ಮದ್ದೇವಣಾಪುರ ಮಠದ ಸ್ವಾಮಿಯ ಕಾಮಪುರಾಣಕ್ಕೆ ಹೊಸ ಟ್ವಿಸ್ಟ್

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 27: ಯಲಹಂಕದ ಹುಣಸಮಾರನಹಳ್ಳಿಯ ಮದ್ದೇವಣಾಪುರ ಜಂಗಮ ಮಠದ ಸ್ವಾಮೀಜಿ ಪುತ್ರ ದಯಾನಂದ ಮತ್ತು ಸ್ಯಾಂಡಲ್ ವುಂಡ್ ನಟಿ ಜೊತೆಗಿನ ಕಾಮಪುರಾಣ ಇದೀಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ.

ಮದ್ದೇವಣಾಪುರ ಮಠದಲ್ಲಿ ರಾಸಲೀಲೆ, ಸ್ವಾಮೀಜಿ ನಾಪತ್ತೆ

ರಾಸಲೀಲೆ ವಿಡಿಯೋಗೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಆರೋಪ-ಪ್ರತ್ಯಾರೋಪಗಳು ಮುಂದುವರೆದಿವೆ. ಇನ್ನು ಕೆಲವರು ಇದೊಂದು ಹನಿಟ್ರ್ಯಾಪ್ ದಂಧೆ ಎನ್ನುತ್ತಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆಯೇ ಈ ರಾಸಲೀಲೆ ನಡೆದಿದ್ದು, ವಿಡಿಯೋವನ್ನು ಲೀಕ್ ಆಗದಂತೆ ಮಾಜಿ ಕಮೀಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರ ನೇತೃತ್ವದಲ್ಲಿ ಸಂಧಾನ ನಡೆದಿತ್ತು. ಆದರೆ, ಇದೀಗ ಹಣಕ್ಕಾಗಿ ಈ ವಿಡಿಯೋವನ್ನು ಬೆಳಕಿಗೆ ತಂದಿದ್ದಾರೆ ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಾಮಯ್ಯ ತಿಳಿಸಿದ್ದಾರೆ.

New twist of Maddevanapura mutt Nnanjeshwar Swamij scandal with actress

ಮದ್ದೇವಣಾಪುರ ಮಠದ ಪೀಠಾಧಿಪತಿ ಶಿವಚಾರ್ಯ ಸ್ವಾಮೀಜಿ ಪುತ್ರ ದಯಾನಂದ ಅಲಿಯಾಸ್ ನಂಜೇಶ್ವರ ಸ್ವಾಮೀಜಿಯ ಬಳಿ ಹನಿಟ್ರ್ಯಾಪ್ ಮೂಲಕ ಹಣ ವಸೂಲಿಗೆ ಇಳಿದಿದ್ದಾರೆ. ಮಠದ ಆಸ್ತಿಗಾಗಿ ದಯಾನಂದ ಅವರ ಸಂಬಂಧಿಕರೇ ಈ ಕೃತ್ಯ ಮಾಡಿಸಿದ್ದಾರೆ ಎಂದು ರಾಮಯ್ಯ ಆರೋಪ ಮಾಡಿದ್ದಾರೆ.

ದಯಾನಂದ ಮತ್ತು ಸ್ಯಾಂಡಲ್ ವುಂಡ್ ನಟಿ ಜೊತೆಗಿನ ರಾಸಲೀಲೆ ವಿಡಿಯೋ ಗುರುವಾರ ಬಹಿರಂಗಗೊಂಡಿತ್ತು. ಇದಾದ ಬಳಿಕ ಮಠದ ಹತ್ತಿರ ನೂರಾರು ಜನರು ಸೇರಿ ಪ್ರತಿಭಟನೆ ನಡೆಸಿದರು.

ದಯಾನಂದ, ಹಿರಿಯ ಸ್ವಾಮೀಜಿ ಹಾಗೂ ಅವರ ಕುಟುಂಬದವರನ್ನು ಮಠದಿಂದ ಹೊರ ಹಾಕಬೇಕೆಂದು ಒತ್ತಾಯಿಸಿ, ಸಮಾಜದ ಮುಖಂಡರು ಹಾಗೂ ಭಕ್ತರು ಆಹೋರಾತ್ರಿ ಮಠದ ಬಳಿ ಧರಣಿ ನಡೆಸಿದ್ದಾರೆ.

ಮಠದ ಪೀಠಾಧಿಪತಿಯಾಗಿ ಬೇರೆಯವರನ್ನು ನಿಯೋಜಿಸಬೇಕು. ಮೊದಲು ಪರಾರಿಯಾದ ದಯಾನಂದನನ್ನು ಬಂಧಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New twist of Maddevanapura mutt Nnanjeshwar Swamiji sex scandal with the actress. The Video made crores of rupees by honey trapping Dayananda alias Nnanjeshwar, said Ex gram panchayath member Ramaiah.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