ಡಿಜಿಪಿಯಾದ ಮೊದಲ ಮಹಿಳಾ ಅಧಿಕಾರಿ ನೀಲಮಣಿ

By: ನಮ್ಮ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ.4: ಕೇಂದ್ರ ಸೇವೆಯಿಂದ ರಾಜ್ಯ ಸೇವೆಗೆ ಮರಳಿರುವ ಹಿರಿಯ ಐಪಿಎಸ್ ಅಧಿಕಾರಿ ನೀಲಮಣಿ ಎಸ್.ರಾಜು ಅವರು ಅಂತರಿಕ ಭದ್ರತಾ ವಿಭಾಗ(ಐಎಸ್ಡಿ)ದ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ರಾಗಿ ಬುಧವಾರ ಅಧಿಕಾರ ವಹಿಸಿಕೊಂಡರು.

ಕೇಂದ್ರ ಸೇವೆಯಲ್ಲಿದ್ದ ನೀಲಮಣಿ ಅವರು ಕಳೆದ ಕೆಲದಿನಗಳ ಹಿಂದೆ ರಾಜ್ಯ ಸೇವೆಗೆ ಮರಳಿದ್ದು ಅವರನ್ನು ರಾಜ್ಯಸರ್ಕಾರ ಅಂತರಿಕ ಭದ್ರತಾ ವಿಭಾಗದ ಡಿಜಿಪಿಗೆ ಹುದ್ದೆಗೆ ನಿಯೋಜಿಸಿತ್ತು.

ನೀಲಮಣಿ ಅವರು 1983ನೇ ಸಾಲಿನ ಕರ್ನಾಟಕದ ಕೇಡರ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ, ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ಕೆಲ ದಿನಗಳ ಕಾಲ ಕರ್ತವ್ಯ ನಿರ್ವಹಿಸಿದ ನಂತರ ನೀಲಮಣಿ ಅವರು ಕೇಂದ್ರಸೇವೆಗೆ ತೆರಳಿದ್ದು ತಮ್ಮ ಸೇವಾವಧಿಯ 25ವರ್ಷಗಳಿಗೂ ಹೆಚ್ಚು ಕಾಲ ಅವರು ರಾಜ್ಯವನ್ನು ಬಿಟ್ಟು ಕೇಂದ್ರ ಸೇವೆಯಲ್ಲಿದ್ದರು.

ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ ಐಜಿಪಿ)ರಾದ ಓಂಪ್ರಕಾಶ್ ಡಿಜಿಪಿ ಗಳಾದ ಸುಶಾಂತ್ ಮಹಾಪಾತ್ರ,ಆರ್.ಕೆ.ದತ್ತ ನಂತರದ ಸೇವಾಹಿರಿತನ ಹೊಂದಿರುವ ನೀಲಮಣಿ ಅವರು ಮುಂದೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗುವ ಹಂಬಲದೊಂದಿಗೆ ರಾಜ್ಯಸೇವೆಗೆ ಮರಳಿದ್ದಾರೆ.

Neelamani N raju takes charge as DG of Police Karnataka

ಓಂಪ್ರಕಾಶ್ ಅವರು ಬರುವ ಜನವರಿ ನಿವೃತ್ತರಾದರೆ ಮಹಾಪಾತ್ರ ಅವರು 2017ರ ಡಿಸೆಂಬರ್ಗೆ ದತ್ತ ಅವರು 2017ರ ಜುಲೈಗೆ ಸೇವೆಯಿಂದ ನಿವೃತ್ತರಾಗಲಿದ್ದಾರೆ.ಸಿಬಿಐನ ನಿರ್ದೇಶಕರಾಗಲಿರುವ ದತ್ತ ಅವರು ರಾಜ್ಯ ಸೇವೆಗೆ ಮರಳುವ ಸಾಧ್ಯತೆ ಕಡಿಮೆಯಾಗಿದೆ.

ಇನ್ನೂ ಲೋಕಾಯುಕ್ತದಲ್ಲಿ ಪ್ರಕರಣ ಎದುರಿಸುತ್ತಿರುವ ಮಹಾಪಾತ್ರ ಅವರನ್ನು ರಾಜ್ಯದ ಡಿಜಿಪಿ ಐಜಿಪಿಹುದ್ದೆಗೆ ಪರಿಗಣಿಸುವ ಸಾಧ್ಯತೆಗಳಿಲ್ಲದಿರುವುದರಿಂದ ಮುಂದಿನ ರಾಜ್ಯ ಡಿಜಿಪಿ ಐಜಿಪಿ ಯಾಗಿ ನೀಲಮಣಿ ಅವರು ನೇಮಕ ಗೊಳ್ಳುವ ಸಾಧ್ಯತೆಗಳಿವೆ.ಅವರೇನಾದರೂ ಡಿಜಿಪಿ ಐಜಿಪಿ ಹುದ್ದೆಗ ನಿಯೋಜನೆಗೊಂಡರೆ

ರಾಜ್ಯದ ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಡಿಜಿಪಿ ಐಜಿಪಿ ಯಾಗುವ ಖ್ಯಾತಿಗೆ ಪಾತ್ರವಾಗಲಿದ್ದಾರೆ.
ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾವೊಬ್ಬ ಮಹಿಳಾ ಐಪಿಎಸ್ ಅಧಿಕಾರಿ ಡಿಜಿಪಿ ಐಜಿಪಿಯಾಗಲಿ ಬೆಂಗಳೂರು ಪೊಲೀಸ್ ಆಯುಕ್ತರಾಗಲಿ ನೇಮಕಗೊಂಡಿಲ್ಲ.

ಅಂದ ಹಾಗೆ ನೀಲಮಣಿ ಅವರು 2020ರ ಜನವರಿಯಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದು ಡಿಜಿಪಿಗಳಾದ ಎಂ.ಎನ್.ರೆಡ್ಡಿ, ಕಿಶೋರ್ ಚಂದ್ರ, ಸತ್ಯನಾರಾಯಣ ರಾವ್ ಅವರುಗಳು ರಾಜ್ಯದ ಡಿಜಿಪಿ ಐಜಿಪಿ ಹುದ್ದೆಗೇರುವ ಸಾಧ್ಯತೆಗಳು ಕಡಿಮೆಯಾಗಲಿದೆ ಎಕೆಂದರೆ ಅವರೆಲ್ಲರೂ ನೀಲಮಣಿ ಅವರಿಗಿಂತ ಮುನ್ನ ನಿವೃತ್ತರಾಗಲಿದ್ದಾರೆ. ನೀಲಮಣಿ ಅವರು ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತ ನರಸಿಂಹರಾಜು ಅವರ ಪತ್ನಿಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
IPS Officer of 1983 batch Neelamani N raju returns to Karnataka services and took charge as DG of Police (internal security) on Wednesday (May 04)
Please Wait while comments are loading...