ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಕಲಾ ಪರಿಷತ್ : ಹೊಸ ವರ್ಷದ ಅರ್ಬನ್ ಬಜಾರ್ ಸೇಲ್

|
Google Oneindia Kannada News

ಬೆಂಗಳೂರು ಡಿಸೆಂಬರ್ 26: ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಸಮಯದಲ್ಲಿ ಮನೆ ಹಾಗೂ ಮನಗಳನ್ನು ದೇಶದ ಪ್ರತಿಷ್ಠಿತ ಹಾಗೂ ಹೆಮ್ಮೆಯ ಕರಕುಶಲ ಕಲಾವಿದರ ಕಲಾಕೃತಿಗಳಿಂದ ಆಲಂಕರಿಸುವ ಸುವರ್ಣ ಅವಕಾಶ ಡಿಸೆಂಬರ್ 25 ರಿಂದ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಅನಾವರಣಗೊಂಡಿದೆ.

ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಸಂಧರ್ಭದಲ್ಲಿ ಭಾರತ ದೇಶದ ಮೂಲೆ ಮೂಲೆಗಳಲ್ಲಿರುವ ಅತ್ಯಂತ ಹೆಮ್ಮೆಯ ಕರಕುಶಲ ಕಲಾವಿದರನ್ನು ಒಂದೇ ವೇದಿಕೆಯಡಿಯಲ್ಲಿ ತರುವ ಉದ್ದೇಶದಿಂದ, ಗ್ರಾಂಡ್ ಫ್ಲಿಯಾ ಮಾರ್ಕೆಟ್ ಚಿತ್ತಾರದ ಸಹಯೋಗದಲ್ಲಿ "ಅರ್ಬನ್ ಬಜಾರ"ನ್ನು ಪ್ರಸ್ತುತಪಡಿಸುತ್ತಿದೆ.

New Year Bonanza : Urban Bazaar at Chitrakala Parishath

ಈ ಬಜಾರ್ ನಲ್ಲಿ ದೇಶದ ಮೂಲೆ ಮೂಲೆಯ ಕಲಾವಿದರ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ. ಒರಿಸ್ಸಾ, ರಾಜಸ್ತಾನ್, ಟ್ರೈಬಲ್ ಇನ್ನಿತರೆ ಆಭರಣಗಳು. ವುಡನ್ ಫೌಂಟೇನ್, ವುಡನ್ ವಾಚ್, ವುಡನ್ ಡ್ರೈಫ್ರೂಟ್ ಬಾಕ್ಸ್. ಥರಥರದ ಪಿಂಗಾಣಿ ವಸ್ತುಗಳಿವೆ.

ಎಲ್ಲಾ ರಾಜ್ಯಗಳ ಕಲಾವಿದರು ನಿರ್ಮಿಸಿರುವ ತರತರಹದ ಸೀರೆಗಳು, ಎಲ್ಲಾ ತರಹದ ಕುರ್ತಿಗಳು. ಕಲಾಂಕರಿ, ಕೊಲ್ಕೊತ್ತಾ ಬ್ಯಾಗಗಳು, ಕನ್ನೂರ್ ಕಾಟನ್ ಕರ್ಟನ್‍ಗಳು, ತರತರಹದ ಬೆಡ್ ಶೀಟ್‍ಗಳು ಈ ಬಾರಿಯ ಹೈಲೈಟ್.

ಅಲ್ಲದೆ, ಇಲ್ಲಿ ಹುಲ್ಲಿನ ಆಂಧ್ರಪ್ರದೇಶದ ಪಪೆಟ್‍ಗಳು, ಹಾಸು, ಬೆಳ್ಳಿಯ ಸೂಕ್ಷ ಕೆತ್ತನೆಯ ಆಭರಣಗಳು, ಸೆಣಬಿನ ಚಪ್ಪಲಿ, ಅಂದದ ಆಟಿಕೆಗಳು, ಜವಳಿ ಮತ್ತು ಕಚೇರಿಗೆ ಉಪಯುಕ್ತ ಸಾಮಾಗ್ರಿಗಳು ಸೇರಿದಂತೆ ಅನೇಕ ಕರಕುಶಲ ವಸ್ತುಗಳು ಲಭ್ಯವಿದೆ.

New Year Bonanza : Urban Bazaar at Chitrakala Parishath

ಪುರಾನಾ ಸಾಹು ಅವರ ಕಣ್ಮನಸೆಳೆಯುವ ಪುರಾತನ ಹಿತ್ತಾಳೆಯ ಕರಕುಶಲವಸ್ತುಗಳು. ಅಲ್ಲದೆ ಅವರ ಸೌರ ಚಿತ್ರಕಲಾಕೃತಿಗಳು ಇಲ್ಲಿ ಲಭ್ಯ. ಪೌರ್ಣ ಚಂದ್ರ ಮೊಹಪಾತ್ರ ಅವರ ಬೆಳ್ಳಿಯ ಆಭರಣಗಳು ಆಧುನಿಕತೆಯ ಹಿನ್ನಲೆಯಲ್ಲಿ ಪುರಾತನ ಸೊಬಗನ್ನು ಬಿಂಬಿಸಲಿವೆ. ಪೆಂಡೆಟ್‍ಗಳು, ಬಳೆಗಳು, ಹೇರ್ ಪಿನ್‍ಗಳು ಅಲ್ಲದೆ ಮುತ್ತಿನ ಆಭರಣದ ಕುಂಕುಮ ಬಾಕ್ಸ್ ಗಳು ಇಲ್ಲಿ ಲಭ್ಯವಿವೆ.

ಅರ್ಬನ್ ಬಜಾರ್ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್
(ಶಿವಾನಂದ ವೃತ್ತದ ಬಳಿ)
ದಿನಾಂಕ: ಡಿಸೆಂಬರ್ 25 ರಿಂದ ಡಿಸೆಂಬರ್ 30 ರ ವರೆಗೆ
ಸಮಯ: ಬೆಳಿಗ್ಗೆ 11 ಗಂಟೆಯಿಂದ ಸಂಜೆ 7.30 ರ ವರೆಗೆ

English summary
New Year Bonanza for consumers, Urban Bazaar is open fro December 25 to 30th ta Karnataka Chitrakala Parishath, Kumara Krupa road, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X