ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲಾ ಮಕ್ಕಳಿಗಾಗಿ ಟಾಟಾ ಬಿಲ್ಡಿಂಗ್ ಇಂಡಿಯಾ ಪ್ರಬಂಧ ಸ್ಪರ್ಧೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 5: 'ನ್ಯೂ ಇಂಡಿಯಾ @ 70 ಅಂಡ್ ಯುವರ್ ಕಾಂಟ್ರಿಬ್ಯೂಷನ್' ಇದು ಟಾಟಾ ಗ್ರೂಪ್ 12 ನೇ ಸರಣಿಯ ಟಾಟಾ ಬಿಲ್ಡಿಂಗ್ ಇಂಡಿಯಾ ಸ್ಕೂಲ್ ಪ್ರಬಂಧ ಸ್ಪರ್ಧೆಯ ಈ ವರ್ಷದ ವಿಷಯ. ಬೆಂಗಳೂರಿನ ವಿಸ್ಡಂ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆಯಲಿರುವ ಈ ಪ್ರಬಂಧ ಸ್ಪರ್ಧೆ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲೂ ಇರಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಅಂದರೆ 2017-18 ನೇ ಸಾಲಿನಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಬೆಂಗಳೂರಿನ 80 ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ರಾಷ್ಟ್ರಪತಿಗಳ ಜೊತೆ ಕರ್ನಾಟಕದ 'ಟಾಟಾ ಸ್ಪರ್ಧೆ' ವಿಜೇತರುರಾಷ್ಟ್ರಪತಿಗಳ ಜೊತೆ ಕರ್ನಾಟಕದ 'ಟಾಟಾ ಸ್ಪರ್ಧೆ' ವಿಜೇತರು

ಟಾಟಾ ಬಿಲ್ಡಿಂಗ್ ಇಂಡಿಯಾ ಭಾರತದ ಅತಿ ದೊಡ್ಡ ಶಾಲಾ ಮಟ್ಟದ ಪ್ರಬಂಧ ಸ್ಪರ್ಧೆಯಾಗಿದೆ. ಎರಡು ಹಂತದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ 250 ಕ್ಕೂ ಹೆಚ್ಚು ನಗರಗಳ 9,500 ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇಂಗ್ಲೀಷ್, ಹಿಂದಿ, ಬೆಂಗಾಲಿ, ಗುಜರಾತಿ, ತಮಿಳು, ಮರಾಠಿ, ಕನ್ನಡ, ಒರಿಯಾ, ತೆಲುಗು, ಮಲಯಾಳಂ, ಪಂಜಾಬಿ, ಅಸ್ಸಾಮೀಸ್ ಮತ್ತು ಉರ್ದು ಭಾಷೆಗಳಲ್ಲಿ ನಡೆಯಲಿದೆ.

ಈ ಸ್ಪರ್ಧೆ ಎರಡು ವಿಭಾಗಗಳಲ್ಲಿ ನಡೆಯಲಿದೆ.
1. ಜೂನಿಯರ್ ಹಂತ: ಈ ವಿಭಾಗದಲ್ಲಿ 6 ರಿಂದ 8 ನೇ ತರಗತಿಯ ಮಕ್ಕಳು ಪಾಲ್ಗೊಳ್ಳಲಿದ್ದರೆ,
2. ಸೀನಿಯರ್ ಹಂತ: ಇದರಲ್ಲಿ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಸ್ಪರ್ಧಿಸಲಿದ್ದಾರೆ.

ಮಕ್ಕಳು ಬರೆದ ಪ್ರಬಂಧವನ್ನು ಅವರು ತೆಗೆದುಕೊಂಡಿರುವ ವಿಷಯ, ಅದರ ಸಂರಚನೆ, ಸೃಜನಶೀಲತೆ, ಕಲ್ಪನೆ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಶಾಲೆ, ನಗರ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಜಯಶಾಲಿಯಾದವರಿಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ.

