ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಸರ ಸಂರಕ್ಷಣೆಗೆ ಬೆಂಗಳೂರಲ್ಲಿ ಸೈಕಲ್ ಜಾಥಾ

|
Google Oneindia Kannada News

ಬೆಂಗಳೂರು, ಡಿ. 14: 'ವಿಶ್ವ ಶಕ್ತಿ ಸಂರಕ್ಷಣಾ ದಿನಾಚರಣೆ' ಅಂಗವಾಗಿ ಅಸಿಸ್ಟ್​ಹೆಲ್ಪ್​ಸ್ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಸೈಕಲ್ ಜಾಥಾ ಆಯೋಜಿಸಿತ್ತು. ಸುಮಾರು 2000 ಕ್ಕೂ ಹೆಚ್ಚು ಶಾಲಾ ಮಕ್ಕಳು ಈ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದದ್ದರು.

ಖಾಲಿಯಾಗುವ ಶಕ್ತಿ ಮೂಲಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು, ನವೀಕರಣಗೊಳಿಸಬಲ್ಲ ಇಂಧನ ಶಕ್ತಿ ಬಳಕೆ ಒತ್ತು ನೀಡುವುದು ಮತ್ತು ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಸೈಕಲ್ ಜಾಥಾದ ಉದ್ದೇಶವಾಗಿತ್ತು.[ಪಾಲಿಥಿನ್ ಬ್ಯಾಗ್ ನಿಷೇಧ : ಉಡುಪಿ ಮಾದರಿ]

nature

ಜೀವಿಕ ಆಸ್ಪತ್ರೆ ಮತ್ತು ರೆಡ್ಡಿ ಆಸ್ಪತ್ರೆ ಮುಖ್ಯಸ್ಥರಾದ ಡಾ. ಅಶೋಕ್​ ರೆಡ್ಡಿ, ಚಲನಚಿತ್ರ ನಟರಾದ ಸುಚೇಂದ್ರ ಪ್ರಸಾದ್​, ನಟಿ ದೀಪಿಕಾ ದಾಸ್​ ಮತ್ತು ಆಶಿನಿ ಶೆಟ್ಟಿ ಭಾಗವಹಿಸಿದ್ದರು. ಆರ್​ ಜೆ ವಿನಾಯಕ್​ ಜೋಷಿ, ಲವ್​ ಗುರು ರಾಜೇಶ್​ ಸಾಥ್​ಮ ಅಂತಾರಾಷ್ಟ್ರೀಯ ಕ್ರೀಡಾಪಟು ಅರ್ಜುನ್​ ದೇವಯ್ಯ ಹಾಜರಿದ್ದರು.

ಸೈಕಲ್ ಜಾಥಾದಲ್ಲಿ 17 ವರ್ಷದೊಳಗಿನ ಮಕ್ಕಳು ಮತ್ತು ಯುವಕರು ಭಾಗವಹಿಸಿದರು. ಅಸಿಸ್ಟ್​ಹೆಲ್ಪ್​ ಪ್ರತಿಷ್ಠಾನ ಮತ್ತು ಕ್ವಿಟಿಲ್ಸ್​ ಇಂಡಿಯಾ ಆಯೋಜಿಸಿದ್ದ ಈ ಜಾಥಾ 5 ಕಿಮೀ ದೂರ ಸಾಗಿತು.[ಬಾಲ ಕಾರ್ಮಿಕರ ಉಳಿಸಲು ಇ ಪತ್ರಿಕೆ]

nature 1

ಎನ್​ಜಿಓ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಅಸಿಸ್ಟ್​ಹೆಲ್ಪ್​ ಪ್ರತಿಷ್ಟಾನ ಒಂದು 'ಪ್ರತಿಯೊಬ್ಬರು ಪ್ರತಿಯೊಬ್ಬರಿಗಾಗಿ' ಎಂಬ ಧ್ಯೇಯ ಇಟ್ಟುಕೊಂಡು ಕೆಲಸಮಾಡುತ್ತಿದೆ. ಆರೋಗ್ಯ, ಪರಿಸರ, ವಿದ್ಯಾಭ್ಯಾಸ ಮತ್ತು ಬಡತನದ ಬಗ್ಗೆ ಜಾಗೃತಿ ಮತ್ತು ನಿರ್ಮೂಲನೆಗೆ ಪ್ರಯತ್ನಪಡುತ್ತಿದೆ.

nature 2
English summary
Bengaluru: To protect and save nature 'Assistshelp' NGO conducted a cycle rally on Sunday. Film Stars, Doctors and thousands of children's participated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X