45 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ: ಸಿಕ್ಕಿಬಿದ್ದವನು ವಿಜ್ಞಾನಿ!

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 4: ಈ ಸುದ್ದಿ ಬೆಳವಣಿಗೆ ಬೆಂಗಳೂರು ಹಾಗೂ ಹೈದರಾಬಾದ್ ಮಧ್ಯೆ ಆಗಿದ್ದರೂ ಈ ಪ್ರಕರಣದಲ್ಲಿ ಸಿಕ್ಕಿರುವ ಗಂಟು ಮಾತ್ರ ಬಹಳ ದೊಡ್ಡದು ಹಾಗೂ ಭಯ ಹುಟ್ಟಿಸುವಂಥದ್ದು. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋದವರು ಹೈದರಾಬಾದ್ ನಲ್ಲಿ 231 ಕೆ.ಜಿ. ಆಂಫೆಥಮೈನ್ ಡ್ರಗ್ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 45 ಕೋಟಿ ರುಪಾಯಿ. ಇನ್ನು ಮುಖ್ಯ ಸೂತ್ರಧಾರ ಬೆಂಗಳೂರಿನಲ್ಲಿ ವಾಸವಿದ್ದ ವಿಜ್ಞಾನಿ ವೆಂಕಟ ರಾಮ ರಾವ್.

ದಕ್ಷಿಣ ಭಾರತದ ಪ್ರಮುಖ ಡ್ರಗ್ ಜಾಲವಿದು ಎಂಬುದಂತೂ ಖಾತ್ರಿಯಾಗಿದೆ. ವೆಂಕಟ ರಾಮ ರಾವ್ ನ ಸಹವರ್ತಿ ರವಿಶಂಕರ್ ರಾವ್ ನಿಂದ ಹೈದರಾಬಾದ್ ನಲ್ಲಿ ಡ್ರಗ್ ವಶಪಡಿಸಿಕೊಂಡ ಎನ್ ಸಿಬಿಯವರು, ಎಲೆಕ್ಟ್ರಾನಿಕ್ಸ್ ಸಿಟಿಯ ಬಾಡಿಗೆ ಮನೆಯಲ್ಲಿದ್ದ ವಿಜ್ಞಾನಿಯ ಹೆಂಡತಿಯನ್ನೂ ಬಂಧಿಸಿ, 30 ಗ್ರಾಮ್ ಆಂಫೆಥಮೈನ್ ಡ್ರಗ್, 1.23 ಕೋಟಿ ರುಪಾಯಿ ನಗದು ವಶಪಡಿಸಿಕೊಂಡಿದ್ದಾರೆ.[ನೈಜೀರಿಯಾ ಪ್ರಜೆಗಳು ಅರೆಸ್ಟ್: 20 ಲಕ್ಷ ಮೌಲ್ಯದ ಕೊಕೈನ್ ವಶಕ್ಕೆ]

NCB Seizes Amphetamine worth of 45 crore

ಹೈದರಾಬಾದ್ ನಿಂದ ಬೆಂಗಳೂರಿಗೆ ಸರಕಿನ ಜತೆಗೆ ಹೊರಟಿದ್ದಾಗಲೇ ಮಿಯಾಪುರ್ ಬಳಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಮಾಲಿನ ಒಟ್ಟು ಮೌಲ್ಯ ನಲವತ್ತೈದು ಕೋಟಿ ಎಂದು ಖಚಿತವಾಗಿದ್ದು, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ ನ ಎನ್ ಸಿಬಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಗಳು ಆಂಫೆಥಮೈನ್ ನ ಅಕ್ರಮ ಸಂಗ್ರಹ, ವಿತರಣೆ ಜಾಲದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿಲ್ಲ: ಮಮತಾ ಕುಲಕರ್ಣಿ]

ಎಲೆಕ್ಟ್ರಾನಿಕ್ಸ್ ಸಿಟಿಯ ಹೆಬ್ಬಗೋಡಿಯಲ್ಲಿ ಕಳೆದ ಕೆಲ ವರ್ಷಗಳಿಂದ ವೆಂಕಟ ರಾಮ ರಾವ್ ತನ್ನ ಹೆಂಡತಿ ಜತೆಗೆ ವಾಸವಿದ್ದ. ಈತ ಬಯೋಟೆಕ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆ ಕಂಪೆನಿಯ ಯೂನಿಟ್ ವೊಂದು ಹೈದರಾಬಾದ್ ನ ಮಿಯಾಪುರದಲ್ಲಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಡ್ರಗ್ ಅನ್ನು ಹೈದರಾಬಾದ್ ನಿಂದ ಬೆಂಗಳೂರಿಗೆ ತಂದು, ಚೆನ್ನೈಗೆ ಸಾಗಿಸುವ ಯೋಜನೆ ಇತ್ತು.

ಮಿಯಾಪುರದ ಟ್ರೈಡೆಂಟ್ ಲ್ಯಾಬ್ ನಲ್ಲಿ ಗುಂಪೊಂದು ಕಾನೂನು ಬಾಹಿರವಾಗಿ ಆಂಫೆಥಮೈನ್ ತಯಾರಿಸುತ್ತಿತ್ತು. ಅಲ್ಲಿ ದಾಳಿ ಮಾಡಿ ಡ್ರಗ್ ವಶಪಡಿಸಿಕೊಳ್ಳಲಾಗಿದೆ. ಸದ್ಯದಲ್ಲೇ ಇನ್ನಷ್ಟು ಮಂದಿಯನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆರೋಪಿಗಳು ಕೆಲವು ಗ್ರಾಹಕರ ಜತೆಗೆ ಸಂಪರ್ಕದಲ್ಲಿದ್ದರು. ಮುಂದಿನ ದಿನಗಳಲ್ಲಿ ಆ ಮಾಹಿತಿಯನ್ನು ಪಡೆದು, ತಪ್ಪಿತಸ್ಥರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.[ಡ್ರಗ್ಸ್ ಮಾಫಿಯಾ: ಚಿಕ್ಕಮಗಳೂರಿನ ರೂಪದರ್ಶಿ ಬಂಧನ]

ಆಂಫೆಥಮೈನ್ ಅತ್ಯಲ್ಪ ಪ್ರಮಾಣದಲ್ಲಿ ಔಷಧಗಳಿಗೆ ಬಳಸಲಾಗುತ್ತಿತ್ತು. ನಾರ್ಕೊಲೆಪ್ಸಿ, ಏಕಾಗ್ರತೆ ಕೊರತೆ ಸಮಸ್ಯೆಗೆ ಭಾರತ ಮತ್ತು ಕೆಲವು ದೇಶಗಳಲ್ಲಿ ಬಳಕೆಯಿತ್ತು. ಆದರೆ ಇದಕ್ಕೆ ನಿಷೇಧ ಹೇರಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The NCB arrested scientist Venkat Rama Rao from Bengaluru, along with his accomplice, Ravi Shankar Rao and recovered 231 kg Amphetamine worth of 45 crore in Hyderabad.
Please Wait while comments are loading...