ರಾಷ್ಟ್ರ ಮಟ್ಟದಲ್ಲಿ ವಿಜೇತರಾದವರು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡುವ ಸುವರ್ಣವಕಾಶವೂ ಲಭ್ಯವಾಗಲಿದೆ. ಇಷ್ಟೇ ಅಲ್ಲದೇ, ರಾಷ್ಟ್ರಪತಿ ಸೇರಿದಂತೆ ಮತ್ತಿತರ ಗಣ್ಯಾತಿಗಣ್ಯರನ್ನು ಭೇಟಿ ಮಾಡುವ ಸೌಭಾಗ್ಯವೂ ದೊರಕಲಿದೆ.

ಕಳೆದ ಹಲವು ವರ್ಷಗಳಿಂದ ನಡೆಯುತ್ತಾ ಬಂದಿರುವ ಈ ಟಾಟಾ ಬಿಲ್ಡಿಂಗ್ ಇಂಡಿಯಾ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಉತ್ತಮ ವೇದಿಕೆಯನ್ನು ಒದಗಿಸಿಕೊಡಲಾಗುತ್ತಾ ಬರಲಾಗಿದೆ. ಉತ್ತಮ ಭಾರತಕ್ಕಾಗಿ ಡಿಜಿಟಲ್ ತಂತ್ರಜ್ಞಾನ, ಸ್ವಚ್ಛ ಭಾರತ, ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಮತ್ತಿತರೆ ಪ್ರಮುಖ ವಿಷಯಗಳ ಬಗ್ಗೆ ಈ ಹಿಂದೆ ಸ್ಪರ್ಧೆ ಏರ್ಪಡಿಸಲಾಗಿತ್ತು.

2006 ರಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಆರಂಭವಾದ ಈ ಟಾಟಾ ಬಿಲ್ಡಿಂಗ್ ಇಂಡಿಯಾ ಶಾಲಾ ಪ್ರಬಂಧ ಸ್ಪರ್ಧೆ ಪ್ರತಿವರ್ಷ ನಡೆಯುತ್ತಾ ಬಂದಿದೆ. ಈ ಮೂಲಕ ದೇಶದೆಲ್ಲೆಡೆ ಯುವ ಸಮುದಾಯವನ್ನು ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಸಕ್ತಿ ತೋರುವಂತೆ ಪ್ರೇರೇಪಿಸಿ, ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅಲ್ಲದೇ, ಸದೃಢವಾದ ದೇಶ ನಿರ್ಮಾಣಕ್ಕೆ ಅಣಿಗೊಳಿಸುವ ಪ್ರಯತ್ನ ಇದಾಗಿದೆ. ಈ ವೇದಿಕೆಯಲ್ಲಿ ಸ್ಪರ್ಧಿಗಳು ತಮ್ಮ ಪ್ರಬಂಧಗಳ ಮೂಲಕ ಸದೃಢ ದೇಶ ನಿರ್ಮಾಣಕ್ಕೆ ಅಗತ್ಯವಾದ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ನೀಡಬಹುದಾಗಿದೆ. ಇದರ ಜತೆಗೆ ಟಾಟಾ ಕ್ಲಾಸ್‍ಎಡ್ಜ್ (ತಂತ್ರಜ್ಞಾನ ಆಧಾರಿತ ಸ್ಪರ್ಧೆ) ಅನ್ನೂ ಟಾಟಾ ಬಿಲ್ಡಿಂಗ್ ಇಂಡಿಯಾ ಪ್ರಬಂಧ ಸ್ಪರ್ಧೆಯನ್ನೂ ತಮ್ಮ ಶಾಲೆಗಳಲ್ಲಿ ನಡೆಸಬಹುದಾಗಿದೆ.

English summary
New India @70 and your contribution, this is the subject for TATA Building India's 12th series Essay competition. The competion will be organised in Wisdom international school Bengaluru, Date has not announced yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X