ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಟೋಬರ್‌ 6ರಂದು ಬೆಂಗಳೂರಿಗೆ ಬರ್ತಾರೆ ಮೋದಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 02 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಂದು ದಿನದ ಭೇಟಿಯಾಗಿ ಅಕ್ಟೋಬರ್ 6 ರಂದು ಉದ್ಯಾನ ನಗರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಜರ್ಮನ್‌ ಚಾನ್ಸೆಲರ್‌ ಅವರ ಜೊತೆ ಮೋದಿ ಬಾಷ್‌ ಕಾರ್ಖನೆಗೆ ಭೇಟಿ ನೀಡಲಿದ್ದಾರೆ.

ಅಕ್ಟೋಬರ್‌ 6ರ ಮಂಗಳವಾರ ಬೆಳಗ್ಗೆ ನಗರಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅಂದು ಸಂಜೆ ದೆಹಲಿಗೆ ವಾಪಸ್ ಆಗಲಿದ್ದಾರೆ. ಆಡುಗೋಡಿಯಲ್ಲಿರುವ ಬಾಷ್‌ ಕಂಪನಿಯ ಕಾರ್ಖಾನೆಗೆ ಭೇಟಿ ನೀಡಲು ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. [ಬಿಡದಿಯಲ್ಲಿ ಬಾಷ್ ಅತ್ಯಾಧುನಿಕ ಉತ್ಪಾದನಾ ಘಟಕ]

narendra modi

ಆಡುಗೋಡಿಯಲ್ಲಿ ಜರ್ಮನಿ ಮೂಲದ ಬಾಷ್‌ ಕಂಪನಿಯ ಕಾರ್ಖಾನೆಯಿದ್ದು, ಇದನ್ನು ವೀಕ್ಷಿಸಲು ಜರ್ಮನ್‌ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಆಗಮಿಸುತ್ತಿದ್ದಾರೆ. ಮೋದಿ ಮತ್ತು ಮರ್ಕೆಲ್ ಜೊತೆಯಾಗಿ ಕಾರ್ಖನೆಗೆ ಭೇಟಿ ನೀಡಲಿದ್ದು, ನಂತರ ಲೀಲಾ ಪ್ಯಾಲೇಸ್‌ ಹೋಟೆಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. [ನವೆಂಬರ್ ಬದಲು 2016ರ ಫೆಬ್ರವರಿಯಲ್ಲಿ ಜಿಮ್]

ಜರ್ಮನ್‌ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಅವರು ಅಕ್ಟೋಬರ್‌ 5ರ ಸೋಮವಾರ ನಗರಕ್ಕೆ ಆಗಮಿಸಲಿದ್ದಾರೆ. ಮೋದಿ ಅಕ್ಟೋಬರ್‌ 6ರಂದು ಆಗಮಿಸಿ ಅದೇ ದಿನ ದೆಹಲಿಗೆ ವಾಪಸಾಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಅಂದಹಾಗೆ ಬೆಂಗಳೂರಿನ ಸಮೀಪದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿದಲ್ಲಿ ಬಾಷ್ ಆಧುನಿಕ ಆವಿಷ್ಕಾರಗಳ ಉತ್ಪಾದನಾ ಘಟಕವನ್ನು ಕೆಲವು ದಿನಗಳ ಹಿಂದೆ ಆರಂಭಿಸಿದೆ. ಈ ಘಟಕದಲ್ಲಿ ಡೀಸೆಲ್ ಸಿಸ್ಟಂ ಡಿವಿಜನ್ ಗಳಿಗೆ ಬೇಕಾಗುವ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತದೆ. ಇದು ಬಾಷ್ ಲಿಮಿಟೆಡ್ ನ ಒಂದು ಅಂಗ ಸಂಸ್ಥೆಯಾಗಿದ್ದು, ಬಾಷ್ ಇಂಡಿಯಾ ಕಂಪನಿಯ ಭಾಗವಾಗಿದೆ.

English summary
Prime Minister Narendra Modi and Chancellor of the Federal Republic of Germany Angela Merkel will be participating jointly in two programmes in the Bengaluru city on October 6. Both leaders will be visiting the Bosch Factory at Adugodi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X