ಬೆಂಗಳೂರು, ಡಿಸೆಂಬರ್ 30 : ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆ ಗೊಳಿಸಲು ಬಿಎಂಟಿಸಿ ಸಜ್ಜಾಗಿದೆ. 150 ಎಲೆಕ್ಟ್ರಿಕ್ ಎ.ಸಿ. ಬಸ್ ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ನಿಗಮ ನಿರ್ಧರಿಸಿದ್ದು ಟೆಂಡರ್ ಕರೆದಿದೆ. ಫೆಬ್ರವರಿ ಅಂತ್ಯಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗೆ ಒಂದು ವಾರದಲ್ಲಿ ಟೆಂಡರ್
ಏಪ್ರಿಲ್ ಅಥವಾ ಮೇ ವೇಳೆಗೆ ಬಸ್ ಗಳು ರಸ್ತೆಗಿಳಿಯುವ ನಿರೀಕ್ಷೆಯಿದೆ. ಕೇಂದ್ರದ ಫಾಸ್ಟರ್ ಅಡಾಪ್ಷನ್ ಆಂಡ್ ಮ್ಯಾನ್ಯುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಇಕಲ್ಸ್ ಅನುದಾನ ಬಳಸಿಕೊಂಡು ಬಿಎಂಟಿಸಿ ಈ ಯೋಜನೆ ಕೈಗೆತ್ತಿಕೊಂಡಿದೆ. ಗುತ್ತಿಗೆ ಪಡೆದುಕೊಳ್ಳುವ ಕಂಪನಿಗೆ ದೇಶ ವಿದೇಶದಲ್ಲಿ ಕನಿಷ್ಠ ೩೦೦ ಎಲೆಕ್ಟ್ರಿಕ್ ಬಸ್ ಗಳನ್ನು 2ವರ್ಷ ನಿರ್ವಹಣೆ ಮಾಡಿದ ಅನುಭವವಿರಬೇಕು. ಮತ್ತು ಸೂಕ್ತವಾದ ರೀಚಾರ್ಜಿಂಗ್ ಘಟಕವನ್ನೂ ಹೊಂದಿರಬೇಕು ಎಂದು ಟೆಂಡರ್ ನಲ್ಲಿ ಷರತ್ತು ವಿಧಿಸಲಾಗಿದೆ.
ನಗದು ರಹಿತ ಪ್ರಯಾಣಕ್ಕಾಗಿ ಬಿಎಂಟಿಸಿ ಸ್ಮಾರ್ಟ್ ಕಾರ್ಡ್!

ಎಲೆಕ್ಟ್ರಿಕ್ ಬಸ್ ಕೇವಲ 4 ಗಂಟೆಯಲ್ಲಿ ರೀಚಾರ್ಜ್ ಆಗುವಂತಿರಬೇಕು:
ವಿದ್ಯುತ್ ಮರುಪೂರಣ(ಚಾರ್ಜಿಂಗ್) ಘಟಕ ಎಲೆಕ್ಟ್ರಿಕ್ ಬಸ್ ಯೋಜನೆಯ ಪ್ರಮುಖ ಭಾಗವಾಗಿದೆ. ಟೆಂಡರ್ ನಲ್ಲಿ ಷರತ್ತಿನಂತೆ ಚಾರ್ಜಿಂಗ್ ಘಟಕಕ್ಕೆ ಬೇಕಾಗಿರುವ ಭೂಮಿ ಮತ್ತು ಘಟಕದ ಸ್ಥಾಪನೆ ಜವಾಬ್ದಾರಿಯೂ ಕಂಪನಿ ಮೇಲಿರಲಿದ್ದು, ಪ್ರತಿ ಬಸ್ ನ ವಿದ್ಯುತ್ ಬಳಕೆ ವೆಚ್ಚವನ್ನು ಬಿಎಂಟಿಸಿ ಭರಿಸಲಿದೆ.
ಪ್ರತಿ ಬಸ್ 4 ಗಂಟೆಯೊಳಗೆ ಪೂರ್ಣ ಚಾರ್ಜ್ ಆಗುವಂತಿರಬೇಕು. 150 ಬಸ್ ಗಳಿಗೆ ನಿಗಮ ಡಿಪೋ ನೀಡಲಿದ್ದು, 2 ನಿರ್ವಹಣಾ ವ್ಯವಸ್ಥಾಪಕರನ್ನು ಕಂಪನಿಯೇ ನೇಮಿಸಿಕೊಳ್ಳಬೇಕು ಎಂದು ಟೆಂಡರ್ ನಲ್ಲಿ ತಿಳಿಸಿದೆ.

