ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಯಾನಿಟರಿ ನ್ಯಾಪ್ ಕಿನ್ ಬಳಕೆ ಬೇಡ ಎಂದು ಹೇಳಿಲ್ಲː ಮಾಳವಿಕಾ

By Mahesh
|
Google Oneindia Kannada News

ಬೆಂಗಳೂರು, ಜುಲೈ 09: ಎರಡು ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಚರ್ಚೆಗೆ ಒಳಗಾಗಿರುವ ಸ್ಯಾನಿಟರಿ ನ್ಯಾಪ್ ಕಿನ್ ಪ್ಯಾಡ್ ಬಗ್ಗೆ ನೀಡಿದ್ದ ಹೇಳಿಕೆಗೆ ನಟಿ, ಬಿಜೆಪಿ ವಕ್ತಾರರಾದ ಮಾಳವಿಕಾ ಅವಿನಾಶ್ ಸ್ಪಷ್ಟನೆ ನೀಡಿದ್ದಾರೆ.

ನಾನು ಎಂದಿಗೂ ನ್ಯಾಪ್ ಕಿನ್ ಪ್ಯಾಡ್ ಬಳಸಬೇಡಿ, ಬಟ್ಟೆ ಮಾತ್ರ ಬಳಸಿ ಎಂದು ಹೇಳಿಲ್ಲ.' ನಾನೂ ಒಬ್ಪ ಹುಡುಗಿಯಾಗಿ, ಮಹಿಳೆಯಾಗಿ ಪ್ಯಾಡ್ಸನ್ನು ಬಳಸಿದ್ದೇನೆ. ಆಯ್ಕೆಯ ಸ್ವಾತಂತ್ರ್ಯ ಹೆಣ್ಣಿಗಿರಬೇಕೆಂಬುದು ನನ್ನ ನಂಬಿಕೆ. ಬಳಕೆಯಾದ ಪ್ಯಾಡ್ಸ್ ಗಳ ತ್ಯಾಜ್ಯ ನಿರ್ವಹಣೆಯೂ ಒಂದು ಸಮಸ್ಯೆಯೇ' ಎಂದಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಯಲ್ಲಿ ಐಷಾರಾಮಿ ವಿಭಾಗಕ್ಕೆ ಸ್ಯಾನಿಟರಿ ಪ್ಯಾಡ್‌ ಅನ್ನು ಪರಿಗಣಿಸಿ, ಅದಕ್ಕೆ ಶೇ 12ರಷ್ಟು ತೆರಿಗೆ ವಿಧಿಸಿರುವುದನ್ನು ಮಹಿಳೆಯರು ತೀವ್ರವಾಗಿ ವಿರೋಧಿಸಿರುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ವಕ್ತಾರರಾದ ಮಾಳವಿಕಾ ಅವಿನಾಶ್ ಅವರು ನೀಡಿದ ಹೇಳಿಕೆ ವಿವಾದ, ಚರ್ಚೆಗೆ ಕಾರಣವಾಗಿತ್ತು.

ಹೇಳಿಕೆ: ಮುಂದುವರೆದ ರಾಷ್ಟ್ರಗಳಿಗೆ ಬೇಡವಾದ ಸ್ಯಾನಿಟರಿ ಪ್ಯಾಡ್ಸ್ ಗಳನ್ನು ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಮೇಲೆ ಹೇರುತ್ತಿರುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಕಾಲಕಾಲದಿಂದ ಬಂದ ಬಟ್ಟೆ, ನಮ್ಮ ತಾಯಂದಿರವರೆಗೆ ಎಲ್ಲರೂ ಬಳಸುತ್ತಿದ್ದ ಬಟ್ಟೆ ಎಲ್ಲದ್ದಕ್ಕಿಂತ ಹೈಜೀನಿಕ್. ಬಟ್ಟೆ ಪ್ರಾಯೋಗಿಕ ಕಾರಣಗಳಿಂದ ಕಷ್ಟವಾಗಿದ್ದಕ್ಕೆ ಮುಂದುವರೆದ ರಾಷ್ಟ್ರಗಳಂತೆ ನಾವು ಕ್ರಮೇಣ ಟ್ಯಾಂಪೂನ್‍ಗಳನ್ನು ಬಳಸುವುದನ್ನು ಅಳವಡಿಸಿಕೊಳ್ಳಬೇಕಿದೆ. ದೊಡ್ಡ ಕಾರ್ಪೊರೇಟ್‍ಗಳಿಗೆ ತಮ್ಮ ಪ್ಯಾಡ್ಸ್ ಗಳನ್ನು ಡಂಪ್ ಮಾಡುವುದಕ್ಕಿನ್ನು ಉಳಿದಿರುವುದು ನಮ್ಮಂಥ ದೇಶ. ಪರಂಪರಾಗತವಾಗಿ ಬಂದಿರುವುದು ಸರಿಯಲ್ಲ, ಪಾಶ್ಚಾತ್ಯ ದೇಶಗಳಿಂದ ಬರುವುದೆಲ್ಲಾ ಸರಿ ಎಂಬ ತಪ್ಪು ತಿಳಿವಳಿಕೆ ನಮಗೆ ಎಂದಿದ್ದರು.

