ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಲಮಂಗಲದ ಮೈಲನಹಳ್ಳಿಯಲ್ಲಿ ಪುರಾತನ ದೇವಾಲಯ ಪತ್ತೆ

By Ananthanag
|
Google Oneindia Kannada News

ನೆಲಮಂಗಲ: ಜನವರಿ 24: ಇಲ್ಲಿನ ಮೈಲನಹಳ್ಳಿಯಲ್ಲಿ ನೆಲದೊಳಗೆ ಹುದುಗಿ ಹೋಗಿದ್ದ ಪುರಾತನ ದೇವಾಲಯವೊಂದು ಪತ್ತೆಯಾಗಿದೆ. ದೇವಾಲಯದ ಸ್ಥಳ ಗಿಡ ಗಂಟಿಯಿಂದ ಮುಚ್ಚಿಹೋಗಿದ್ದು ಚೆನ್ನಕೇಶವ ಅಥವಾ ಚೆನ್ನಿಗಾಯ ದೇವಸ್ಥಾನ ಎಂದು ಸಂಶೋಧಕರು ತಿಳಿಸಿದ್ದಾರೆ.

ಬೆಂಗಳೂರಿಗೆ ಸಮೀಪವಿರುವ ನೆಲಮಂಗಲದ ಮೈಲನಹಳ್ಳಿಯಲ್ಲಿ ಪುರಾತನ ದೇವಾಲಯದ ಸಮೀಪ ಸಿಕ್ಕಿರುವ ಶಿಲಾ ಶಾಸನದ ಬಗ್ಗೆ ಕರ್ನಾಟಕ ರಾಜ್ಯಪತ್ರದಲ್ಲಿ ಉಲ್ಲೇಖವಿದೆ. ಇದನ್ನು ವೀರಗಲ್ಲು ಎಂದು ಹೇಳಲಾಗಿದೆ. ಅಲ್ಲದೆ ಈ ಶಾಸನದಲ್ಲಿ ಕೃಷ್ಣ ದೇವರಾಯ ಮಾನ್ಯ ಮಾಡಿ ಕೊಟ್ಟ ಕುಣುಗೊಂಡನಹಳ್ಳಿ ಇದರ ಕಾಯುತ್ತಿದ್ದವನು ಭೀಮ ಎನ್ನುವವನು ಇರಬಹುದೆಂದು ಸಂಶೋಧಕ ಡಾ.ಎಚ್‌.ಎಸ್‌. ಗೋಪಾಲರಾವ್‌ ಅವರು ತಿಳಿಸಿದರು.[5 ವರ್ಷಗಳ ಕಾಲ ಗೊರವನಹಳ್ಳಿ ದೇಗುಲ ಸರ್ಕಾರದ ವಶಕ್ಕೆ]

Nelamangalada mailanahalli near discovered an ancient temple

ಈ ಶಾಸನದ ಸನಿಹದಲ್ಲೆ ವೀರಭದ್ರನ ವಿಗ್ರಹವಿದೆ. ಇನ್ನು ದೇಗಲದ ಮುಖ್ಯದ್ವಾರದ ಮೂಲಕ ಒಳಹೋದರೆ ನೇರಕ್ಕೆ ಗುಹೆ ಮಾದರಿಯ ಒಳ ಮಾಳಿಗೆ, ಬಲ ಮತ್ತು ಎಡ ಭಾಗದಲ್ಲಿ ಹಗೇವುಗಳು, ಗದ್ದುಗೆ, ದೇಗುಲ ಶಾಸನ ಬಹುತೇಕ ಹದಿನಾರನೇ ಶತಮಾನದ ವೀರಶೈವ ಯತಿಗಳದ್ದು ಎನ್ನಲಾಗಿದೆ. ಆದರೆ ಉಲ್ಲೇಖ ಮಾತ್ರ ವೈಷ್ಣವರಿಗೆ ಸಂಬಂದಿಸಿರುವುದು ಕುತೂಹಲವಾಗಿದೆ.

ಇದು ಸಂಶೋಧನೆಗೆ ಯೋಗ್ಯವಾದ ಸ್ಥಳವಾಗಿದ್ದು, ಸರಕಾರ ಈ ಪ್ರದೇಶವನ್ನು ಸಂರಕ್ಷಸಿ ಪುರಾತತ್ವ ಇಲಾಖೆಗೆ ಅಧ್ಯಯನ ನಡೆಸಲು ನೀಡಬೇಕು ಎಂದು ಸಂಶೋಧಕ ಗೋಪಾಲಕೃಷ್ಣ ರಾವ್ ಮನವಿ ಮಾಡಿದ್ದಾರೆ.

English summary
Nelamangalada Mailanahalli near discovered an ancient temple and inscription also discovered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X