ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಕಲಾ ಪರಿಷತ್ತಿನಲ್ಲಿ ದೇಶದ ಪ್ರಥಮ ಲಲಿತಕಲಾ ಸಂಜೆ ಕಾಲೇಜು ಆರಂಭ

By Nayana
|
Google Oneindia Kannada News

ಬೆಂಗಳೂರು, ಜು.12: ಕಲೆಯ ವಿವಿಧ ಆಯಾಮಗಳ ಕುರಿತು ತರಬೇತಿ ನೀಡುವ ಮೂಲಕ ಯುವ ಕಲಾವಿದರನ್ನು ಕಲಾ ಪ್ರಪಂಚಕ್ಕೆ ಪರಿಚಯಿಸುತ್ತಿರುವ ಕರ್ನಾಟಕ ಚಿತ್ರ ಕಲಾ ಪರಿಷತ್ತಿನಲ್ಲಿ ದೃಶ್ಯಕಲೆ ಸಂಜೆ ಕಾಲೇಜು ಆರಂಭಗೊಂಡಿದೆ.

ಪರಿಷತ್ತಿನ ಆವರಣದಲ್ಲಿರುವ ಫೈನ್‌ ಆರ್ಟ್ಸ್ ಕಾಲೇಜಿನಲ್ಲಿ ರಾಜ್ಯ, ದೇಶ, ವಿದೇಶಗಳ ವಿದ್ಯಾರ್ಥಿಗಳು ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅನಿಮೇಷನ್‌ ಸೇರಿ ವಿವಿಧ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದಿ ಹಾಗೂ ಡಿಪ್ಲೊಮಾ ವಿಭಾಗದಲ್ಲಿ ಓದುತ್ತಿದ್ದಾರೆ. ಆದರೆ ಆರ್ಥಿಕ ಸಮಸ್ಯೆ ಹಾಗೂ ವಿವಿಧ ಕ್ಷೇತ್ರದಲ್ಲಿ ಉದ್ಯೋಗಮಾಡುತ್ತಿರುವವರಿಗೆ ಕಲಾ ಕಾಲೇಜಿನಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶೀಘ್ರವೇ ಸಂಜೆ ಕಾಲೇಜು!ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶೀಘ್ರವೇ ಸಂಜೆ ಕಾಲೇಜು!

ಹೀಗಾಗಿ ಬಹುತಕ ಅಭ್ಯರ್ಥಿಗಳು ಸಂಜೆ ಕಾಲೇಜು ಆರಂಭಿಸುವಂತೆ ಬೇಡಿಕೆ ಇಟ್ಟಿದ್ದರು. ಅದರಂತೆ ಫೈನ್‌ ಆರ್ಟ್‌ ಕಾಲೇಜಿನಲ್ಲಿಯೇ ಕರ್ನಾಟಕ ಚಿತ್ರಕಲಾ ಪರಿಷತ್ತು ಸಂಜೆ ಕಾಲೇಜು ಆರಂಭಿಸಿದ್ದು, ಪದವಿ ಕೋರ್ಸ್‌ಗೆ ಸಂಜೆ ವಿದ್ಯಾರ್ಥಿಗಳು ಈಗಾಗಲೇ ಪ್ರವೇಶ ಪಡೆದಿದ್ದಾರೆ.

Nations first fine arts evening college resume in Bengaluru

30 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶ ಬಳಿಕ ಪ್ರವೇಶ ಪಡೆಯಲು ಚಿತ್ರಕಲಾ ಪರಿಷತ್ತಿನಲ್ಲಿ ಅವಕಾಶ ಕಲ್ಪಿಸಿದೆ.

ಐದು ವಿಷಯ ಬೋಧನೆ: ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳು ಸಂಜೆ 4 ರಿಂದ ರಾತ್ರಿ9 ರವರೆಗೆ ನಡೆಯಲಿವೆ. ಚಿತ್ರಕಲೆ , ದೃಶ್ಯಕಲೆ, ಗ್ರಾಫಿಕ್ಸ್, ಆರ್ಟಿಸ್ಟ್ರಿ, ಅನಿಮೇಶನ್, ಅಪ್ಲೈಡ್ ಮತ್ತು ಸೆರಾಮಿಕ್ಸ್ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯಬಹುದು. ಪ್ರತಿ ಬ್ಯಾಚ್ ಗೆ ತಲಾ30 ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶವಿರುತ್ತದೆ.

English summary
Nation's first fine arts evening college has been resumed at Chitra Kala Parishat in Bengaluru on Wednesday with five different courses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X