ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25 : ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಲವು ಹೊಸ ವಿಮಾನ ಸೇವೆಗಳು ಆರಂಭವಾಗಲಿದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಹೊಸ ವಿಮಾನಗಳ ಹಾರಾಟ ಆರಂಭಿಸಲಿವೆ.

ಮಂಗಳೂರು, ವಾರಣಾಸಿ, ಉದಯ್‌ಪುರ, ರಾಯ್‌ಪುರ, ಕೊಯಮತ್ತೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ಹೊಸ ವಿಮಾನಗಳ ಸೇವೆ ಆರಂಭವಾಗಲಿದೆ. ಇಂಡಿಗೋ, ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗಳು ಹೊಸ ಮಾರ್ಗದಲ್ಲಿ ಹಾರಾಟ ಪ್ರಾರಂಭ ಮಾಡಲಿವೆ.

ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಲಗೇಜ್ ತಪಾಸಣೆಗೆ ಹೊಸ ತಂತ್ರಜ್ಞಾನಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಲಗೇಜ್ ತಪಾಸಣೆಗೆ ಹೊಸ ತಂತ್ರಜ್ಞಾನ

ಇಂಡಿಗೂ ಸಂಸ್ಥೆ ಒಟ್ಟು 9 ವಿಮಾನ ಸೇವೆಯನ್ನು ಆರಂಭಿಸಲಿದೆ. ಇವುಗಳಲ್ಲಿ 8 ದೇಶಿಯ ಮತ್ತು 1 ಅಂತರರಾಷ್ಟ್ರೀಯ ವಿಮಾನವಾಗಿದೆ.

ಬೆಂಗಳೂರಿನಿಂದ ಶಿರಡಿಗೆ ನಿತ್ಯ ವಿಮಾನ ಸೇವೆಬೆಂಗಳೂರಿನಿಂದ ಶಿರಡಿಗೆ ನಿತ್ಯ ವಿಮಾನ ಸೇವೆ

spicejet

ವಿಮಾನಗಳ ಪಟ್ಟಿ

* ಸ್ಪೈಸ್‌ ಜೆಟ್ ಅಕ್ಟೋಬರ್ 1 ರಿಂದ ಬೆಂಗಳೂರು-ಮಂಗಳೂರು ವಿಮಾನ ಸೇವೆ ಆರಂಭಿಸಲಿದೆ. ವಾರದಲ್ಲಿ ಆರು ದಿನಗಳ ಕಾಲ ಈ ವಿಮಾನ ಹಾರಾಟ ನಡೆಸಲಿದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ತಿರುಪತಿಗೆ ಫ್ಲೈ ಬಸ್ ಆರಂಭಬೆಂಗಳೂರು ವಿಮಾನ ನಿಲ್ದಾಣದಿಂದ ತಿರುಪತಿಗೆ ಫ್ಲೈ ಬಸ್ ಆರಂಭ

* ಬೆಂಗಳೂರು-ಕೊಯಮತ್ತೂರು ನಡುವೆ 2 ನೇರ ವಿಮಾನಗಳನ್ನು ಸ್ಪೈಸ್‌ ಜೆಟ್ ಆರಂಭಿಸಲಿದೆ. ಈ ವಿಮಾನಗಳು ಸಹ ವಾರದಲ್ಲಿ 6 ದಿನಗಳ ಕಾಲ ಸಂಚಾರ ನಡೆಸಲಿವೆ.

* ಅಕ್ಟೋಬರ್ 8ರಿಂದ ಸ್ಪೈಸ್ ಜೆಟ್ ಮಧುರೈ, ನವೆಂಬರ್ 7ರಿಂದ ವಾರಣಾಸಿ ಮತ್ತು ಉದಯ್‌ಪುರ್‌ ನಡುವೆ ವಿಮಾನ ಹಾರಾಟ ಆರಂಭಿಸಲಿದೆ.

* ಅಕ್ಟೋಬರ್ 28ರಿಂದ ಇಂಡಿಗೋ ವಿಮಾನ ನೇರವಾಗಿ ಪುಣೆಗೆ ಸಂಚಾರ ಆರಂಭಿಸಲಿದೆ.

* ನವೆಂಬರ್ 1 ರಿಂದ ಇಂಡಿಗೋ ಚೆನ್ನೈ ಮತ್ತು ರಾಯಪುರಕ್ಕೆ ವಿಮಾನ ಹಾರಾಟ ಪ್ರಾರಂಭ ಮಾಡಲಿದೆ.

* ನವೆಂಬರ್ 15ರಿಂದ ಇಂಡಿಗೋ ಅಗರ್ತಾಲ, ಅಲಹಾಬಾದ್, ಇಂದೋರ್, ವಡೋದರ, ಬಿಹಾರಕ್ಕೆ ಹಾರಾಟ ನಡೆಸಲಿದೆ.

* ಅಕ್ಟೋಬರ್ 27ರಿಂದ ಬೆಂಗಳೂರು-ಬ್ಯಾಂಕಾಕ್ ನಡುವೆ ನೇರ ವಿಮಾನ ಹಾರಾಟವನ್ನು ಇಂಡಿಗೋ ಆರಂಭಿಸಲಿದೆ.

English summary
In the month of October and November several new flights will commence operations from the Kempegowda International Airport (KIA), Bengaluru. Indigo and SpiceJet will start flights to various destinations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X