ಲೈಂಗಿಕ ಕಿರುಕುಳ ಕೇಸ್ : ಬೆಂಗಳೂರು 3ನೇ ಸ್ಥಾನದಲ್ಲಿದೆ

Posted By:
Subscribe to Oneindia Kannada

ಬೆಂಗಳೂರು, ಸೆ. 18: ಲೈಂಗಿಕ ಕಿರುಕುಳ ಮತ್ತು ಮಹಿಳಾ ದೌರ್ಜನ್ಯ ಪ್ರಕರಣಗಳು ಅತಿ ಹೆಚ್ಚು ದಾಖಲಾಗುವ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು 3ನೇ ಸ್ಥಾನ ಪಡೆದಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ ಮಾಹಿತಿ ಹೊರಹಾಕಿದೆ.

ಅಲ್ಲದೆ ದೇಶದಲ್ಲಿ ದಾಖಲಾಗುವ ಮಹಿಳಾ ದೌರ್ಜನ್ಯ ಮತ್ತು ಕಿರುಕುಳ ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯವು 5ನೇ ಸ್ಥಾನ ಪಡೆದಿದೆ ಎಂದು ಎನ್‌ಸಿಆರ್‌ಬಿ ಹೇಳಿದೆ.

National Crime Records Bureau statistics Molestation cases Bengaluru third

2015ನೇ ಸಾಲಿನಲ್ಲಿ 53 ಭಾರತೀಯ ನಗರಗಳ ಪೈಕಿ ಬೆಂಗಳೂರಿನಲ್ಲಿ 718 ಪ್ರಕರಣ ದಾಖಲಾಗಿದ್ದು, 3ನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ ಅತಿ ಹೆಚ್ಚು ಅಂದರೆ, 4,563 ಪ್ರಕರಣ ಮತ್ತು 2ನೇ ಸ್ಥಾನದಲ್ಲಿರುವ ಮುಂಬೈನಲ್ಲಿ 2008 ಪ್ರಕರಣ ದಾಖಲಾಗಿದೆ. ರಾಜ್ಯವಾರು ಪ್ರಕರಣಗಳ ಪೈಕಿ ಕರ್ನಾಟಕದಲ್ಲಿ 5,112 ಪ್ರಕರಣ ದಾಖಲಾಗಿದ್ದು ಐದನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ 4,563 ಪ್ರಕರಣಗಳೂ, ಮುಂಬೈನಲ್ಲಿ 2,008ಕೇಸುಗಳು ದಾಖಲಾಗಿವೆ.

ಒಟ್ಟಾರೆ ದೇಶದ ಎಲ್ಲಾ ಕೋರ್ಟುಗಳಲ್ಲಿ 2,91,247 ಕೇಸುಗಳು ವಿಚಾರಣೆಗೆ ಬಾಕಿ ಉಳಿದಿವೆ. ಈ ಪೈಕಿ ಲೈಂಗಿಕ ಕಿರುಕುಳ ಕೇಸುಗಳು 60,875 2015ರಲ್ಲಿ ದಾಖಲಾಗಿವೆ. ಕಚೇರಿಗಳಲ್ಲಿ ಕಿರುಕುಳ ನೀಡಿದ ಪ್ರಕರಣಗಳು 1,797ಗಳಿದ್ದರೆ, ಸಾರ್ವಜನಿಕ ಸಾರಿಗೆಗಳಲ್ಲಿ 661 ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru reported the third highest attacks -718 -against women with an intent to outrage their modesty among 53 Indian cities, according to the National Crime Records Bureau statistics for 2015.
Please Wait while comments are loading...