ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಲ್ಯಾಪ್ಟಾಪ್ ಬೆಂಕಿಗಾಹುತಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 13: ತಿರುವನಂತಪುರಂನಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಲ್ಯಾಪ್‌ ಟಾಪ್‌ಗೆ ಬೆಂಕಿ ಹತ್ತಿಕೊಂಡು ಕೆಲಕಾಲ ವಿಮಾನದಲ್ಲಿ ಆತಂಕ ಸೃಷ್ಟಿಸಿದೆ.

6ಇ-445 (ವಿಟಿ-ಐಜಿವಿ) ಇಂಡಿಗೋ ವಿಮಾನದೊಳಗೆ ಪ್ರ ಬ್ಯಾಗ್‌ ವೊಂದರಲ್ಲಿ ಸುಟ್ಟ ವಾಸನೆ ಬರುತ್ತಿದೆ ಎಂದು ಪ್ರಯಾಣಿಕರು ತಿಳಿಸಿದಾಗ ತಕ್ಷಣ ವಿಮಾನದ ಸಿಬ್ಬಂದಿ ಅಕ್ಕ ಪಕ್ಕದ ಸೀಟುಗಳಿಂದ ಪ್ರಯಾಣಿಕರನ್ನು ಎಬ್ಬಿಸಿ ಬ್ಯಾಗ್‌ ನಿಂದ ಲ್ಯಾಪ್‌ ಟಾಪ್ ನ್ನು ಹೊರ ತೆಗೆದು ನೀರು ಹಾಕಿ ಬೆಂಕಿ ನಂದಿಸಿದರು. ಈ ಘಟನೆ ನವೆಂಬರ್ 11ರಂದು ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

New scare in skies: Now, laptop on Thiruvananthapuram-Bengaluru flight catches fire

ನಂತರ ವಿಮಾನವನ್ನು ಸುರಕ್ಷಿತವಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ವಿಮಾನನಿಂದ ಪ್ರಯಾಣಿಕರನ್ನು ಯಾವುದೇ ಅಪಾಯವಿಲ್ಲದೆ ಹೊರಗೆ ಕರೆತರಲಾಯಿತು. ನಂತರ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ಈ ಬಗ್ಗೆ ಮಾಹಿತಿ ನೀಡಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In yet another case of a personal electronic device (PED) emitting smoke after possibly catching fire, a laptop on IndiGo's Thiruvananthapuram-Bengaluru flight had to be sprayed with fire extinguishers last Saturday (November 11).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