ಚೆನ್ನೈಗೆ ಹೋಗಬೇಕಿಲ್ಲ, ಬೆಂಗಳೂರಲ್ಲೇ ಬ್ರಿಟನ್‌ ವೀಸಾ ಕೇಂದ್ರ ಆರಂಭ

Subscribe to Oneindia Kannada

ಬೆಂಗಳೂರು, ನವೆಂಬರ್ 8: ನಗರದಲ್ಲಿ ಮಂಗಳವಾರದಿಂದ ಯುಕೆ (ಬ್ರಿಟನ್) ವೀಸಾ ಅರ್ಜಿ ಸ್ವೀಕಾರ ಕೇಂದ್ರ (ಪ್ರೀಮಿಯಂ ಲಾಂಜ್‌) ಆರಂಭವಾಗಿದೆ. ಬ್ರಿಟನ್‌ ವೀಸಾ ಮತ್ತು ವಲಸೆ ಸಚಿವಾಲಯ ಈ ಕೇಂದ್ರವನ್ನು ತೆರೆದಿದೆ. ಬ್ರಿಟನ್ ಗೆ ಪ್ರಯಾಣಿಸಲಿರುವ ಬೆಂಗಳೂರಿಗರಿಗೆ ಇದು ಸಹಾಯಕವಾಗಲಿದೆ.

ವೈಟ್‌ಫೀಲ್ಡ್‌ನ ನಲ್ಲೂರಹಳ್ಳಿಯ ಬ್ರಿಗೇಡ್‌ ಐಆರ್‌ವಿ ಕಟ್ಟಡದಲ್ಲಿ ಈ ವೀಸಾ ಅರ್ಜಿ ಸ್ವೀಕಾರ ಕೇಂದ್ರಕ್ಕೆ ಮಂಗಳವಾರ ಬ್ರಿಟನ್‌ ವಲಸೆ ಸಚಿವ ಬ್ರಾಂಡನ್‌ ಲೆವಿಸ್‌ ಚಾಲನೆ ನೀಡಿದರು. ಬ್ರಿಟಿಷ್‌ ಡೆಪ್ಯುಟಿ ಹೈಕಮಿಷನ್‌ 'ವಿಎಫ್‌ಎಸ್‌ ಗ್ಲೋಬಲ್‌ ಸರ್ವಿಸ್‌' ಸಹಯೋಗದಲ್ಲಿ ಈ ಕೇಂದ್ರವನ್ನು ತೆರೆದಿದೆ.

New Britain visa application centre opens in Bengaluru

ಬೆಂಗಳೂರು ನಗರದಲ್ಲಿ ವೀಸಾ ಅರ್ಜಿ ಸ್ವೀಕಾರ ಕೇಂದ್ರ ತೆರೆಯುವ ಮೊದಲು ಬ್ರಿಟನ್ ಗೆ ಪ್ರಯಾಣಿಸುವವರು ಚೆನ್ನೈಗೆ ತೆರಳಬೇಕಾಗಿತ್ತು. ಇದೀಗ ಈ ಸೇವೆ ನಗರದಲ್ಲೇ ಪ್ರಾರಂಭವಾಗಿದೆ. ಭಾರತದಲ್ಲಿ ಒಟ್ಟು ಇಂಥಹ 18 ಕೇಂದ್ರಗಳಿದ್ದು, ಇನ್ನೂ ಒಂದು ಕೇಂದ್ರ ತೆರೆಯಲು ಬ್ರಿಟನ್ ನಿರ್ಧರಿಸಿದೆ.

ವೀಸಾ ಬೇಕಾದವರು ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಸರ್ಕಾರಿ ರಜೆಗಳನ್ನು ಹೊರತುಪಡಿಸಿ, ಸೋಮವಾರದಿಂದ ಶುಕ್ರವಾರದವರೆಗೆ ವಾರದ ಐದು ದಿನ ಈ ವೀಸಾ ಅರ್ಜಿ ಕೇಂದ್ರ ತೆರೆದಿರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A new Visa Application Centre (VAC) was on Tuesday opened in IT capital Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