ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಟ್ಸಪ್, ಫೇಸ್ ಬುಕ್ ಮನೆಯಲಿರಲಿ, ರಸ್ತೆ ಮೇಲೆ ಗಮನವಿರಲಿ

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 21 : ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನೆಸ್ ಸಾಫ್ಟ್ ವೇರ್ ಎಂಜಿನಿಯರಿಂಗ್ ಸರ್ವಿಸ್ ಸಂಸ್ಥೆಯ 50ಕ್ಕೂ ಹೆಚ್ಚು ಎಂಜಿನಿಯರ್ ಗಳು ನಗರದ ಹಲವು ರಸ್ತೆಗಳಲ್ಲಿ ಪ್ಲೆಕಾರ್ಡ್ ಹಿಡಿದು ಅಕ್ಟೋಬರ್ 16ರ ಶುಕ್ರವಾರ ಜಾಥಾ ನಡೆಸಿದರು.

ನಗರದಲ್ಲಿ ಹೆಚ್ಚುತ್ತಿರುವ ಅಪಘಾತಗಳಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದೇ ಮುಖ್ಯ ಕಾರಣ ಎಂದು ಭಾವಿಸಿದ ನೆಸ್ ಸಾಫ್ಟ್ ವೇರ್ ಎಂಜಿನಿಯರ್ ಗಳು ಕೋರಮಂಗಲದ ಸುತ್ತಮುತ್ತಲ ಟ್ರಾಫಿಕ್ ಸಿಗ್ನಲ್ ಬಳಿ 'ವಾಕ್ ಸೇಫ್, ಡ್ರೈವ್ ಸೇಫ್', 'ವಾಟ್ಸಪ್, ಫೇಸ್ ಬುಕ್ ಮನೆಯಲಿರಲಿ, ರಸ್ತೆಯ ಮೇಲೆ ಗಮನ ಇರಲಿ' ಎಂದು ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಕಡ್ಡಾಯವಾಗಿರಲಿ ಎಂದು ಕಿವಿ ಮಾತು ಹೇಳಿದರು.

ನೆಸ್ ಸಾಫ್ಟ್ ವೇರ್ ಎಂಜಿನಿಯರಿಂಗ್ ಸರ್ವಿಸ್ ಸಂಸ್ಥೆಯ ಉಪಧ್ಯಕ್ಷರಾದ ಪೃಥ್ವಿ ನಂಜಪ್ಪ ಅವರು, 'ನಮ್ಮ ಸಂಸ್ಥೆಯು ಯಾವಾಗಲೂ ಜನ ಸಮುದಾಯಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಸದಾ ಹಂಬಲಿಸುತ್ತಿರುತ್ತದೆ. ಹಾಗಾಗಿ ಹೆಚ್ಚು ಸಮಕಾಲೀನ ಮುಖ್ಯ ಸಮಸ್ಯೆಗಳಾದ ಮಕ್ಕಳ ಶಿಕ್ಷಣ, ಜನಸಂಖ್ಯೆ ಕುಂಠಿತಗೊಳಿಸುವುದು ಹೇಗೆ ಎಂಬುದರ ಬಗ್ಗೆ ಹಿಂದಿನ ವರ್ಷಗಳಲ್ಲಿ ಚಿಂತಿಸಿದ್ದೆವು. ಈ ಬಾರಿ ರಸ್ತೆ ಸುರಕ್ಷತಾ ವಿಚಾರವನ್ನು ಕೈಗೆತ್ತಿಕೊಂಡಿದ್ದೆವು' ಎಂದು ತಮ್ಮ ಸಂಸ್ಥೆಯ ಉತ್ತಮ ಕಾರ್ಯವನ್ನು ಶ್ಲಾಘಿಸಿದರು.[ಚಾಲಕರೇ, ಹಿಂಬದಿ ಸವಾರರೇ ಹೆಲ್ಮೆಟ್ ಧರಿಸಲು ಸಿದ್ಧರಾಗಿ]

