಆಯುಕ್ತರು ಡಿಸಿಪಿಗಳ ಸಭೆ ನಡೆಸಿ ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ಥ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ ಎಂದರು.[ಹೊಸವರ್ಷಕ್ಕೆ ಒಂದಷ್ಟು ತಮಾಷೆಯ ಸಂಕಲ್ಪಗಳು!]

2017 ರ ಹೊಸ ವರ್ಷಾಚರಣೆ ಪ್ರಯುಕ್ತ ಬಾರ್ ಮತ್ತು ರೆಸ್ಟೋರೆಂಟ್ ಗಳ ಕಾರ್ಯಾವಧಿಯನ್ನು 2 ದಿನಗಳ ಮಟ್ಟಿಗೆ ವಿಸ್ತರಿಸಲಾಗಿದ್ದು ಡಿಸೆಂಬರ್ 31 ಹಾಗೂ ಜನವರಿ 1ರ ಮಧ್ಯರಾತ್ರಿ 2 ಗಂಟೆಗಳ ವರೆಗೂ ಬಾರ್ ಮತ್ತು ರೆಸ್ಟೋರೆಂಟ್ ಗಳ ಕಾರ್ಯಾನಿರ್ವಹಿಸಲಿವೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New Year's Celebration: Police tightened security in bengaluru. Lest anyone to disturb the opportunity to celebrate the New Year. Strict action would damage public property says City Police Commissioner N.S. Megharik
Please Wait while comments are loading...