ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಸೋದ್ಯಮ ಇಲಾಖೆ: ಪ್ರೇಕ್ಷಣೀಯ ಸ್ಥಳಗಳಿಗೆ ವಿಶೇಷ ಪ್ಯಾಕೇಜ್

|
Google Oneindia Kannada News

ಬೆಂಗಳೂರು, ಫೆಬ್ರವರಿ 17 : ದೇಶ-ವಿದೇಶಿಯರು ಹಾಗೂ ಸ್ಥಳೀಯರಿಗೆ ಪ್ರವಾಸಿ ತಾಣಗಳನ್ನು ಪರಿಚಯಿಸುವ ಉದ್ದೇಶದಿಂದ ವಿಶೇಷ ಪ್ರವಾಸ ಯೋಜನೆಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ರೂಪಪಿಸಿದೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಕೆಸ್ಆರ್ ಟಿಸಿ ಜತೆ ಕೈಜೋಡಿದೆ. ಈ ಮೂಲಕ ಪ್ರವಾಸೋದ್ಯಮ ಪ್ರಚಾರ, ಪ್ಯಾಕೇಜ್ ಟೂರ್ ಗಳ ಬಗ್ಗೆ ಮಾಹಿತಿ ತಲುಪಿಸಲು ಇದು ಸಹಕಾರಿಯಾಗಲಿದೆ. ಇದಕ್ಕಾಗಿ ಹೊಸ ಅಪ್ಲಿಕೇಷನ್ ಕೂಡ ಬಿಡುಗಡೆ ಮಾಡಲಾಗಿದೆ.

ಅಪ್ಲಿಕೇಷನ್ ಮೂಲಕ ಪ್ರವಾಸಿ ತಾಣಗಳನ್ನು ಆನ್ ಲೈನ್ ನಲ್ಲೇ ಬುಕ್ ಮಾಡಬಹುದು. ಶಿರಡಿ. ಜ್ಯೋತಿರ್ಲಿಂಗ, ಕರ್ನಾಟಕ, ದಕ್ಷಿಣ ಕರ್ನಾಟಕ,ಮೈಸೂರು, ಊಟಿಯಂತಹ ತಾಣಗಳು, ತಿರುಪತಿ ತಿರುಮಲ ವೆಂಕಟೇಶ್ವರನ ವಿಶೇಷ ದರ್ಶನಕ್ಕಾಗಿ ಪ್ರತಿದಿನ ನಾಲ್ಕು ಬಸ್ ಗಳು ಕಾರ್ಯ ನಿರ್ವಹಿಸುತ್ತದೆ.

New Tourism package from KSTDC and KSRTC

ಪ್ರವಾಸಿಗರಿಗೆ ಪ್ರಸಿದ್ಧ ದೇವಾಲಯಗಳಲ್ಲಿ ವಿಶೇಷ ದರ್ಶನದ ವ್ಯವಸ್ಥೆಯನ್ನೂ ಕೂಡ ಕಲ್ಪಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪ್ರಿಯತೆಗೊಳಿಸಲು ಕೆಎಸ್ ಆರ್ ಟಿಸಿ ಮತ್ತು ಕೆಎಸ್ ಟಿಡಿಸಿ ನಡುವೆ ಮತ್ತಷ್ಟು ಕ್ರಿಯಾಶೀಲವಾಗಿ ಸೌಲಭ್ಯ ಒದಗಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. www.kstdc.co ಮತ್ತು www.ksrtc.in ಮೂಲಕ ಪ್ರವಾಸಿ ತಾಣಗಳನ್ನು ಆನ್ ಲೈನ್ ನಲ್ಲಿಯೇ ಬುಕ್ ಮಾಡಬಹುದು.

English summary
KSRTC and Karnataka State Tourism Department Corporation jointly starting new tourism package. Through mobile app tourist get this facilities. They can book tourist places through online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X