ನೆಲಮಂಗಲ: ತಪ್ಪಿದ ಕಾಂಗ್ರೆಸ್ ಟಿಕೆಟ್‌ ಬೆಂಬಲಿಗರಿಂದ ಆಕ್ರೋಶ

Posted By:
Subscribe to Oneindia Kannada

ನೆಲಮಂಗಲ, ಏಪ್ರಿಲ್ 16: ನಿನ್ನೆ ರಾತ್ರಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೆ ಟಿಕೆಟ್ ಕೈ ತಪ್ಪಿದವರ ಸಿಟ್ಟು ಕಟ್ಟೆ ಒಡೆದಿದೆ.

ಜಾತಿ, ಧರ್ಮದ ಆಧಾರದಲ್ಲಿ ಕಾಂಗ್ರೆಸ್ ಟಿಕೆಟ್, ಹೇಗಿದೆ ಲೆಕ್ಕಾಚಾರ?

ನೆಲಮಂಗಲದಲ್ಲಿ ಕಾಂಗ್ರೆಸ್‌ನ ಅಂಜನ ಮೂರ್ತಿ ಅವರಿಗೆ ಟಿಕೆಟ್ ನೀಡದೇ ಇದ್ದಕ್ಕೆ ಆಕ್ರೋಶಗೊಂಡಿರುವ ಅಂಜನಾ ಮೂರ್ತಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ನೆಲಮಂಗಲ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ಅಂಜನಾ ಮೂರ್ತಿ ಬೆಂಬಲಿಗರು ಟೈರಿಗೆ ಬೆಂಕಿ ಹಚ್ಚಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

Nelmangla congress ticket aspirant Anjanamurthy followeres

ನೆಲಮಂಗದಿಂದ ಆರ್‌.ನಾರಾಯಣಸ್ವಾಮಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿ 12೦೦೦ ಮತಗಳ ಅಂತರದಿಂದ ಜೆಡಿಎಸ್‌ನ ಕೆ.ಶ್ರೀನಿವಾಸಮೂರ್ತಿ ವಿರುದ್ಧ ಸೋಲನ್ನಪ್ಪಿದ್ದ ಅಂಜನಾಮೂರ್ತಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.

Nelmangla congress ticket aspirant Anjanamurthy followeres

ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ನೆಲಮಂಗಲದಿಂದ ಎಂಟು ಭಾರಿ ವಿಧಾನಸಭಾ ಚುನಾವಣೆಗೆ ಅಂಜನಾಮೂರ್ತಿ ಅವರು ಸ್ಪರ್ಧಿಸಿದ್ದು 2 ಬಾರಿ ಗೆಲುವು ಸಾಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nelmangla congress ticket issued to R.Narayanaswamy so the another ticket aspirant 2 times MLA Anjana Murthy's followers get angry and did protest against congress leaders today. They burnt tires in highway and slogans against congress leaders.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