ನೆಸ್ ಸಂಸ್ಥೆಯ ಉತ್ಸಾಹಿತ ಎಂಜಿನಿಯರ್ ಗಳು

ನೆಸ್ ಸಂಸ್ಥೆಯ ಉತ್ಸಾಹಿತ ಎಂಜಿನಿಯರ್ ಗಳು

ನೆಸ್ ಇಂಜಿನಿಯರಿಂಗ್ ಕಂಪನಿಯು ಡಿಜಿಟಲ್ ಆರ್ಥಿಕತೆಗೆ ಪೂರಕವಾದ ಉತ್ಪನ್ನಗಳಿಗೆ ಉತ್ತಮ ವೇದಿಕೆ ಒದಗಿಸುತ್ತಿದೆ. ನೆಸ್ ಸಂಸ್ಥೆಯ ಕಾರ್ಯಕರ್ತರು ಗ್ರಾಕರನ್ನು ಗೆಲ್ಲುವ ಸಲುವಾಗಿ, ಹೊಸ ಮಾರುಕಟ್ಟೆ ನಿರ್ಮಾಣ, ಉತ್ತಮ ಉತ್ಪನ್ನ ಮತ್ತು ಸೇವೆಗಳನ್ನು ನೀಡಲು ಕಟಿಬದ್ದವಾಗಿದೆ.

ನೋಡಿ ನಾವಿರೊದು ಹೀಗೆ

ನೋಡಿ ನಾವಿರೊದು ಹೀಗೆ

ರಸ್ತೆ ಸುರಕ್ಷತೆ ಕುರಿತಾಗಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಜಾಥಾ ಹೊರಡಲು ಬ್ಯಾನರ್ ಹಿಡಿದು ತುದಿಗಾಲ ಮೇಲೆ ನಿಂತಿರುವ ನೆಸ್ ಸಿಬ್ಬಂದಿಗಳು

ಫೋನ್ ಡೌನ್, ಹೆಡ್ಸ್ ಅಪ್

ಫೋನ್ ಡೌನ್, ಹೆಡ್ಸ್ ಅಪ್

ಎಂಜಿನಿಯರ್ ಗಳು ಸಿಗ್ನಲ್ ಬಳಿ ವಾಹನ ಚಾಲಕರ ಎದುರು ಸಾಲಾಗಿ ನಿಂತು Phone downs, Heads up, While crossing road ಎಂಬ ಪ್ಲೆಕಾರ್ಡ್ ಹಿಡಿದು ಜನರಿಗೆ ಟ್ರಾಫಿಕ್ ನಿಯಮ ಅನುಸರಿಸುವಂತೆ ಎಚ್ಚರಿಸಿದರು.[ಬೆಂಗಳೂರಿನ ಪುಟ್ಟ ಟ್ರಾಫಿಕ್ ಪೊಲೀಸನಿಗೊಂದು ಸಲಾಂ!]

ಸ್ವಯಂ ಸೇವಕ ಎಂಜಿನಿಯರ್ ಗಳ ಉತ್ಸಾಹ ನೋಡಿ

ಸ್ವಯಂ ಸೇವಕ ಎಂಜಿನಿಯರ್ ಗಳ ಉತ್ಸಾಹ ನೋಡಿ

ನಗರದಲ್ಲಿ ಹೆಚ್ಚುತತ್ಇರುವ ಅಪಘಾತಗಳ ಸರಣಿ ತಪ್ಪಿಸಲು ಸ್ವಯಂ ಸೇವಕ ಎಂಜಿನಿಯರ್ ಗಳು ಬಹಳ ಉತ್ಸಾಹದಿಂದ ಜಾಥಾದಲ್ಲಿ ಭಾಗವಹಿಸಿ ಜನರ ಮೆಚ್ಚುಗೆಗೆ ಪಾತ್ರವಾದರು.

ಬಿಸಿಲಲ್ಲೂ ಜಾಥಾ

ಬಿಸಿಲಲ್ಲೂ ಜಾಥಾ

ವಾಹನ ಸವಾರರಿಗೆ ವೇಗವಾಗಿ ಸಲಿಸದಿರಿ, ಎಚ್ಚರದಿಂದ ವಾಹನ ಚಲಾಯಿಸಿರಿ. ಇನ್ನಿತರ ಕಿವಿ ಮಾತುಗಳನ್ನು ಹೇಳಿದರು, ಬಿಸಿಲನ್ನು ಲೆಕ್ಕಿಸದೆ ಜಾಥಾ ಕೈಗೊಂಡರು

English summary
Over fifty employees from Ness Software Engineering Services (SES), Bengaluru, took part in a walk-a-thon on Friday, October 16th. An effort to spread awareness on the importance of following traffic rules and pedestrian safety.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X