9 ರಿಂದ 12 ಮೀಟರ್ ಬಸ್
32 ಆಸನ ಸಾಮರ್ಥ್ಯದ 9 ಮೀ. ಉದ್ದದ ಅಥವಾ 41 ಆಸನ ಸಾಮರ್ಥ್ಯದ 11 ರಿಂದ 12 ಮೀಟರ್ ಉದ್ದದ ಎಲೆ್ಕಟ್ರಿಕ್ ಬಸ್ ಗಳನ್ನು 10 ವರ್ಷ ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲು ನಿಗಮ ನಿರ್ಧರಿಸಿದೆ.

ಬಸ್ ನಿತ್ಯ 200 ಕಿ.ಮೀ ಸಂಚರಿಸಲಿದೆ
10 ವರ್ಷದ ಒಪ್ಪಂದದಿಂದ ಗುತ್ತಿಗೆ ಪಡೆದ ಕಂಪನಿಗೆ ನಿಗಮ ಕಿ.ಮೀ ಗೆ ನಿಗದಿಪಡಿಸಿದ ಹಣ ನೀಡಲಿದೆ. ಬಸ್ ಕನಿಷ್ಠ 200 ಕಿ.ಮೀ ಸಂಚರಿಸಲಿದ್ದು, ಹೆಚ್ಚಿನ ಕಿ.ಮೀ ಗೆ ಪ್ರತ್ಯೇಕ ಹಂತದಲ್ಲಿ ದರ ನಿಗದಿ ಮಾಡಲಾಗುತ್ತದೆ. 2014ರಲ್ಲಿ ಮೊಟ್ಟ ಮೊದಲ ಬಾರಿಗೆ ಎಲೆಕ್ಟ್ರಿಕ್ ಬಸ್ ನ ಪ್ರಾಯೋಗಿಕ ಓಡಾಟವನ್ನು ನಿಗಮ ನಡೆಸಿತ್ತು.

ಕಂಪನಿ ಬಸ್ ಗಳ ನಿರ್ವಹಣೆ ಮಾಡಬೇಕು
ಗುತ್ತಿಗೆ ಪಡೆಯುವ ಕಂಪನಿಯೇ ಎಲೆಕ್ಟ್ರಿಕ್ ಬಸ್ ಗಳ ನೋಂದಣಿ , ವಿಮೆ, ಮೋಟಾರು ವಾಹನ ತೆರಿಗೆ, ಸೇವಾ ತೆರಿಗೆ ಪಾವತಿಸಬೇಕು. ಪ್ರಯಾಣಿಕ ತೆರಿಗೆ ಮತ್ತು ಸ್ಟೇಜ್ ಕ್ಯಾರಿಯೇಜ್ ಪರ್ಮಿಟ್ ಜವಾಬ್ದಾರಿಯನ್ನು ಬಿಎಂಟಿಸಿ ಹೊತ್ತುಕೊಳ್ಳಲಿದೆ.ಉಳಿದಂತೆ ಕಂಪನಿಯೇ ಚಾಲಕರನ್ನು ನೀಡಬೇಕು ಮತ್ತು ಬಸ್ ನಿರ್ವಹಣೆ ಮಾಡಬೇಕಿದೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!