ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿಯಲ್ಲಿ ಸಿಬ್ಬಂದಿ ಹಾಜರಾತಿ ನಿಗಾಕ್ಕೆ ಬರಲಿದೆ ಹೊಸ ವ್ಯವಸ್ಥೆ

|
Google Oneindia Kannada News

ಬೆಂಗಳೂರು, ಜನವರಿ 16: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸಿಬ್ಬಂದಿ ಹಾಜರಾತಿ ಮೇಲೆ ನಿಗಾ ಇಡಲು ಹೊಸ ಸಿಸ್ಟಂನ್ನು ಜಾರಿಗೊಳಿಸಲಾಗುತ್ತಿದೆ.

ಚಾಲಕ, ನಿರ್ವಾಹಕ ಸೇರಿದಂತೆ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿಯಲ್ಲಿ ಶಿಸ್ತು ಕಾಪಾಡಲು ಅಟೆಂಡೆನ್ಸ್ ಮಾನಿಟರಿಂಗ್ ಸಿಸ್ಟಮ್ (ಎಎಂಎಸ್)ಜಾರಿಗೆ ತರಲು ಬಿಎಂಟಿಸಿ ಮುಂದಾಗಿದೆ.

ಓಲಾ ಮಾದರಿ ಸೇವೆ ನೀಡಲು ಬಿಎಂಟಿಸಿ ಸಿದ್ಧತೆ, ಹೇಗೆ ವ್ಯವಸ್ಥೆ?ಓಲಾ ಮಾದರಿ ಸೇವೆ ನೀಡಲು ಬಿಎಂಟಿಸಿ ಸಿದ್ಧತೆ, ಹೇಗೆ ವ್ಯವಸ್ಥೆ?

ಎಎಂಎಸ್ ನಿಂದ ನೌಕರರ ಕರ್ತವ್ಯಕ್ಕೆ ಹಾಜರಿಯ ಲಾಗಿನ್, ಲಾಗ್ ಔಟ್ ಅವಧಿ ಪರಿಶೀಲಿಸಲು ಅನುಕೂಲವಾಗಲಿದೆ. ಇದರಿಂದ ಹಲವು ಬಾರಿ ಬಸ್‌ ರೂಟ್‌ಗಳು ರದ್ದಾಗುವುದು ತಪ್ಪಲಿದೆ ಎನ್ನುವುದು ಬಿಎಂಟಿಸಿ ಅಧಿಕಾರಿಗಳ ಅಭಿಪ್ರಾಯವಾಗಿದೆ.

New attendance monitoring system will launch for BMTC

1.17 ಕೋಟಿ ರೂ ವೆಚ್ಚದಲ್ಲಿ ಈ ನೂತನ ಹಾಜರಾತಿ ವ್ಯವಸ್ಥೆ ಜಾರಿಗೆ ಬರಲಿದ್ದು, ಕಚೇರಿಗಳ ಜೊತೆಗೆ 45 ಡಿಪೋಗಳಲ್ಲಿ ಎಎಂಎಸ್‌ ಅನ್ನು ಅಳವಡಿಸಲಾಗುತ್ತದೆ. 2017ರಲ್ಲಿ ಆಧಾರ್ ಸಂಖ್ಯೆ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಆದರೆ ಇಂಟರ್‌ನೆಟ್ ಸಂಪರ್ಕ ವೇಗ ಕಡಿಮೆ ಹಾಗೂ ಕಡಿತಗೊಂಡರೆ ಹಾಜರಿ ಹಾಕಲು ಸಾಧ್ಯವಾಗುತ್ತಿರಲಿಲ್ಲ, ಹೀಗಾಗಿ ಎಎಂಎಸ್‌ ಜಾರಿಗೆ ತರಲಾಗುತ್ತಿದೆ.

ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ

ಶಾಂತಿನಗರ, ಕೆಂಪೇಗೌಡ ಬಸ್‌ ನಿಲ್ದಾಣ, ಯಶವಂತಪುರ, ಕೆಂಗೇರಿ ಸೇರಿದಂತೆ ಇತರೆ ಪ್ರಮುಖ ನಿಲ್ದಾಣಗಳಲ್ಲಿ ಟ್ರಾಫಿಕ್ ಮ್ಯಾನೇಜರ್‌ಗಳು ಸೇರಿದಂತೆ ಇನ್ನಿತರೆ ಸಿಬ್ಬಂದಿ ಕೆಲಸ ಮಾಡುವ ಕಾರಣ ಅಲ್ಲೂ ಅಳವಡಿಸಲಾಗುತ್ತದೆ. ಇದರಿಂದ ಪಾರದರ್ಶಕತೆ ಕಾಪಾಡಿಕೊಳ್ಳಬಹುದಾಗಿದೆ.

English summary
BMTC is having new attendance monitoring system for its all employees. This will help to streamline the attendance of employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X