ವೈದ್ಯಕೀಯ ಪ್ರವೇಶ ಪರೀಕ್ಷೆ NEET ಕನ್ನಡ ಆಯ್ಕೆ ಇಲ್ಲ ಏಕೆ?

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 22 : ದೇಶದೆಲ್ಲೆಡೆ ಏಕರೂಪದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಸಲು ಹೊರಟಿರುವ ಆರೋಗ್ಯ ಇಲಾಖೆ, 2017-18 ನೇ ಸಾಲಿನಿಂದ 8 ಭಾಷೆಗಳಲ್ಲಿ ನಡೆಯಲಿದೆ. ಆದರೆ, ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ.

ಇನ್ಮುಂದೆ ಹಿಂದಿ, ಇಂಗ್ಲೀಷ್, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಪ್ರವೇಶ ಪರೀಕ್ಷೆ ಬರೆಯಬಹುದಾಗಿದೆ. ಈ ರೀತಿ ಪರೀಕ್ಷೆ ಬರೆದು ಅರ್ಹತೆ ಪಡೆಯುವ ಅಭ್ಯರ್ಥಿಯು ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಅರ್ಹರಾಗುತ್ತಾರೆ.

NEET-UG to be held in 8 languages from 2017-18 Why Kannada not included

ರಾಜ್ಯ ಪರೀಕ್ಷಾ ಮಂಡಳಿ ನಡೆಸುವ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮಾನತೆ ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ, ರಾಜ್ಯ ಆರೋಗ್ಯ ಇಲಾಖೆಗಳ ಸಹಯೋಗದ ಪ್ರಯತ್ನವಾಗಿದೆ ಎಂದು ವೈದ್ಯಕೀಯ ಪರೀಕ್ಷೆ ವಿಭಾಗದ ಜಂಟಿ ಕಾರ್ಯದರ್ಶಿ ಎ.ಕೆ ಸಿಂಘಾಲ್ ಹೇಳಿದ್ದಾರೆ.

ನೀಟ್ ಸ್ಥಿತಿ ಗತಿ: ದೇಶದಾದ್ಯಂತ ವೈದ್ಯಕೀಯ (ಎಂಬಿಬಿಎಸ್‌) ಮತ್ತು ದಂತ ವೈದ್ಯಕೀಯ (ಬಿಡಿಎಸ್‌) ಕೋರ್ಸ್‌ಗಳ ಪ್ರವೇಶಕ್ಕಾಗಿ ಏಕರೂಪದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಸಬೇಕು ಎಂದು ಸುಪ್ರೀಂಕೋರ್ಟ್‌ ಕೂಡಾ ಆದೇಶ ನೀಡಿದೆ.

ನೀಟ್ ಪರೀಕ್ಷೆಯಿಂದಾಗಿ ತಮ್ಮ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಏಕರೂಪದ ಪ್ರವೇಶ ಪರೀಕ್ಷೆಯನ್ನು ವಿರೋಧಿಸಿದ್ದ ಕರ್ನಾಟಕ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಹಾಗೂ ಖಾಸಗಿ ಕಾಲೇಜುಗಳು ಸಲ್ಲಿಸಿದ್ದ ಅರ್ಜಿ ತಿರಸ್ಕಾರಗೊಂಡಿದೆ.

ಆದರೆ, ತಮಿಳು ಭಾಷೆಯನ್ನು ಈಗ ಅಳವಡಿಸಿಕೊಳ್ಳಲಾಗಿದ್ದು, ಕನ್ನಡ ಆಯ್ಕೆ ನೀಡಿಲ್ಲ. ಈ ಬಗ್ಗೆ ಕನ್ನಡಿಗರು ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Union Health Ministry on Wednesday said NEET-UG will be conducted in eight languages from the 2017-18 academic year. The eight languages are Hindi, English, Gujarati, Marathi, Bengali, Assamese, Telugu and Tamil. But Kannada language is not included which irks Kannadigas.
Please Wait while comments are loading...