ಸ್ಪಷ್ಟನೆ: ನೆನ್ನೆಯಿಂದ ನನ್ನ ನಿಲುವಿನ ಬಗೆಗೆ ತಪ್ಪು ತಿಳುವಳಿಕೆ, ತಪ್ಪುಗ್ರಹಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೆಣ್ಣುಮಕ್ಕಳು ಅತಿಹೆಚ್ಚು ಗ್ರಹಿಸಿಕೊಳ್ಳಬಲ್ಲ ವಿಚಾರಕ್ಕೆ ಕೆಲವು ಪುರುಷರು ರಾಜಕೀಯ ಬಣ್ಣ ಕಟ್ಟುತ್ತಿರುವುದು ಇನ್ನೂ ವಿಶೇಷ. ಮೊದಲಿಗೆ, ಈ ಹಿಂದೆ ಇದ್ದ ೧೪.೫%ವ್ಯಾಟ್ ಮತ್ತಿತರ ತೆರಿಗಳಿಂದ ಜಿ ಎಸ. ಟಿ, ಈಗ ಸ್ಯಾನಿಟರಿ ಪ್ಯಾಡ್ಸ್ ಮೇಲಿನ ತೆರಿಗೆಯನ್ನು ೧೨%ಕ್ಕೆ ಇಳಿಸಿದೆ. ಪ್ರಾಯೋಗಿಕ ತೊಂದರೆಗಳಿಂದ ನಾವು ಬಟ್ಟೆಯನ್ನು ಬಿಟ್ಟು ಪ್ಯಾಡ್ಸ್ ಗಳನ್ನು ಉಪಯೋಗಿಸಲಾಂಭಿಸಿದು ಎಲ್ಲರಿಗೂ ಗೊತ್ತಿರುವ ಸತ್ಯ. ನಾನೆಲ್ಲೂ, ಎಂದೂ, ಬಟ್ಟೆಗೆ ಮರುಕಳಿಸೋಣ ಎಂದೋ, ಪ್ಯಾಡ್ಸ್ ಗಳನ್ನು ಬಳಸಬಾರದು ಎಂದೋ ಹೇಳಿಲ್ಲ. ನಾನೂ ಒಬ್ಪ ಹುಡುಗಿಯಾಗಿ, ಮಹಿಳೆಯಾಗಿ ಪ್ಯಾಡ್ಸನ್ನು ಬಳಸಿದ್ದೇನೆ. ಆಯ್ಕೆಯ ಸ್ವಾತಂತ್ರ್ಯ ಹೆಣ್ಣಿಗಿರಬೇಕೆಂಬುದು ನನ್ನ ನಂಬಿಕೆ. ಬಳಕೆಯಾದ ಪ್ಯಾಡ್ಸ್ ಗಳ ತ್ಯಾಜ್ಯ ನಿರ್ವಹಣೆಯೂ ಒಂದು ಸಮಸ್ಯೆಯೇ. ಮುಂದುವರೆದ ರಾಷ್ಟ್ರಗಳು ಪ್ಯಾಡ್ಸ್ ನಿಂದ ಮುಂದುವರೆದು ಟ್ಯಾಂಪೂನ್ ಮತ್ತು ಕಪ್ ಗಳಿಗೆ ಮಾರುಹೋಗಿದ್ದಾರೆ, ಬದಲಾಗುತ್ತಿರುವ ಕಾಲದೊಂದಿಗೆ, ಕ್ರಮೇಣ ನಾವೂ ನಮ್ಮನ್ನು ಅಂತಹ ಆಯ್ಕೆಗಳಿಗೆ ಅಳವಡಿಸಿಕೊಳ್ಳಲ್ಲಾರಂಭಿಸಬೇಕು.

English summary
Never once have I said let's return to cloth or do not use sanitary pads. I have been widely misread,misinterpreted, misquoted & misunderstood since yesterday said Actor, Activist BJP spokesperson Malavika Avinash
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X