ಮಣ್ಣಿನ ಮಗ ಗೌಡರಿಗೆ ಟ್ವಿಟ್ಟರ್ ನಲ್ಲಿ ಶುಭಾಶಯದ ಮಹಾಪೂರ

Posted By:
Subscribe to Oneindia Kannada

ಬೆಂಗಳೂರು, ಮೇ 18: ಮಣ್ಣಿನ ಮಗ ಎಂದೇ ಖ್ಯಾತರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇಂದು ತಮ್ಮ 84 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರಾದೇಶಿಕ ಪಕ್ಷದಿಂದ ಗುರುತಿಸಿಕೊಂಡು, ನಂತರ ಪ್ರಧಾನಿ ಗಾದಿಯನ್ನು ಅಲಂಕರಿಸಿದ ದೇವೇ ಗೌಡ ಅವರ ಸಾಧನೆ ಸಾಮಾನ್ಯವಾದುದೇನಲ್ಲ.

ನಾಡಿನ ರೈತರ ಸಮಸ್ಯೆಗಳಿಗೆ ದನಿಯಾಗಿ, ಅವುಗಳು ಕೇಂದ್ರ ಸರ್ಕಾರದ ಕದ ತಟ್ಟುವಂತೆ ಮಾಡುವ ಮೂಲಕ ರಾಜ್ಯದ ಒಬ್ಬ ಸಮರ್ಥ ಪ್ರತಿನಿಧಿಯಾಗಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ರಾಜಕೀಯವಾಗಿ ಬೆಳೆದುಬಂದಿದ್ದು ಒಂದು ಯಶೋಗಾಥೆಯೇ ಸರಿ.[ದೇವೇಗೌಡರ 84ನೇ ಹುಟ್ಟುಹಬ್ಬ: ಈ ಬಾರಿ ಅತಿ ವಿಶಿಷ್ಟ]

1933 ಮೇ 18 ರಂದು ಒಕ್ಕಲಿಗ ಕುಟುಂಬದಲ್ಲಿ ಜನಿಸಿದ ದೇವೇಗೌಡರು ಅಂದಿನ ಕಾಲದಲ್ಲೇ ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ ಮಾಡಿದವರು. ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಗೌಡರು, ದೂರದ ದೆಹಲಿಯ ಪ್ರಧಾನಿ ಗದ್ದುಗೆಯನ್ನು ಏರಿಕುಳಿತು ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಮಣ್ಣಿನ ಮಗನ ಸೊಗಡನ್ನು ತೋರಿಸಿಕೊಟ್ಟವರು.

ರಾಜ್ಯ- ರಾಷ್ಟ್ರಗಳ ರಾಜಕೀಯ ಅನುಭವ ಅವರನ್ನೊಬ್ಬ ಮುತ್ಸದ್ದಿಯನ್ನಾಗಿಸಿದೆ. ಅನುಭವ, ಜಾಣತನ, ಕುಚೋದ್ಯ, ತೀಕ್ಷ್ಣಮತಿತ್ವ, ತಾಳ್ಮೆ ಎಲ್ಲವುಗಳ ಸಮ್ಮಿಶ್ರಣವಾದ ಗೌಡರಿಗೆ ಇಂದು ದೇಶದಾದ್ಯಂತ ಶುಭ ಹಾರೈಕೆಯ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರೂ ಗೌಡರಿಗೆ ಶುಭಹಾರೈಸಿದ್ದಾರೆ.[ಬರುತ್ತಿದೆ ಮಾಜಿ ಪ್ರಧಾನಿ ದೇವೇಗೌಡರ ಆತ್ಮಚರಿತ್ರೆ]

ರೈತ ನಾಯಕನಿಗೆ ಶುಭಾಶಯ

ಮಾಜಿ ಪ್ರಧಾನಿ ಮತ್ತು ರೈತರ ನಾಯಕರಾದ ಎಚ್ ಡಿ ದೇವೇಗೌಡರಿಗೆ ಜನ್ಮದಿನದ ಶುಭಾಶಯಗಳು. ದೇವರು ಅವರಿಗೆ ಆಯುರಾರೋಗ್ಯವನ್ನು ದಯಪಾಲಿಸಲಿ ಎಂದು ಮಾಜಿ ಪ್ರಧಾನಿಗೆ ಹಾಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ಟರ್ ಮೂಲಕ ಶುಭಕೋರಿದ್ದಾರೆ.

ಹಾರ್ದಿಕ ಶುಭಾಶಯಗಳು

ಹಿರಿಯ ಮುಖಂಡ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಎಂದು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಟ್ವೀಟ್ ಮಾಡಿದ್ದಾರೆ.[ಮಾಜಿ ಸಂಸದ ಎಚ್ ವಿಶ್ವನಾಥ್ ಜೆಡಿಎಸ್ ಗೆ: ದೇವೇಗೌಡ್ರು ಏನಂದ್ರು?]

ಮಣ್ಣಿನ ಮಗನಿಗೆ ಶುಭಹಾರೈಕೆ

ಮಣ್ಣಿನ ಮಗ ಮತ್ತು ರಾಜಕೀಯ ಮುತ್ಸದ್ದಿ ದೇವೇಗೌಡರಿಗೆ ಜನ್ಮದಿನದ ಶುಭಹಾರೈಕೆಗಳು ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

ಚಿರನೂತನ ನಾಯಕತ್ವ

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಅವರ ನಾಯಕತ್ವ ಎಂದಿಗೂ ಹೀಗೇ ಚಿರನೂತನವಾಗಿರಲಿ ಎಂದು ಛತ್ತೀಸ್ ಗಡ ಮುಖ್ಯಮಂತ್ರಿ ಡಾ ರಮಣ ಸಿಂಗ್ ಟ್ವೀಟ್ ಮಾಡಿದ್ದಾರೆ.[ದೇವೇಗೌಡ ಬಗ್ಗೆ ಟ್ವೀಟ್ ಮಾಡಿದ ಒಮರ್, ಕೆರಳಿದ ಸಿಟಿ ರವಿ]

ನೆಮ್ಮದಿಯ ಬದುಕು ನಿಮ್ಮದಾಗಲಿ

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಆಯುರಾರೋಗ್ಯದ ಜೊತೆ ನೆಮ್ಮದಿಯ ಬದುಕನ್ನೂ ದಯಪಾಲಿಸಲಿ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವ ಪರ್ಶೋತ್ತಮ್ ರುಪಾಲ ಟ್ವೀಟ್ ಮಾಡಿದ್ದಾರೆ.[ರೇವಣ್ಣ ಸಮರ್ಥ ಆದರೆ, ಸಿಎಂ ಅಭ್ಯರ್ಥಿಯಲ್ಲ: ದೇವೇಗೌಡ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Prime minister JDS leader H.D.Deve gowda is celebrating his 84th birthday today. PM Modi also wishes for his birthday. Here are twitter reactions on his birthday.
Please Wait while comments are loading...