ಭಾರತ್ ನೀತಿ ಸಂವಾದಕ್ಕೆ ಮಾರ್ಚ್ 26ಕ್ಕೆ ರೈಲ್ವೆ ಸಚಿವ ಬೆಂಗಳೂರಿಗೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮಾರ್ಚ್ 21: ಪ್ರಜಾಪ್ರಭುತ್ವ, ಸ್ವಚ್ಛ ಆಡಳಿತ ಮತ್ತು ಸಾಮಾಜಿಕ ಜಾಲತಾಣ ಎಂಬ ವಿಚಾರವಾಗಿ ಚರ್ಚಾಕೂಟವೊಂದನ್ನು ಭಾರತ್ ನೀತಿ ಸಂಸ್ಥೆಯಿಂದ ಆಯೋಜಿಸಿದೆ. ಉತ್ತಮ ಆಡಳಿತದಲ್ಲಿ ತಂತ್ರಜ್ಞಾನದ ಪಾತ್ರ ಏನು, ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ನಾಗರಿಕರು ಹೇಗೆ ಕೊಡುಗೆ ನೀಡಬಹುದು ಎಂಬ ಬಗ್ಗೆ ಮಾರ್ಚ್ 26ರ ಭಾನುವಾರ ಬೆಂಗಳೂರಿನ ಲೀ ಮೆರಿಡಿಯನ್ ಹೋಟೆಲ್ ನಲ್ಲಿ ಚರ್ಚಾಕೂಟ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರಳೀಧರ್ ರಾವ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸರಕಾರದ ಎಲೆಕ್ಟ್ರಾನಿಕ್ಸ್-ಐಟಿ ನಿರ್ದೇಶಕಿ ಅರುಣಾ ಸುಂದರ್ ರಾಜನ್, ಆಂಧ್ರ ಸರಕಾರದ ಕಾರ್ಯದರ್ಶಿ ವಿಜಯಾನಂದ್, ತೆಲಂಗಾಣದ ಕಾರ್ಯದರ್ಶಿ ಜಯೇಶ್ ರಂಜನ್, ವಿದೇಶಾಂಗ ಖಾತೆ ರಾಜ್ಯ ಸಚಿವ ಎಂಜೆ ಅಕ್ಬರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.[ಸಾಮಾಜಿಕ ಜಾಲತಾಣಗಳಿಗೆ ಮೋದಿ ಖರ್ಚು ಮಾಡಿದ್ದು ಇಷ್ಟೆನಾ?]

National Conclave on 'Democracy, Good Governance and Social Media' at Bengaluru on 26th March

ಜತೆಗೆ ಮೈಕ್ರೋಸಾಫ್ಟ್, ಫೇಸ್ ಬುಕ್, ಟ್ವಿಟ್ಟರ್, ಯಾಹೂದಂಥ ಕಂಪೆನಿಗಳ ಸಿಇಒಗಳು ಮತ್ತು ಅಧಿಕಾರಿಗಳು ಭಾಗವಹಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಅವರ ಜತೆ ಚರ್ಚೆ ನಡೆಯುತ್ತಿದೆ. ಭಾರತ್ ನೀತಿ ಸಂಸ್ಥೆಯು ಈವರೆಗೆ ಹಲವು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಬೆಂಗಳೂರಿನಲ್ಲಿ 2016ರಲ್ಲಿ ನಡೆದ ಡಿಜಿಟಲ್ ಇಂಡಿಯಾ ಸಮಾವೇಶ ಒಂದು ಉದಾಹರಣೆಯಾಗಿ ಹೇಳಬಹುದು.[ಸಹಾಯಹಸ್ತ ಚಾಚುವಲ್ಲಿ ಸುಷ್ಮಾರನ್ನು ಮೀರಿಸುವವರೇ ಇಲ್ಲ!]

ನಾಸ್ಕಾಂ (NASSCOM) ಜತೆಗೆ ಭಾರತ್ ನೀತಿ ಸಂಸ್ಥೆ ಜಂಟಿಯಾಗಿ ಈ ಹಿಂದೆ ದೆಹಲಿಯಲ್ಲಿ ಕೂಡ ಕಾರ್ಯಕ್ರಮಗಳನ್ನು ನಡೆಸಿದೆ.ಆಸಕ್ತರು www.bharatniti.in/conclave2017 ಮೂಲಕ ಭಾಗವಹಿಸಬಹುದು. ಕೇವಲ ಸೀಮಿತ ಸೀಟುಗಳು ಮಾತ್ರ ಲಭ್ಯವಿರುವುದರಿಂದ ಶೀಘ್ರವಾಗಿ ನೋಂದಾಯಿಸಬೇಕು ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಭಾರತ್ ನೀತಿ ಕರ್ನಾಟಕ ಮಾಧ್ಯಮ ಪ್ರತಿನಿಧಿ ರಾಜಶೇಖರ ಕೆ. ಶೆಟ್ಟಿ ಅವರನ್ನು 98456 08418 ಮೂಲಕ ಸಂಪರ್ಕಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bharat Niti is organising National Conclave on 'Democracy, Good Governance and Social Media' at Bengaluru on Sunday, 26th March 2017.
Please Wait while comments are loading...